ಭಾರತ ತಂಡದ ಭವಿಷ್ಯದ ಕ್ಯಾಪ್ಟನ್ ಯಾರು? ತಲಾ ಒಬ್ಬೊಬ್ಬರ ಹೆಸರು ಸೂಚಿಸಿದ ಅಜಿತ್ ಅಗರ್ಕರ್, ಗೌತಮ್ ಗಂಭೀರ್
- India captain: ಬಿಸಿಸಿಐ ಪರಿಶೀಲನಾ ಸಭೆಯಲ್ಲಿ ನಡೆದ ಭಾರತ ತಂಡದ ಭವಿಷ್ಯದ ಕ್ಯಾಪ್ಟನ್ ಯಾರು ಎಂಬ ಚರ್ಚೆಯಲ್ಲಿ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್, ಹೆಡ್ಕೊಚ್ ಗೌತಮ್ ಗಂಭೀರ್ ತಲಾ ಒಂದೊಂದು ಹೆಸರನ್ನು ಸೂಚಿಸಿದ್ದಾರೆ.
- India captain: ಬಿಸಿಸಿಐ ಪರಿಶೀಲನಾ ಸಭೆಯಲ್ಲಿ ನಡೆದ ಭಾರತ ತಂಡದ ಭವಿಷ್ಯದ ಕ್ಯಾಪ್ಟನ್ ಯಾರು ಎಂಬ ಚರ್ಚೆಯಲ್ಲಿ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್, ಹೆಡ್ಕೊಚ್ ಗೌತಮ್ ಗಂಭೀರ್ ತಲಾ ಒಂದೊಂದು ಹೆಸರನ್ನು ಸೂಚಿಸಿದ್ದಾರೆ.
(1 / 10)
ರೋಹಿತ್ ಶರ್ಮಾ ಅಧಿಕಾರವಧಿ ಕೊನೆಗೊಳ್ಳುತ್ತಿರುವ ಕಾರಣ ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಇದರ ಬೆನ್ನಲ್ಲೇ ಭಾರತ ಕ್ರಿಕೆಟ್ ತಂಡದ ಭವಿಷ್ಯದ ನಾಯಕನ ಆಯ್ಕೆಗೆ ಸಂಬಂಧಿಸಿ ವ್ಯಾಪಕ ಚರ್ಚೆ ನಡೆಯುತ್ತಿದೆ.
(AP)(2 / 10)
ಇದೇ ಚರ್ಚೆ ಬಿಸಿಸಿಐ ಪರಿಶೀಲನಾ ಸಭೆಯಲ್ಲೂ ನಡೆದಿದ್ದು, ಹೆಡ್ ಕೋಚ್ ಗೌತಮ್ ಗಂಭೀರ್ ಅಚ್ಚರಿಯ ಹೆಸರೊಂದನ್ನು ಬಿಸಿಸಿಐ ಮುಂದಿಟ್ಟಿದ್ದಾರೆ. ಇದೇ ವೇಳೆ ಸೆಲೆಕ್ಟರ್ಸ್ ಕೂಡ ಮತ್ತೊಂದು ಹೆಸರನ್ನು ಸೂಚಿಸಿದ್ದಾರೆ.
(AFP)(3 / 10)
ಇತ್ತೀಚೆಗೆ ನಡೆದ ಬಿಸಿಸಿಐ ಪರಿಶೀಲನಾ ಸಭೆಯಲ್ಲಿ ಚರ್ಚಿಸಲಾದ ಹಲವು ವಿಷಯಗಳಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ಗೆ ಭವಿಷ್ಯದ ನಾಯಕನನ್ನು ನೇಮಿಸುವುದು ಕೂಡ ಒಂದಾಗಿತ್ತು. ರೋಹಿತ್ ಶರ್ಮಾ ಕೂಡ ಸಭೆಯಲ್ಲಿದ್ದರು ಎಂದು ವರದಿಯಾಗಿದೆ.
(ICC- X)(4 / 10)
ದೈನಿಕ್ ಜಾಗರಣ್ ವರದಿ ಪ್ರಕಾರ, ಗೌತಮ್ ಗಂಭೀರ್ ಒಬ್ಬರನ್ನು ಮತ್ತು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಮತ್ತೊಬ್ಬರನ್ನು ರೋಹಿತ್ ಉತ್ತರಾಧಿಕಾರಿಯಾಗಿ ಗುರುತಿಸಿದೆ.
(5 / 10)
ಭವಿಷ್ಯದ ನಾಯಕತ್ವಕ್ಕೆ ಪ್ರಸ್ತುತ ಹೆಡ್ಕೋಚ್ ಮತ್ತು ಸೆಲೆಕ್ಟರ್ಗಳ ಮೊದಲ ಆಯ್ಕೆ ವೇಗಿ ಜಸ್ಪ್ರೀತ್ ಬುಮ್ರಾ ಆಗಿದ್ದಾರೆ. ಆದರೆ ಅವರ ಫಿಟ್ನೆಸ್ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಪ್ಲಾನ್ ಬಿ ಎನ್ನುವಂತೆ ಬುಮ್ರಾ ಆಯ್ಕೆಯ ಜೊತೆಗೆ ಭವಿಷ್ಯದ ನಾಯಕನನ್ನು ನೇಮಿಸಲು ಇಬ್ಬರ ಹೆಸರು ರೇಸ್ಗೆ ಬಂದಿದೆ.
(AP)(6 / 10)
ಟೆಸ್ಟ್ ಕ್ರಿಕೆಟ್ನಲ್ಲಿ ನೂತನ ನಾಯಕನ ನೇಮಕಕ್ಕೆ ಸಂಬಂಧಿಸಿ ರಿಷಭ್ ಪಂತ್ ಹೆಸರನ್ನು ಸೆಲೆಕ್ಟರ್ಸ್ ಸೂಚಿಸಿದ್ದರೆ, ಯಶಸ್ವಿ ಜೈಸ್ವಾಲ್ ಹೆಸರನ್ನು ಗೌತಮ್ ಗಂಭೀರ್ ಬೆಂಬಲಿಸಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದವೂ ನಡೆದಿದೆ ಎಂದು ವರದಿ ತಿಳಿಸಿದೆ.
(AP)(7 / 10)
ಬುಮ್ರಾ ಮೊದಲ ಆಯ್ಕೆಯಾಗಿರುವ ಕಾರಣ ಜೈಸ್ವಾಲ್ ಮತ್ತು ಪಂತ್ ಅವರಲ್ಲಿ ಒಬ್ಬರಿಗೆ ಉಪನಾಯಕತ್ವ ಸಿಗಲಿದೆ ಎಂಬುದು ಸ್ಪಷ್ಟವಾಗಿದೆ. ಅದರಂತೆ ಬುಮ್ರಾ ಟೆಸ್ಟ್ ಮತ್ತು ಏಕದಿನ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
(BCCI- X)(8 / 10)
ಹೆಡ್ ಕೋಚ್, ಸೆಲೆಕ್ಟರ್ಸ್ ಜೊತೆಗೆ ಸಭೆಯಲ್ಲಿದ್ದ ರೋಹಿತ್ ಶರ್ಮಾ ಇದೆಲ್ಲದಕ್ಕೂ ಒಪ್ಪಿಗೆ ನೀಡಿದ್ದಾರೆ. ಆದರೆ, ಭವಿಷ್ಯದ ನಾಯಕ ಆಯ್ಕೆ ಆಗುವವರೆಗೂ ನಾನು ತಂಡದ ಜವಾಬ್ದಾರಿ ಹೊಂದಿರುತ್ತೇನೆ ಎಂದು ಬಿಸಿಸಿಐ ಸೆಲೆಕ್ಷನ್ ಕಮಿಟಿಗೆ ತಿಳಿಸಿದ್ದಾರೆ.
(HT_PRINT)(9 / 10)
ರೋಹಿತ್ ಶರ್ಮಾ ಅವರು ಐಸಿಸಿ ಚಾಂಪಿಯನ್ಸ್ ಟ್ರೋಫಿಯ ನಂತರ ಅವರು ನಾಯಕತ್ವ ಮತ್ತು ತಂಡದಿಂದ ದೂರ ಉಳಿಯಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಆದರೆ ಯಾರಿಗೆ ಅವಕಾಶ ಸಿಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಕಾದುನೋಡೋಣ.
(AAP Image via REUTERS)ಇತರ ಗ್ಯಾಲರಿಗಳು