ಐಪಿಎಲ್​ ಆರಂಭಕ್ಕೂ ಮುನ್ನ ಋತುರಾಜ್ ಗಾಯಕ್ವಾಡ್ ಸೇರಿ ಅರ್ಧ ಡಜನ್ ನಾಯಕರ ಬದಲಾವಣೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್​ ಆರಂಭಕ್ಕೂ ಮುನ್ನ ಋತುರಾಜ್ ಗಾಯಕ್ವಾಡ್ ಸೇರಿ ಅರ್ಧ ಡಜನ್ ನಾಯಕರ ಬದಲಾವಣೆ

ಐಪಿಎಲ್​ ಆರಂಭಕ್ಕೂ ಮುನ್ನ ಋತುರಾಜ್ ಗಾಯಕ್ವಾಡ್ ಸೇರಿ ಅರ್ಧ ಡಜನ್ ನಾಯಕರ ಬದಲಾವಣೆ

Indian Premier League 2024: 17ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಅರ್ಧಕ್ಕರ್ಧ ಕ್ಯಾಪ್ಟನ್​​​ಗಳ ಬದಲಾವಣೆಯಾಗಿದೆ. ಹಾಗಾದರೆ ಯಾವ ತಂಡಗಳ ನಾಯಕರು ಬದಲಾಗಿದ್ದಾರೆ ಎಂಬುದನ್ನು ಈ ಮುಂದೆ ತಿಳಿಯೋಣ.

2024ರ ಐಪಿಎಲ್​ನಲ್ಲಿ ಒಂದು ತಂಡವಲ್ಲ, ಆರು ಫ್ರಾಂಚೈಸಿಗಳು ತಮ್ಮ ನಾಯಕರನ್ನು ಬದಲಾಯಿಸಿವೆ. 2023ರ ಆವೃತ್ತಿಯಲ್ಲಿ ಆರು ತಂಡಗಳನ್ನು ಮುನ್ನಡೆಸಿದ್ದ ನಾಯಕರನ್ನು ಈ ಬಾರಿ ಬದಲಾವಣೆ ಮಾಡಲಾಗಿದೆ. ಈ ಪೈಕಿ ಐಪಿಎಲ್​​ಗೂ ಮುನ್ನ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕನನ್ನು ಬದಲಿಸಿದ 6ನೇ ತಂಡವಾಗಿದೆ.
icon

(1 / 10)

ಸಿಎಸ್​​ಕೆ ತಂಡಕ್ಕೂ ಮುನ್ನ ಗುಜರಾತ್ ಟೈಟಾನ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗಳು ಕ್ಯಾಪ್ಟನ್ಸ್ ಬದಲಿಸಿವೆ. 
icon

(2 / 10)

ಸಿಎಸ್​ಕೆ, ಎಸ್​ಆರ್​ಹೆಚ್, ಮುಂಬೈ, ಗುಜರಾತ್ ತಂಡಗಳು ನೂತನ ನಾಯಕನನ್ನು ಕಣಕ್ಕಿಳಿಸಿದರೆ, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಹಳೆಯ ತಂಡದ ನಾಯಕನನ್ನ ಮರಳಿ ಕರೆತಂದಿವೆ.
icon

(3 / 10)

ಎಂಎಸ್ ಧೋನಿ ಐಪಿಎಲ್ 2024ರ ಆರಂಭಕ್ಕೂ ಮುನ್ನಾದಿನದಂದು ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಬದಲಾಗಿ ಋತುರಾಜ್ ಗಾಯಕ್ವಾಡ್ ನೂತನ ನಾಯಕನಾಗಿ ನೇಮಕವಾಗಿದ್ದಾರೆ. ಧೋನಿ ಅವರೇ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಿಎಸ್‌ಕೆ ಫ್ರಾಂಚೈಸಿ ಸ್ಪಷ್ಟಪಡಿಸಿದೆ.
icon

(4 / 10)

ಗಾಯದ ಸಮಸ್ಯೆಯಿಂದಾಗಿ 2023ರ ಐಪಿಎಲ್ ಕಳೆದುಕೊಂಡಿದ್ದ ಶ್ರೇಯಸ್ ಅಯ್ಯರ್, ಈ ಬಾರಿ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡದ ನಾಯಕನಾಗಿ ಮರಳಿದ್ದಾರೆ. ಅಯ್ಯರ್​ ಅಲಭ್ಯತೆಯಲ್ಲಿ ಕಳೆದ ಬಾರಿ ನಿತೀಶ್ ರಾಣಾ ತಂಡವನ್ನು ಮುನ್ನಡೆಸಿದ್ದರು. 2022ರ ಐಪಿಎಲ್ ನಂತರ ಶ್ರೇಯಸ್ ಮತ್ತೆ ಕೆಕೆಆರ್ ಅನ್ನು ಮುನ್ನಡೆಸಲಿದ್ದಾರೆ.
icon

(5 / 10)

ಐದು ಟ್ರೋಫಿ ಗೆದ್ದುಕೊಟ್ಟಿದ್ದ ರೋಹಿತ್​ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್​ ಪಾಂಡ್ಯಗೆ ಮುಂಬೈ ಇಂಡಿಯನ್ಸ್ ಪಟ್ಟ ಕಟ್ಟಲಾಗಿದೆ. ಹಾರ್ದಿಕ್​ ಟ್ರೇಡ್​ ಮೂಲಕ ಗುಜರಾತ್ ಟೈಟಾನ್ಸ್ ತಂಡದಿಂದ ಮುಂಬೈ ಸೇರಿದ್ದಾರೆ. ಹಾರ್ದಿಕ್​​ಗೆ ಅವಕಾಶ ನೀಡಿ ಜಸ್​ಪ್ರೀತ್ ಬುಮ್ರಾ ಅವರನ್ನು ಕಡೆಗಣಿಸಲಾಯಿತು.
icon

(6 / 10)

ಗುಜರಾತ್ ಟೈಟಾನ್ಸ್ ತಂಡ ತೊರೆದ ಮುಂಬೈ ಸೇರಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಜಾಗಕ್ಕೆ ನೂತನ ನಾಯಕನಾಗಿ ಶುಭ್ಮನ್ ಗಿಲ್ ಅವರನ್ನು ನೇಮಕ ಮಾಡಲಾಗಿದೆ. ಕೇನ್ ವಿಲಿಯಮ್ಸನ್, ರಶೀದ್ ಖಾನ್ ಇದ್ದರೂ ಅನಾನುಭವಿ ಯುವ ಆಟಗಾರನಿಗೆ ಅವಕಾಶ ನೀಡಿ ಗುಜರಾತ್ ಅಗ್ನಿ ಪರೀಕ್ಷೆಗೆ ಇಳಿದಿದೆ.
icon

(7 / 10)

ಕಾರು ಅಪಘಾತದ ನಂತರ 2023ರ ಐಪಿಎಲ್​ನಿಂದ ಹೊರ ಬಿದ್ದಿದ್ದ ರಿಷಭ್ ಪಂತ್ ಅವರ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದರು. ನಿರೀಕ್ಷೆಯಂತೆ, ರಿಷಭ್ ಚೇತರಿಸಿಕೊಂಡ ನಂತರ ಐಪಿಎಲ್​ಗೆ ಮರಳಿದ್ದಾರೆ.
icon

(8 / 10)

ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿ ಏಡನ್ ಮಾರ್ಕ್ರಮ್ ಬದಲಿಗೆ ಏಕದಿನ ವಿಶ್ವಕಪ್ ವಿಜೇತ ಪ್ಯಾಟ್ ಕಮಿನ್ಸ್​​ಗೆ ಪಟ್ಟ ಕಟ್ಟಲಾಗಿದೆ. ಕಳೆದ ಬಾರಿ ಮಾರ್ಕ್ರಮ್ ನಾಯಕತ್ವದಲ್ಲಿ ಹೈದರಾಬಾದ್ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. 
icon

(9 / 10)

ರಾಜಸ್ಥಾನ್, ಲಕ್ನೋ, ಆರ್‌ಸಿಬಿ ಮತ್ತು ಪಂಜಾಬ್ ಈ ವರ್ಷ ನಾಯಕರನ್ನು ಬದಲಾಯಿಸಿಲ್ಲ. ಕ್ರಮವಾಗಿ ಸಂಜು ಸ್ಯಾಮ್ಸನ್, ಕೆಎಲ್ ರಾಹುಲ್, ಫಾಫ್ ಡು ಪ್ಲೆಸಿಸ್ ಮತ್ತು ಶಿಖರ್ ಧವನ್ ಮುನ್ನಡೆಸಲಿದ್ದಾರೆ.
icon

(10 / 10)

ಇತರ ಗ್ಯಾಲರಿಗಳು