Amazfit Active Edge: ಫೆ 27ಕ್ಕೆ ಅಮೇಜ್‌ಫಿಟ್ ಆ್ಯಕ್ಟಿವ್ ಎಡ್ಜ್ ಸ್ಮಾರ್ಟ್ ವಾಚ್ ಬಿಡುಗಡೆ; ಹೊಸ ವೈಶಿಷ್ಟ್ಯ, ಬೆಲೆ ಹೀಗಿದೆ
Amazfit Active Edge: ಭಾರತೀಯ ಮಾರುಕಟ್ಟೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ಅಮೇಜ್‌ಫಿಟ್ ಆಕ್ಟಿವ್ ಎಡ್ಜ್ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ. ಇದರ ವೈಶಿಷ್ಟ್ಯಗಳು ಮತ್ತು ಬೆಲೆಯ ವಿವರ ಇಲ್ಲಿದೆ.
(1 / 6)
ಅಮೇಜ್ ಫಿಟ್ ಆಕ್ಟಿವ್ ಎಡ್ಜ್ ಸ್ಮಾರ್ಟ್ ವಾಚ್ ಅನ್ನು ಡೈನಾಮಿಕ್ ವಿನ್ಯಾಸದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಫ್ಯಾಷನ್ ಉಡುಪಿಗೆ ಹೊಂದುವಂತೆ ವಿನ್ಯಾಸ ಮಾಡಲಾಗಿದೆ. ತುಂಬಾ ಸ್ಟೈಲಿಶ್ ಆಗಿ ಕಾಣಲು ಇಷ್ಟಪಡುವವರು ಈ ಸ್ಮಾರ್ಟ್ ವಾಚ್ ಬಳಸಬಹುದು.
(2 / 6)
ಇದು ಡ್ಯುಯಲ್-ಕಲರ್ ವಿನ್ಯಾಸ ಮತ್ತು ವಿಶಿಷ್ಟ ಪಾರದರ್ಶಕ ಸ್ಟ್ರಾಪ್‌ನೊಂದಿಗೆ ಕಾಣಿಸುತ್ತದೆ. ಇದು ಯಾವುದೇ ಶೈಲಿಯ ಡ್ರೆಸ್‌ಗೆ ಸರಿಹೊಂದುತ್ತದೆ. ನೀವು ಜಿಮಗೆ ಹೋಗುವಾಗ, ಹೊರಗಡೆ ವಾಕಿಂಗ್ ಹೋಗುವಾಗ ಅಥವಾ ಬೀಚ್ ಸುತ್ತಾಟ ನಡೆಸುವಾಗಲೂ ನಿಗೆ ಸೂಟ್ ಆಗುತ್ತದೆ.
(Amazon)(3 / 6)
ಈ ಸ್ಮಾರ್ಟ್ ವಾಚ್ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಅಮೇಜ್ ಆಕ್ಟಿವ್ ಎಡ್ಜ್ ಸಂಪೂರ್ಣವಾಗಿ ವಾಟರ್ ರೆಸಿಸ್ಟೆಂಟ್ ಆಗಿದೆ. 16 ದಿನಗಳ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ.
(4 / 6)
ಅಮೇಜ್ ಫಿಟ್ ಆಕ್ಟಿವ್ ಎಡ್ಜ್ ಸ್ಮಾರ್ಟ್‌ವಾಚ್ ಇಂಟಿಗ್ರೇಟೆಡ್ ಜಿಪಿಎಸ್, ಜಿಮ್ ವರ್ಕೌಟ್‌ಗಳು, ವ್ಯಾಯಾಮ ಇತ್ಯಾದಿಗಳಿಗಾಗಿ ವಿನ್ಯಾಸಗೊಳಿಸಲಾದ ಎಐ ಹೆಲ್ತ್ ಕೋಚ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ನಿಖರವಾದ ಜಿಪಿಎಸ್ ಟ್ರ್ಯಾಕಿಂಗ್‌ಗಾಗಿ ಇದು ಐದು ಉಪಗ್ರಹ ಸಿಸ್ಟಮ್ ಸಪೋರ್ಟ್ ಪಡೆಯುತ್ತದೆ.
(5 / 6)
ಅಮೇಜ್ ಫಿಟ್ ಆಕ್ಟಿವ್ ಎಡ್ಜ್ 2024ರ ಫೆಬ್ರವರಿ 27 ರಂದು ಬಿಡುಗಡೆಯಾಗಲಿದೆ. ಭಾರತದಲ್ಲಿ ಇದರ ಬೆಲೆ 12,999 ರೂ. ಇದು ಅಮೆಜಾನ ಅಧಿಕೃತ ಅಮೇಜ್ ಫಿಟ್ ವೆಬ್‌ಸೈಟ್ ಮತ್ತು ಅಧಿಕೃತ ಚಿಲ್ಲರೆ ಪಾಲುದಾರರಲ್ಲಿ ಲಭ್ಯವಿರುತ್ತದೆ.
ಇತರ ಗ್ಯಾಲರಿಗಳು