Gadag News: ಮಠದ ಉತ್ತರಾಧಿಕಾರಿ ವಿಚಾರದಲ್ಲಿ ಹಿರಿಯ, ಕಿರಿಯ ಶ್ರೀಗಳ ನಡುವೆ ಗುದ್ದಾಟ; ಶಿವಾನಂದ ಮಠದ ಜಾತ್ರೆ ರದ್ದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Gadag News: ಮಠದ ಉತ್ತರಾಧಿಕಾರಿ ವಿಚಾರದಲ್ಲಿ ಹಿರಿಯ, ಕಿರಿಯ ಶ್ರೀಗಳ ನಡುವೆ ಗುದ್ದಾಟ; ಶಿವಾನಂದ ಮಠದ ಜಾತ್ರೆ ರದ್ದು

Gadag News: ಮಠದ ಉತ್ತರಾಧಿಕಾರಿ ವಿಚಾರದಲ್ಲಿ ಹಿರಿಯ, ಕಿರಿಯ ಶ್ರೀಗಳ ನಡುವೆ ಗುದ್ದಾಟ; ಶಿವಾನಂದ ಮಠದ ಜಾತ್ರೆ ರದ್ದು

  • ಉತ್ತರ ಕರ್ನಾಟಕದ ಪ್ರಸಿದ್ಧ ಶಿವಾನಂದ ಮಠದ ಹಿರಿಯ ಹಾಗೂ ಕಿರಿಯ ಸ್ವಾಮೀಜಿಗಳ ನಡುವಿನ ಗುದ್ದಾಟದ ಪರಿಣಾಮವಾಗಿ ಶಿವಾನಂದ ಬೃಹನ್ಮಠದ ಜಾತ್ರಾ ಮಹೋತ್ಸವ ರದ್ದಾಗಿದೆ. ಇದರ ವಿವರ ಇಲ್ಲಿದೆ.

ಗದಗದಲ್ಲಿರುವ ಶಿವಾನಂದ ಮಠದ ಹಿರಿಯ ಹಾಗೂ ಕಿರಿಯ ಶ್ರೀಗಳ ನಡುವಿನ ಕಿತ್ತಾಟದಿಂದಾಗಿ ಮುಂಜಾಗ್ರತಾ ಕ್ರಮವಾಗಿ ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಅವರು ಮಾರ್ಚ್ 8ರ ಶುಕ್ರವಾರ ನಡೆಯಬೇಕಿದ್ದ ಶಿವಾನಂದ ಬೃಹನ್ಮಠದ ಜಾತ್ರೆಯನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ. (ಫೋಟೊ-ಜಗದ್ಗುರು ಶಿವಾನಂದ ಮಠ ಗದಗ)
icon

(1 / 6)

ಕಿರಿಯ ಶ್ರೀಗಳಾದ ಸದಾಶಿವನಂದ ಮಹಾಸ್ವಾಮೀಜಿ ಅವರನ್ನು ಹೊರಗಿಟ್ಟು ಹಿರಿಯ ಶ್ರೀಗಳಾದ ಅಭಿನವ ಶಿವಾನಂದ ಮಹಾಸ್ವಾಮೀಜಿಗಳು ಜಾತ್ರೆ ನಡೆಸಲು ಮುಂದಾಗಿದ್ದರು. ಇದಕ್ಕೆ ಕಿರಿಯ ಶ್ರೀಗಳ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ಹಿರಿಯ ಶ್ರೀಗಳ ಬಳಿಗೆ ತೆರಳಿ ಇಬ್ಬರೂ ಸೇರಿ ಜಾತ್ರೆಯನ್ನು ನಡೆಸುವಂತೆ ಮನವಿ ಮಾಡಿಕೊಂಡಿದ್ದರು. (ಫೋಟೊ-ಜಗದ್ಗುರು ಶಿವಾನಂದ ಮಠ ಗದಗ)
icon

(2 / 6)

ಹಿರಿಯ ಶ್ರೀಗಳು ಭಕ್ತರ ಮನವಿಯನ್ನು ಒಪ್ಪದ ಕಾರಣ ಎರಡು ಕಡೆಯವರ ನಡುವೆ ತೀವ್ರ ವಾಗ್ವಾದವಾಗಿದೆ. ಪರಿಣಾಮ ಶುಕ್ರವಾರ ನಡೆಯಬೇಕಿದ್ದ ಜಾತ್ರೆ, ಶನಿವಾರ ನಡೆಯಬೇಕಿದ್ದ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ರಥೋತ್ಸಗಳನ್ನು ತಹಸೀಲ್ದಾರ್ ರದ್ದು ಮಾಡಿದ್ದಾರೆ. (ಫೋಟೊ-ಜಗದ್ಗುರು ಶಿವಾನಂದ ಮಠ ಗದಗ)
icon

(3 / 6)

ನಾಲ್ಕು ವರ್ಷಗಳ ಹಿಂದೆ ಶಿವಾನಂದ ಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದ ಘೋಡಗೇರಿ ಶಾಖಾ ಮಠದ ಕೈವಲ್ಯಾನಂದ ಶ್ರೀಗಳನ್ನು (ಸದಾಶಿವನಂದ ಸ್ವಾಮೀಜಿ) ಹಿರಿಯ ಸ್ವಾಮೀಜಿ ಪದಚ್ಯುತಿಗೊಳಿಸಿದ್ದರು. ಈ ವಿಚಾರ ಕೋರ್ಟ್ ಮೇಟಿಲ್ಲೇರಿತ್ತು. ಕಿರಿಯ ಶ್ರೀಗಳ ಹಕ್ಕುಗಳಿಗೆ ಧಕ್ಕೆಯಾಗದಂತೆ ಮಠದ ಆಡಳಿತ ನಡೆಯಬೇಕೆಂದು ಕೋರ್ಟ್ ಆದೇಶ ನೀಡಿತ್ತು. ಅಂದಿನಿಂದ ಉತ್ತರಾಧಿಕಾರಿ ವಿಚಾರವಾಗಿ ಇಬ್ಬರು ಸ್ವಾಮೀಜಿಗಳ ನಡುವೆ ಗುದ್ದಾಟ ನಡೆಯುತ್ತಲೇ ಇದೆ. (ಫೋಟೊ-ಜಗದ್ಗುರು ಶಿವಾನಂದ ಮಠ ಗದಗ)
icon

(4 / 6)

ಪರಂಪರೆಯಂತೆ ತಾವೊಬ್ಬರೇ ಕಿರೀಟ ಪೂಜೆ, ರಥೋತ್ಸವ, ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಕೂಡಬೇಕು. ತಾವೊಬ್ಬರೇ ಎಲ್ಲಾ ಕಾರ್ಯಮಕ್ರಗಳ ಸಾನಿಧ್ಯ ವಹಿಸಬೇಕೆಂದು ಹಿರಿಯ ಶ್ರೀಗಳು ಪಟ್ಟು ಹಿಡಿದಿರುವುದೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಸದ್ಯ ಮಠ ಮುಂದೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. (ಫೋಟೊ-ಜಗದ್ಗುರು ಶಿವಾನಂದ ಮಠ ಗದಗ)
icon

(5 / 6)

ಧರ್ಮ, ಅಧ್ಯಾತ್ಮ, ರಂಗೋಲಿ, ಹಬ್ಬ, ಗ್ರಹಗತಿ, ಜ್ಯೋತಿಷ್ಯ, ಭವಿಷ್ಯ… ಇಷ್ಟೇ ಇಲ್ಲ ಇನ್ನೂ ಸಾಕಷ್ಟು ಇದೆ. ಧಾರ್ಮಿಕ ವಿಚಾರಗಳ ಬಗ್ಗೆ ನೀವು ತಿಳಿಯ ಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿದಿನ ಓದಿ, ನೋಡಿ. ನಿಮ್ಮವರಿಗೂ ಶೇರ್ ಮಾಡಿ. 
icon

(6 / 6)

ಇತರ ಗ್ಯಾಲರಿಗಳು