ವಿಶ್ವಕಪ್ ಗೆಲ್ಲುವ ತಂಡ ಹೆಸರಿಸಿದ ದಿಗ್ಗಜರು; ತಮ್ಮ ದೇಶವನ್ನೇ ಬೆಂಬಲಿಸಿಲ್ಲ ಆಸೀಸ್ ಮಾಜಿಗಳು!
- India vs Australia Final: ನರೇಂದ್ರ ಮೋದಿ ಮೈದಾನದಲ್ಲಿ ನಡೆಯುವ ಇಂಡೋ-ಆಸೀಸ್ ವಿಶ್ವಕಪ್ ಫೈನಲ್‌ನಲ್ಲಿ ಗೆಲ್ಲುವ ತಂಡ ಯಾವುದು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಅದಕ್ಕೆ ಮಾಜಿ ಕ್ರಿಕೆಟಿಗರು, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವನ್ನು ಬಹಿರಂಗಪಡಿಸಿದ್ದಾರೆ.

(1 / 7)
ಭಾರತ-ಆಸ್ಟ್ರೇಲಿಯಾ ನಡುವೆ ಇಂದು ಮಹಾಕಾಳಗ ನಡೆಯಲಿದೆ. ಈ 2 ಬಲಿಷ್ಠ ತಂಡಗಳು ಟ್ರೋಫಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿವೆ. ಆದರೆ, ಪಂದ್ಯಕ್ಕೂ ಮುನ್ನ ಮಾಜಿ ಕ್ರಿಕೆಟಿಗರು ಪ್ರಶಸ್ತಿ ಗೆಲ್ಲುವ ತಂಡ ಯಾವುದೆಂದು ಬಹಿರಂಗಪಡಿಸಿದ್ದು, ಭಾರತಕ್ಕೆ ಹೆಚ್ಚು ಮತ ನೀಡಿರುವುದು ವಿಶೇಷ.
(2 / 7)
ಆಸ್ಟ್ರೇಲಿಯಾದ ಶೇನ್ ವಾಟ್ಸನ್, ಭಾರತವೇ ವಿಶ್ವಕಪ್ ಗೆಲ್ಲಲಿದೆ ಎಂದು ಹೇಳಿದ್ದಾರೆ. ಆ ಮೂಲಕ ಆಸೀಸ್ ಮಾಜಿ ಸ್ಟಾರ್ ಆಲ್ ರೌಂಡರ್ ತಮ್ಮ ದೇಶವನ್ನೇ ಕಡೆಗಣಿಸಿದ್ದಾರೆ.
(3 / 7)
ಕೆರಿಬಿಯನ್ ಮಾಜಿ ಕ್ರಿಕೆಟಿಗ ಇಯಾನ್ ಬಿಷಪ್, ಭಾರತ ತಂಡಕ್ಕೆ ವೋಟ್ ಹಾಕಿದ್ದಾರೆ. ಟೀಮ್ ಇಂಡಿಯಾ 3ನೇ ಬಾರಿಗೆ ವಿಶ್ವ ಚಾಂಪಿಯನ್ ಆಗಬೇಕು ಎಂದು ಹೇಳಿದ್ದಾರೆ.
(4 / 7)
ಶೇನ್ ವಾಟ್ಸನ್ ಅವರಂತೆ ಆಸೀಸ್ ತಂಡ ಮಾಜಿ ನಾಯಕ ಆ್ಯರೋನ್ ಫಿಂಚ್ ಕೂಡ ಭಾರತವೇ ಪ್ರಶಸ್ತಿ ಗೆಲ್ಲುವ ಫೇವರಿಟ್ ಎಂದಿದ್ದಾರೆ. ಆ ಮೂಲಕ ತಮ್ಮ ದೇಶಕ್ಕೆ ಬೆಂಬಲ ವ್ಯಕ್ತಪಡಿಸಲೇ ಇಲ್ಲ.
(5 / 7)
ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಇಮ್ರಾನ್ ತಾಹೀರ್, ಭಾರತ ಗೆಲ್ಲಲಿದೆ ಎಂದು ಒಂದೇ ಮಾತಿನಲ್ಲಿ ಹೇಳಿದ್ದಾರೆ.
(6 / 7)
2011ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಗೌತಮ್ ಗಂಭೀರ್, ಈ ಬಾರಿ ಟೀಮ್ ಇಂಡಿಯಾ ಟ್ರೋಫಿ ಗೆದ್ದು ಚಾಂಪಿಯನ್ ಆಗುವುದು ಖಚಿತ ಎಂದು ಹೇಳಿದ್ದಾರೆ.
ಇತರ ಗ್ಯಾಲರಿಗಳು