ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rose Plant: ಬೇಸಿಗೆಯಲ್ಲಿ ಹೀಗಿರಲಿ ಗುಲಾಬಿ ಗಿಡದ ನಿರ್ವಹಣೆ, ಹೂ ಚೆನ್ನಾಗಿ ಬಿಡಲು ಈ ಕ್ರಮಗಳನ್ನು ಅನುಸರಿಸಿ

Rose Plant: ಬೇಸಿಗೆಯಲ್ಲಿ ಹೀಗಿರಲಿ ಗುಲಾಬಿ ಗಿಡದ ನಿರ್ವಹಣೆ, ಹೂ ಚೆನ್ನಾಗಿ ಬಿಡಲು ಈ ಕ್ರಮಗಳನ್ನು ಅನುಸರಿಸಿ

Rose plant in summer : ಬೇಸಿಗೆಯಲ್ಲಿ ಮನುಷ್ಯರು, ಪ್ರಾಣಿ-ಪಕ್ಷಿಗಳಂತೆ ಗಿಡಗಳನ್ನು ಕೂಡ ಕಾಳಜಿ ಮಾಡಬೇಕು. ಅದರಲ್ಲೂ ಮನೆಯ ಮುಂದೆ ಅರಳಿ ನಗುವ ಬಣ್ಣ ಬಣ್ಣದ ಹೂ ಬಿಡುವ ಗುಲಾಬಿ ಗಿಡಗಳಿಗೆ ವಿಶೇಷ ಕಾಳಜಿ ವಹಿಸಬೇಕು. ಹಾಗಾದರೆ ಬೇಸಿಗೆಯಲ್ಲಿ ಗುಲಾಬಿ ಗಿಡದ ನಿರ್ವಹಣೆ ಹೇಗಿರಬೇಕು, ಗುಲಾಬಿ ಗಿಡ ಒಣಗದೇ ಹಸಿರಾಗಿರಲು ಏನು ಮಾಡಬೇಕು ನೋಡಿ.

ಗುಲಾಬಿ ಗಿಡಗಳು ಚಳಿಗಾಲದ ಸಮಯದಲ್ಲಿ ಹೆಚ್ಚು ಹೂ ಬಿಡುತ್ತವೆ ಎಂಬ ಮಾತಿದೆ. ಆದರೆ ಈ ಗಿಡಗಳು ಸರ್ವಕಾಲದಲ್ಲೂ ಹೂ ನೀಡುತ್ತವೆ. ಬೇಸಿಗೆಯಲ್ಲೂ ಹೂದೋಟದಲ್ಲಿ ಅರಳಿ ನಗುವ ಗುಲಾಬಿಗಳನ್ನು ಕಾಣಬಹುದು. ಆದರೆ ಬೇಸಿಗೆ ಗುಲಾಬಿ ಗಿಡಗಳಿಗೆ ಅಸಹನೀಯವಾಗಿರುತ್ತದೆ. ಅತಿಯಾದ ಸೂರ್ಯನ ಶಾಖದಿಂದ ಗುಲಾಬಿ ಗಿಡದ ಬೆಳವಣಿಗೆಯೂ ಕುಂಠಿತವಾಗಬಹುದು. ಗುಲಾಬಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಬಹುದು. ಹಾಗಾಗಿ ಬಿರುಬೇಸಿಗೆಯ ಸಮಯದಲ್ಲಿ ಗುಲಾಬಿ ಗಿಡಗಳನ್ನು ವಿಶೇಷವಾಗಿ ಕಾಳಜಿ ಮಾಡಬೇಕು.
icon

(1 / 7)

ಗುಲಾಬಿ ಗಿಡವನ್ನು ನೀವು ಪಾಟ್‌ನಲ್ಲಿ ಇಟ್ಟಿದ್ದರೆ ನೇರವಾಗಿ ಸೂರ್ಯನ ಉರಿಬಿಸಿಲು ಬೀಳದಂತೆ ನೋಡಿಕೊಳ್ಳಿ. ಬೆಳಗಿನ ಎಳೆ ಬಿಸಿಲಿನಲ್ಲಿ ಮಾತ್ರ ಪಾಟ್‌ ಅನ್ನು ಹೊರಗಡೆ ಇಡಿ. ಮನೆಯ ಛಾವಣಿಯಲ್ಲಿ ಇರಿಸುವ ಮೂಲಕ ಬಿಸಿಲಿನಿಂದ ರಕ್ಷಿಸಬಹುದು. ಇಲ್ಲದೇ ಹೋದಲ್ಲಿ ಮರಗಳಿದ್ದರೆ ಮರದ ನೆರಳಿನಲ್ಲೂ ಇಡಬಹುದು. 
icon

(2 / 7)

ಬೇಸಿಗೆಯಲ್ಲಿ, ಹೂವುಗಳ ಗಾತ್ರ ತುಂಬಾ ಚಿಕ್ಕದಿರುತ್ತದೆ. ಹೂವಿನ ಪಕಳೆಗಳು ದಟ್ಟವಾಗಿರುವುದಿಲ್ಲ. ಹಾಗಾಗಿ ಗಿಡದಲ್ಲೇ ಹೂ ಅರಳಲು ಬಿಡುವುದು ಉತ್ತಮ. ಗುಲಾಬಿ ಮೊಗ್ಗು ಕತ್ತರಿಸಿ ಇಡುವುದರಿಂದ ಹೂ ಅರಳದೇ ಇರಬಹುದು. 
icon

(3 / 7)

ಬೇಸಿಗೆಯಲ್ಲಿ ಸೂರ್ಯನ ಕಿರಣಗಳಿಂದ ರಕ್ಷಿಸಲು ಮಲ್ಚಿಂಗ್‌ ಕೂಡ ಮಾಡಬಹುದು. ಮಲ್ಚಿಂಗ್‌ ಮಾಡುವುದರಿಂದ ಬೇರುಗಳಿಗೆ ನೇರವಾಗಿ ಸೂರ್ಯನ ಬೆಳಕು ಬೀಳುವುದಿಲ್ಲ. ಅಲ್ಲದೇ ಸೂರ್ಯನ ಕಿರಣಗಳಿಂದ ಬೇರುಗಳನ್ನು ರಕ್ಷಿಸಲು ಒಣಹುಲ್ಲು ಅಥವಾ ಒಣಎಲೆಗಳನ್ನು ತೆಗೆದುಕೊಂಡು ಅವುಗಳನ್ನು ತೊಟ್ಟಿಯ ಮಣ್ಣಿನಲ್ಲಿ ಹಾಕಬೇಕು. ಕೆಲವರು ಹಸಿಗೊಬ್ಬರಕ್ಕಾಗಿ ವರ್ಮಿಕಾಂಪೋಸ್ಟ್ ಅನ್ನು ಸಹ ಬಳಸುತ್ತಾರೆ. ನೆನಪಿಡಬೇಕಾದ ಇನ್ನೊಂದು ವಿಷಯವೆಂದರೆ ಬೇಸಿಗೆಯಲ್ಲಿ ಹಸುವಿನ ಸಗಣಿಯನ್ನು ಗಿಡಕ್ಕೆ ಹಾಕದೇ ಇರುವುದು ಉತ್ತಮ.
icon

(4 / 7)

ಬೇಸಿಗೆಯಲ್ಲಿ, ಗಿಡದ ಬುಡಕ್ಕೆ ಎರಡು ಬಾರಿ ನೀರು ಹಾಕಬೇಕು. ಪೈಪ್‌ನಿಂದ ರಭಸವಾಗಿ ನೀರು ಬಿಡುವ ಬದಲು ನಿಧಾನಕ್ಕೆ ಮಗ್‌ನಿಂದ ನೀರು ಹಾಕಿ. ಹೊರಗಡೆ ಬಿಸಿಲಿನಲ್ಲಿ ಇಟ್ಟ ನೀರು ಹಾಕದೇ ಇರುವುದು ಉತ್ತಮ. ತಣ್ಣನೆಯ ನೀರನ್ನು ಸಸ್ಯ ಬುಡದ ಜೊತೆಗೆ ಎಲೆ, ಕಾಂಡಗಳ ಮೇಲೂ ಹನಿಸಿ. ಗಿಡದ ಬುಡ ಒಣಗಿದೆ ಅನ್ನಿಸಿದಾಗೆಲ್ಲಾ ನೀರು ಹಾಕಿ.
icon

(5 / 7)

ಒಣಗಿದ ಹೂಗಳನ್ನು ಗಿಡದಲ್ಲೇ ಬಿಡಬೇಡಿ. ಇದನ್ನು ಕತ್ತರಿಸಿದಾಗ ಇನ್ನಷ್ಟು ಹೂಗಳು ಅರಳಲು ನೆರವಾಗುತ್ತದೆ. ರೋಗಲಕ್ಷಣಗಳು ಕಾಣಿಸಿದರೆ ಆರಂಭದಲ್ಲೇ ಹೂಗಳಿಗೆ ಶೀಲಿಂಧ್ರನಾಶಕಗಳನ್ನು ಸಿಂಪಡಿಸಬೇಕು. ಹೂವಿನ ಪಕಳೆಗಳು ಹಾಗೂ ಎಲೆಗಳಿಗೂ ಸಿಂಪಡಣೆ ಮಾಡುವುದು ಅವಶ್ಯ. 
icon

(6 / 7)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ. 
icon

(7 / 7)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ. 

IPL_Entry_Point

ಇತರ ಗ್ಯಾಲರಿಗಳು