ಸ್ಯಾಂಡಲ್‌ವುಡ್‌ನಲ್ಲೀಗ ಮದುವೆ ಸೀಸನ್; ಜಯಮಾಲಾ ಪುತ್ರಿಯ ಮದುವೆ, ರಾಣಾ ಕಲ್ಯಾಣ, ಶೀಘ್ರದಲ್ಲಿ ಧನಂಜಯ್- ಧನ್ಯತಾ ವಿವಾಹ
- Sandalwood Celebrities Wedding: ಸ್ಯಾಂಡಲ್‌ವುಡ್‌ನಲ್ಲೀಗ ಮದುವೆ ಸೀಸನ್ ಶುರುವಾಗಿದೆ. ಅಂದರೆ ಸಾಲು ಸಾಲು ಸಿನಿಮಾ ಸೆಲೆಬ್ರಿಟಿಗಳು, ದಾಂಪತ್ಯಕ್ಕೆ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಮದುವೆ ತಯಾರಿ ಶುರುವಾಗಿದ್ದು, ಚಪ್ಪರ ಶಾಸ್ತ್ರ, ಅರಿಶಿಣ ಶಾಸ್ತ್ರ ಮುಗಿದು, ಅದ್ಧೂರಿ ವಿವಾಹವೂ ನೆರವೇರಿದೆ. ಇಲ್ಲಿದೆ ನೋಡಿ ಆ ಜೋಡಿಗಳ ಮದುವೆ ಪೋಟೋಗಳು.

(1 / 6)
ಚಂದನವನದ ತಾರೆಯರೀಗ 2025ರ ಆರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆ ಪೈಕಿ ಡಾಲಿ ಧನಂಜಯ್ ಮತ್ತು ಧನ್ಯತಾ ಜೋಡಿ ಇದೇ ತಿಂಗಳ 16ರಂದು ದಾಂಪತ್ಯಕ್ಕೆ ಕಾಲಿಡಲಿದ್ದಾರೆ. ಇತ್ತ ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಅವರ ವಿವಾಹ ನೆರವೇರಿದೆ. ಹಿರಿಯ ನಟಿ ಜಯಮಾಲಾ ಅವರ ಸುಪುತ್ರಿ ಸೌಂದರ್ಯ ಸಹ ಸಪ್ತಪದಿ ತುಳಿದಿದ್ದಾರೆ. ಇಲ್ಲಿವೆ ನೋಡಿ ದಾಂಪತ್ಯಕ್ಕೆ ಕಾಲಿಟ್ಟ ಮತ್ತು ಇನ್ನೇನು ಶೀಘ್ರದಲ್ಲಿ ಇಡಲಿರುವ ಜೋಡಿಗಳ ಫೋಟೋಗಳು.
(2 / 6)
ಬೆಂಗಳೂರಿನ ರೋಹಿಣಿ ಮತ್ತು ಕೆ ರಾಮಚಂದ್ರ ರಾವ್ ದಂಪತಿಯ ಸುಪುತ್ರ ರುಷಬ್ ಅವರ ಜತೆಗೆ ಸೌಂದರ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಮತ್ತು ನಾಳೆ (ಫೆ.7 ಮತ್ತು 8ರಂದು) ಬೆಂಗಳೂರಿನ ಅರಮನೆ ಮೈದಾನಲ್ಲಿ ಈ ಜೋಡಿಯ ಮದುವೆ ನಡೆಯುತ್ತಿದೆ.
(3 / 6)
ಸೌಂದರ್ಯ ಮತ್ತು ರುಷಬ್ ಮದುವೆ ಸಂಭ್ರಮದಲ್ಲಿ ಹಿರಿಯ ನಟಿಯರಾದ ಶ್ರುತಿ ಮತ್ತು ಮಾಳವಿಕಾ ಅವಿನಾಶ್ ಮದರಂಗಿ ಖುಷಿ.
(4 / 6)
ಅರಿಶಿಣ ಶಾಸ್ತ್ರದ ಸಂದರ್ಭದಲ್ಲಿ ಅಳಿಯನಿಗೆ ಅರಿಶಿಣ ಹಚ್ಚಿ ಅಕ್ಷತೆ ಹಾಕಿದ ಪ್ರೇಮ್. ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ, ರಕ್ಷಿತಾ ಎಂಬುವವರನ್ನು ವರಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಜೋಡಿಯ ವಿವಾಹ ನೆರವೇರಿದ್ದು, ಸ್ಯಾಂಡಲ್‌ವುಡ್‌ನ ಗಣ್ಯರು ನವ ಜೋಡಿಗೆ ಶುಭ ಹಾರೈಸಿದೆ.
(5 / 6)
ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ, ರಕ್ಷಿತಾ ಎಂಬುವವರನ್ನು ವರಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಜೋಡಿಯ ವಿವಾಹ ನೆರವೇರಿದ್ದು, ಸ್ಯಾಂಡಲ್‌ವುಡ್‌ನ ಗಣ್ಯರು ನವ ಜೋಡಿಗೆ ಶುಭ ಹಾರೈಸಿದೆ.
ಇತರ ಗ್ಯಾಲರಿಗಳು