ಸ್ಯಾಮ್ಸಂಗ್ ಗ್ಯಾಲಕ್ಸಿ ಫಿಟ್ 3 ಸ್ಮಾರ್ಟ್ ವಾಚ್ ಬಿಡುಗಡೆ; ಬೆಲೆ, ವೈಶಿಷ್ಟ್ಯಗಳ ವಿವರ ಇಲ್ಲಿದೆ -Samsung Galaxy Fit 3
Samsung Galaxy Fit 3: ಸ್ಯಾಮ್ಸಂಗ್ ಗ್ಯಾಲಕ್ಸಿ ಫಿಟ್ 3 ವಾಚ್ ಬಿಡುಗಡೆಯಾಗಿದೆ. ಆರೋಗ್ಯಕರ ಜೀವನಶೈಲಿಯನ್ನ ಪ್ರೇರೇಪಿಸಲು ವಿನ್ಯಾಸಗೊಳಿಸಲಾದ ಫಿಟ್ನೆಸ್ ಟ್ರ್ಯಾಕರ್‌ನ ಬೆಲೆ ಜೊತೆಗೆ ವೈಶಿಷ್ಟ್ಯಗಳನ್ನ ತಿಳಿಯಿರಿ.
(1 / 5)
1. ಸ್ಯಾಮ್ಸಂಗ್ ಗ್ಯಾಲಕ್ಸಿ ಫಿಟ್ 3 ಇತ್ತೀಚಿನ ಸ್ಯಾಮ್ಸಂಗ್ ಫಿಟ್ನೆಸ್ ಟ್ರ್ಯಾಕರ್ ಆಗಿದೆ. ಎಲ್ಲರಿಗೂ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಸುಧಾರಿತ ಆರೋಗ್ಯ ಮೇಲ್ವಿಚಾರಣಾ ತಂತ್ರಜ್ಞಾನವನ್ನು ಜನರಿಗೆ ನೀಡುವ ಗುರಿ ಹೊಂದಲಾಗಿದೆ ಎಂದು ಸ್ಯಾಮ್ಸಂಗ್ ಹೇಳಿದೆ. ಈ ವಾಚ್ ಅಲ್ಯೂಮಿನಿಯಂ ಬಾಡಿ ಮತ್ತು 24/7 ಮಣಿಕಟ್ಟಿನಿಂದ ನೇರವಾಗಿ ಆರೋಗ್ಯ ಮತ್ತು ಸ್ವಾಸ್ಥ್ಯ ಡೇಟಾವನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ವಿಶಾಲವಾದ ಡಿಸ್‌ಪ್ಲೇಯನ್ನ ಹೊಂದಿದೆ.
(2 / 5)
2. ವಿನ್ಯಾಸ ಮತ್ತು ಡಿಸ್‌ಪ್ಲೇ: ನಯವಾದ ಅಲ್ಯೂಮಿನಿಯಂ ಬಾಡಿ ಮತ್ತು 1.6-ಇಂಚಿನ ಡಿಸ್‌ಪ್ಲೇ ಜೊತೆಗೆ ಹಿಂದಿನದಕ್ಕಿಂತ ಶೇಕಡಾ 45 ರಷ್ಟು ಅಗಲವಿದ್ದು, ಗ್ಯಾಲಕ್ಸಿ ಫಿಟ್ 3 ದೈನಂದಿನ ಡ್ರೆಸ್‌ಗೆ ಸೊಗಸಾದ ಮತ್ತು ಆರಾಮದಾಯಕ ಫಿಟ್ ಅನ್ನು ನೀಡುತ್ತದೆ. ಹಗುರವಾದ ವಿನ್ಯಾಸ ಮತ್ತು 13 ದಿನಗಳವರೆಗೆ ದೀರ್ಘ ಬ್ಯಾಟರಿ ಬಾಳಿಕೆ ಬಳಕೆಯ ಸಾಮರ್ಥ್ಯವನ್ನು ಹೊಂದಿದೆ.(Samsung)
(3 / 5)
3. ಸಮಗ್ರ ಆರೋಗ್ಯ ಮೇಲ್ವಿಚಾರಣೆ: ಗೊರಕೆ ಪತ್ತೆ ಮತ್ತು ರಕ್ತದ ಆಮ್ಲಜನಕದ ಮಟ್ಟದ ಮೇಲ್ವಿಚಾರಣೆಯಂತಹ ವೈಶಿಷ್ಟ್ಯಗಳೊಂದಿಗೆ ಸುಧಾರಿತ ನಿದ್ರೆಯ ಟ್ರ್ಯಾಕಿಂಗ್ ಸೇರಿದಂತೆ ಸಮಗ್ರ ಆರೋಗ್ಯ ಮೇಲ್ವಿಚಾರಣೆಗೆ ಗ್ಯಾಲಕ್ಸಿ ಫಿಟ್ 3 ಆದ್ಯತೆ ನೀಡುತ್ತದೆ. 100 ಕ್ಕೂ ಹೆಚ್ಚು ರೀತಿಯ ವ್ಯಾಯಾಮಗಳನ್ನು ಟ್ರ್ಯಾಕ್ ಮಾಡಬಹುದು. ಹೃದಯ ಬಡಿತ ಮತ್ತು ಒತ್ತಡದ ಮಟ್ಟಗಳಂತಹ ಆರೋಗ್ಯ ಮಾಪನಗಳನ್ನು ಮೇಲ್ವಿಚಾರಣೆ ಮಾಡಬಹುದು. (Samsung)
(4 / 5)
4. ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಸಂಪರ್ಕ: ಫಾಲ್ ಡಿಟೆಕ್ಷನ್ ಮತ್ತು ತುರ್ತು ಎಸ್ಒಎಸ್‌ನಂತಹ ಹೊಸ ಸುರಕ್ಷತಾ ವೈಶಿಷ್ಟ್ಯಗಳು ತುರ್ತು ಸಂದರ್ಭಗಳಲ್ಲಿ ತ್ವರಿತ ವೈದ್ಯಕೀಯ ಬೆಂಬಲವನ್ನು ಸಕ್ರಿಯಗೊಳಿಸುವ ಮೂಲಕ ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸುತ್ತವೆ. ಫೈಂಡ್ ಮೈ ಫೋನ್ ವೈಶಿಷ್ಟ್ಯವು ಕಳೆದುಹೋದ ಸ್ಮಾರ್ಟ್ ಫೋನ್ ಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. (Samsung)
ಇತರ ಗ್ಯಾಲರಿಗಳು