ಮೂವರು ಬಲಿಷ್ಠ ಬೌಲರ್‌ಗಳಿಗೆ ಗೇಟ್‌ಪಾಸ್;‌ ಆರ್‌ಸಿಬಿ ಕೈಬಿಟ್ಟ, ಉಳಿಸಿಕೊಂಡ ಆಟಗಾರರ ಪಟ್ಟಿ ಹೀಗಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೂವರು ಬಲಿಷ್ಠ ಬೌಲರ್‌ಗಳಿಗೆ ಗೇಟ್‌ಪಾಸ್;‌ ಆರ್‌ಸಿಬಿ ಕೈಬಿಟ್ಟ, ಉಳಿಸಿಕೊಂಡ ಆಟಗಾರರ ಪಟ್ಟಿ ಹೀಗಿದೆ

ಮೂವರು ಬಲಿಷ್ಠ ಬೌಲರ್‌ಗಳಿಗೆ ಗೇಟ್‌ಪಾಸ್;‌ ಆರ್‌ಸಿಬಿ ಕೈಬಿಟ್ಟ, ಉಳಿಸಿಕೊಂಡ ಆಟಗಾರರ ಪಟ್ಟಿ ಹೀಗಿದೆ

  • RCB Released players: ಐಪಿಎಲ್‌ 2024ರ ಮಿನಿ ಹರಾಜು ಪ್ರಕ್ರಿಯೆಗೂ ಮುನ್ನ, ಆಟಗಾರರ ರಿಟೆನ್ಷನ್‌ ಮತ್ತು ರಿಲೀಸ್‌ ಪ್ರಕ್ರಿಯೆಗೆ ನವೆಂಬರ್‌ 26ರ ಗಡುವು ನೀಡಲಾಗಿತ್ತು. ಅದರಂತೆ ಫ್ರಾಂಚೈಸಿಗಳು ಉಳಿಸಿಕೊಂಡ ಮತ್ತು ತಂಡದಿಂದ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ ಪ್ರಕಟಿಸಿದೆ. ಇದರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ರಿಲೀಸ್‌ ಮಾಡಿದ ಆಟಗಾರರ ಪಟ್ಟಿ ಹೀಗಿದೆ.

ಆರ್‌ಸಿಬಿ ತಂಡವು ತನ್ನ ಬೌಲಿಂಗ್‌ ಘಟಕವನ್ನು ಸಂಪೂರ್ಣವಾಗಿ ಮರುರೂಪಿಸಬೇಕಾಗಿದೆ. ಈವರೆಗೆ ಬೌಲಿಂಗ್‌ನಲ್ಲಿ ತಂಡದ ಬಲವಾಗಿದ್ದ ವನಿಂದು ಹಸರಂಗ, ಹರ್ಷಲ್‌ ಪಟೇಲ್ ಮತ್ತು ಜೋಶ್ ಹೇಜಲ್‌ವುಡ್ ಅವರನ್ನು ತಂಡವು ಕೈಬಿಟ್ಟಿದೆ. ಹೀಗಾಗಿ ಮುಂದಿನ ಹರಾಜು ಪ್ರಕ್ರಿಯೆಯಲ್ಲಿ ತಂಡವು ಬಲಿಷ್ಠ ಆಟಗಾರರನ್ನು ಖರೀದಿ ಮಾಡಬೇಕಾಗಿದೆ.
icon

(1 / 7)

ಆರ್‌ಸಿಬಿ ತಂಡವು ತನ್ನ ಬೌಲಿಂಗ್‌ ಘಟಕವನ್ನು ಸಂಪೂರ್ಣವಾಗಿ ಮರುರೂಪಿಸಬೇಕಾಗಿದೆ. ಈವರೆಗೆ ಬೌಲಿಂಗ್‌ನಲ್ಲಿ ತಂಡದ ಬಲವಾಗಿದ್ದ ವನಿಂದು ಹಸರಂಗ, ಹರ್ಷಲ್‌ ಪಟೇಲ್ ಮತ್ತು ಜೋಶ್ ಹೇಜಲ್‌ವುಡ್ ಅವರನ್ನು ತಂಡವು ಕೈಬಿಟ್ಟಿದೆ. ಹೀಗಾಗಿ ಮುಂದಿನ ಹರಾಜು ಪ್ರಕ್ರಿಯೆಯಲ್ಲಿ ತಂಡವು ಬಲಿಷ್ಠ ಆಟಗಾರರನ್ನು ಖರೀದಿ ಮಾಡಬೇಕಾಗಿದೆ.(PTI)

ಆರ್‌ಸಿಬಿ ತಂಡವು ಮುಂದಿನ ಆವೃತ್ತಿಯ ಐಪಿಎಲ್‌ಗೂ ಮುನ್ನ ಒಟ್ಟು 11 ಆಟಗಾರರನ್ನು ರಿಲೀಸ್‌ ಮಾಡಿದೆ. ಇದೇ ವೇಳೆ ಶಹಬಾಜ್‌ ಅಹ್ಮದ್‌ ಬದಲಿಗೆ ಮಯಾಂಕ್ ಡಾಗರ್ ಅವರನ್ನು ಟ್ರೇಡ್‌ ಮಾಡಿದೆ.
icon

(2 / 7)

ಆರ್‌ಸಿಬಿ ತಂಡವು ಮುಂದಿನ ಆವೃತ್ತಿಯ ಐಪಿಎಲ್‌ಗೂ ಮುನ್ನ ಒಟ್ಟು 11 ಆಟಗಾರರನ್ನು ರಿಲೀಸ್‌ ಮಾಡಿದೆ. ಇದೇ ವೇಳೆ ಶಹಬಾಜ್‌ ಅಹ್ಮದ್‌ ಬದಲಿಗೆ ಮಯಾಂಕ್ ಡಾಗರ್ ಅವರನ್ನು ಟ್ರೇಡ್‌ ಮಾಡಿದೆ.(PTI)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಬಿಡುಗಡೆಯಾದ ಆಟಗಾರರು: ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹೇಜಲ್‌ವುಡ್, ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ದಾರ್ಥ್ ಕೌಲ್, ಕೇದಾರ್ ಜಾಧವ್.
icon

(3 / 7)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಬಿಡುಗಡೆಯಾದ ಆಟಗಾರರು: ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹೇಜಲ್‌ವುಡ್, ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ದಾರ್ಥ್ ಕೌಲ್, ಕೇದಾರ್ ಜಾಧವ್.(PTI)

ಆರ್‌ಸಿಬಿ ಉಳಿಸಿಕೊಂಡಿರುವ ಆಟಗಾರರು: ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಟೀದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ವೈಶಾಕ್ ವಿಜಯ್‌ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್.
icon

(4 / 7)

ಆರ್‌ಸಿಬಿ ಉಳಿಸಿಕೊಂಡಿರುವ ಆಟಗಾರರು: ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಟೀದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ವೈಶಾಕ್ ವಿಜಯ್‌ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್.(PTI)

ಸಹಜವಾಗಿಯೇ ಹಸರಂಗ, ಹೇಜಲ್‌ವುಡ್, ಬ್ರೇಸ್‌ವೆಲ್ ಸೇರಿದಂತೆ ಹಲವರ ರಿಲೀಸ್‌ ಮಾಡಿರುವುದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.
icon

(5 / 7)

ಸಹಜವಾಗಿಯೇ ಹಸರಂಗ, ಹೇಜಲ್‌ವುಡ್, ಬ್ರೇಸ್‌ವೆಲ್ ಸೇರಿದಂತೆ ಹಲವರ ರಿಲೀಸ್‌ ಮಾಡಿರುವುದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.(PTI)

ಐಪಿಎಲ್ 2024ರ ಹರಾಜು ಪ್ರಕ್ರಿಯೆಯು ಡಿಸೆಂಬರ್ 19ರಂದು ದುಬೈನ ಕೋಕಾ-ಕೋಲಾ ಅರೆನಾದಲ್ಲಿ ನಡೆಯಲಿದೆ. ಪ್ರತಿ ಫ್ರಾಂಚೈಸಿಯು ತಲಾ 100 ಕೋಟಿ ರೂಪಾಯಿ ಮೊತ್ತವನ್ನು ಆಟಗಾರರಿಗೆ ಖರೀದಿಗೆ ಬಳಸಬಹುದು. ಹಿಂದಿನ ವರ್ಷ ಈ ಮೊತ್ತವು 95 ಕೋಟಿ ರೂಪಾಯಿ ಆಗಿತ್ತು. ಈ ಬಾರಿ 5 ಕೋಟಿ ರೂಪಾಯಿ ಹೆಚ್ಚಿಸಲಾಗಿದೆ.
icon

(6 / 7)

ಐಪಿಎಲ್ 2024ರ ಹರಾಜು ಪ್ರಕ್ರಿಯೆಯು ಡಿಸೆಂಬರ್ 19ರಂದು ದುಬೈನ ಕೋಕಾ-ಕೋಲಾ ಅರೆನಾದಲ್ಲಿ ನಡೆಯಲಿದೆ. ಪ್ರತಿ ಫ್ರಾಂಚೈಸಿಯು ತಲಾ 100 ಕೋಟಿ ರೂಪಾಯಿ ಮೊತ್ತವನ್ನು ಆಟಗಾರರಿಗೆ ಖರೀದಿಗೆ ಬಳಸಬಹುದು. ಹಿಂದಿನ ವರ್ಷ ಈ ಮೊತ್ತವು 95 ಕೋಟಿ ರೂಪಾಯಿ ಆಗಿತ್ತು. ಈ ಬಾರಿ 5 ಕೋಟಿ ರೂಪಾಯಿ ಹೆಚ್ಚಿಸಲಾಗಿದೆ.(PTI)

ಸದ್ಯ ಆಟಗಾರರ ರಿಲೀಸ್‌ ಬಳಿಕ ಆರ್‌ಸಿಬಿ ಬಳಿ 40.75 ಕೋಟಿ ರೂಪಾಯಿ ಪರ್ಸ್‌ ಉಳಿದಿದೆ. ಇದರೊಂದಿಗೆ ಹೆಚ್ಚುವರಿ 5 ಕೋಟಿಯನ್ನು ಮುಂದಿನ ಹರಾಜು ವೇಳೆ ಬಳಸಬಹುದಾಗಿದೆ.
icon

(7 / 7)

ಸದ್ಯ ಆಟಗಾರರ ರಿಲೀಸ್‌ ಬಳಿಕ ಆರ್‌ಸಿಬಿ ಬಳಿ 40.75 ಕೋಟಿ ರೂಪಾಯಿ ಪರ್ಸ್‌ ಉಳಿದಿದೆ. ಇದರೊಂದಿಗೆ ಹೆಚ್ಚುವರಿ 5 ಕೋಟಿಯನ್ನು ಮುಂದಿನ ಹರಾಜು ವೇಳೆ ಬಳಸಬಹುದಾಗಿದೆ.(PTI)


ಇತರ ಗ್ಯಾಲರಿಗಳು