Ganesha Idol Collector: ಲಿಮ್ಕಾ ದಾಖಲೆವೀರ ಶೇಖರ್ ಬಳಿ ಗಣಪನ ವಿಗ್ರಹಗಳು; ಇಲ್ಲಿವೆ ಫೋಟೋ
- ಹೈದರಾಬಾದ್ ನಿವಾಸಿ ಪಬ್ಸೆಟ್ಟಿ ಶೇಖರ್ ಗಣಪನ ವಿಗ್ರಹ ಸಂಗ್ರಹಕಾರ. ಅವರು ಈ ರೀತಿ ಗಣಪನ ವಿಗ್ರಹ ಸಂಗ್ರಹಿಸುತ್ತಲೇ ಗಿನ್ನೆಸ್ ಮತ್ತು ಲಿಮ್ಕಾ ದಾಖಲೆಗಳ ಪುಟದಲ್ಲಿ ಸ್ಥಾನ ಪಡೆದವರು. ಇಲ್ಲಿವೆ ಅವರ ಸಂಗ್ರಹದ ಕೆಲವು ಫೋಟೋಗಳು.
- ಹೈದರಾಬಾದ್ ನಿವಾಸಿ ಪಬ್ಸೆಟ್ಟಿ ಶೇಖರ್ ಗಣಪನ ವಿಗ್ರಹ ಸಂಗ್ರಹಕಾರ. ಅವರು ಈ ರೀತಿ ಗಣಪನ ವಿಗ್ರಹ ಸಂಗ್ರಹಿಸುತ್ತಲೇ ಗಿನ್ನೆಸ್ ಮತ್ತು ಲಿಮ್ಕಾ ದಾಖಲೆಗಳ ಪುಟದಲ್ಲಿ ಸ್ಥಾನ ಪಡೆದವರು. ಇಲ್ಲಿವೆ ಅವರ ಸಂಗ್ರಹದ ಕೆಲವು ಫೋಟೋಗಳು.
(1 / 3)
ಹೈದರಾಬಾದ್‌ನಲ್ಲಿ ಅವರು ಇಂದು ತಮ್ಮ ಸಂಗ್ರಹದ ಗಣಪನನ್ನು ಮಾಧ್ಯಮದವರಿಗೆ ಮತ್ತೆ ತೋರಿಸಿದ್ದಾರೆ. ಗಣೇಶ ಭಗವಂತನ 19,022 ವಿಗ್ರಹಗಳನ್ನು ಸಂಗ್ರಹಿಸಿರುವುದಾಗಿ ಹೇಳಿಕೊಂಡಿದ್ದಾರೆ. ಅವರ ಬಳಿ ಗಣೇಶನ 20,426 ಛಾಯಾಚಿತ್ರಗಳು, 1098 ಪೋಸ್ಟರ್‌ಗಳ ವ್ಯಾಪಕ ಸಂಗ್ರಹವೂ ಇದೆ. ಇದಲ್ಲದೆ, 200 ಗಣೇಶ ಕೀ-ಚೈನ್‌ಗಳು ಮತ್ತು 201 ಗಣೇಶನಿಗೆ ಸಂಬಂಧಿಸಿದ ಆಡಿಯೋ/ವಿಡಿಯೋ ಕ್ಯಾಸೆಟ್‌ಗಳು ಕೂಡ ಇವೆ ಎಂದು ಹೇಳಿದ್ದಾರೆ. (Photo by Noah SEELAM / AFP)(AFP)
(2 / 3)
ಬಾಲ್ಯದಲ್ಲಿ 1973 ರ ಜುಲೈನಲ್ಲಿ ಪಾಲಕರೊಂದಿಗೆ ಶಿರಡಿಯ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಮೊದಲ ಗಣೇಶ ಮೂರ್ತಿಯನ್ನು ಖರೀದಿಸಿದೆ. ಅಲ್ಲಿಂದ ಶುರುವಾದ ನನ್ನ ಸಂಗ್ರಹಕ್ಕೆ ಭಾರತ, ಅಮೇರಿಕ, ಜಪಾನ್, ಚೀನಾ, ಅಫ್ಘಾನಿಸ್ತಾನ, ಸಿಂಗಾಪುರ ಮತ್ತು ಇತರ ದೇಶಗಳಿಂದ ಬಂದಿದೆ. ನನ್ನ ಸಂಗ್ರಹದಲ್ಲಿ ಬಾಲ ಗಣಪತಿಯಿಂದ ಸಂಕಟಹರ ಗಣಪತಿಯವರೆಗೆ 32 ರೂಪದ ಗಣೇಶನ ಪ್ರತಿಮೆಗಳು ಮತ್ತು ಗಣೇಶನ 33 ನೇ ರೂಪವಾದ ಶುಭ ದೃಷ್ಟಿ ಗಣೇಶನ ವಿಗ್ರಹಗಳು ಸೇರಿವೆ" ಎಂದು ಶೇಖರ್ ವಿವರಿಸುತ್ತಾರೆ.(Photo by Noah SEELAM / AFP)(AFP)
(3 / 3)
ನನ್ನ ಸಂಗ್ರಹದಲ್ಲಿರುವ ಗಣೇಶನ ಮೂರ್ತಿಗಳ ಪೈಕಿ ಚಿನ್ನ, ಬೆಳ್ಳಿ, ಕಂಚುಗಳದ್ದೂ ಇವೆ. ಶ್ರೀಗಂಧದ ಮರ, ರೋಸ್‌ವುಡ್ ಮತ್ತು ಇತರೆ ವಸ್ತುಗಳಿಂದ ತಯಾರಿಸಿದ ವಿಗ್ರಹಗಳೂ ಇವೆ. ಆಧುನಿಕತೆಯಲ್ಲಿ ಗಣೇಶನ ವಿವಿಧ ರೂಪಗಳನ್ನು ಕೂಡ ಸಂಗ್ರಹಕ್ಕೆ ಸೇರಿಸಿದ್ದೇನೆ. ಆರ್ಟ್ ಮತ್ತು ಎಂ-ಸೀಲ್, ಪಿಒಪಿ, ಸೆರಾಮಿಕ್ ಪೌಡರ್, ಗ್ಲಾಸ್ ಪೇಂಟಿಂಗ್, ಥ್ರೆಡ್ ಮತ್ತು ಇತರ ವಸ್ತುಗಳಿಂದ ತಯಾರಿಸಲ್ಪಟ್ಟ ಗಣಪತಿಯೂ ಇದ್ದಾನೆ ಎಂದು ಶೇಖರ್ ಮಾಹಿತಿ ನೀಡುತ್ತಾರೆ. (Photo by Noah SEELAM / AFP)(AFP)
ಇತರ ಗ್ಯಾಲರಿಗಳು