ಕನ್ನಡ ಸುದ್ದಿ  /  Photo Gallery  /  Get Rid Of Mosquitos Mosquito Repellent For Home Do It Yourself

Get Rid Of Mosquitos: ಅತಿಯಾದ ಸೊಳ್ಳೆ ಕಾಟವೇ? ʻಲಿಂಬೆʼ ಹಣ್ಣು ಅಂತ ಮೂಗು ಮುರಿಯಬೇಡಿ; ಅದು ಕೂಡಾ ಸೊಳ್ಳೆ ಓಡಿಸುವ ಕೆಲಸ ಮಾಡುತ್ತೆ ನೋಡಿ

Get Rid Of Mosquitos: ಅತಿಯಾದ ಸೊಳ್ಳೆ ಕಾಟವೇ? ಮಲಗಿದ ಕೂಡಲೇ ಕಿವಿ ಬಳಿ ಗುಯಿಂಗುಡುತ್ತಿವೆಯೇ? ಇದಕ್ಕೆ ಪರಿಹಾರ ಏನೆಂದರಿಯದೇ ಸುಸ್ತಾಗಿದ್ದೀರಾ? ಇಲ್ಲಿವೆ ನೋಡಿ ಕೆಲವು ಪರಿಹಾರ..

ಬೇಸಿಗೆಯ ಈ ಸಮಯದಲ್ಲಿ ಸೊಳ್ಳೆಗಳ ಕಾಟ ತುಂಬಾ ಹೆಚ್ಚುತ್ತದೆ. ಬೇಸಿಗೆಯ ಬೇಗೆ ಏರುತ್ತಿರುವಾಗ ಮಳೆ ಬಂದರೆ ಕೇಳುವುದು ಬೇಡ. ಆಗ ಸೊಳ್ಳೆ ಕಾಟಕ್ಕೆ ಮಿತಿಯೇ ಇಲ್ಲ. ಅದು ಹೆಚ್ಚು ಗಂಭೀರವಾಗುತ್ತದೆ. ಮಲೇರಿಯಾ, ಡೆಂಗ್ಯೂ ರೋಗಾತಂಕವೂ ಹೆಚ್ಚಾಗುತ್ತದೆ. ಆದ್ದರಿಂದ ಸೊಳ್ಳೆಯಿಂದ ಹರಡುವ ರೋಗಗಳ ಬಗ್ಗೆ ಎಚ್ಚರಿಕೆವಹಿಸಬೇಕು. ಸೊಳ್ಳಕಾಟದಿಂದ ನಿಮ್ಮ ಮನೆಯನ್ನು ಮುಕ್ತಗೊಳಿಸಬೇಕು. ಇದಕ್ಕೇನು ಪರಿಹಾರ?
icon

(1 / 6)

ನಿಂಬೆ ಹಣ್ಣನ್ನು ಹೋಳುಗಳಾಗಿ ಕತ್ತರಿಸಿ, ಅದರ ಒಳಗೆ ಕೆಲವು ಲವಂಗ ಸೇರಿಸಿ. ಲವಂಗದ ಮೇಲ್ಭಾಗ ಮಾತ್ರ ಕಾಣುವಂತೆ ಇರಿಸಬೇಕು. ಈಗ ಕೋಣೆಯ ಒಂದು ಮೂಲೆಯಲ್ಲಿ ನಿಂಬೆ ತುಂಡುಗಳನ್ನು ಇರಿಸಿ. ಇದರಿಂದ ಸೊಳ್ಳೆಗಳ ಕಾಟ ಸಾಕಷ್ಟು ಕಡಿಮೆಯಾಗಲಿದೆ. ಬೇಕಾದರೆ ಗಮನಿಸಿ ನೋಡಿ
icon

(2 / 6)

ಒಂದು ಬಟ್ಟಲಿನಲ್ಲಿ ಜೀರಿಗೆಯನ್ನು ತೆಗೆದುಕೊಳ್ಳಿ. ನಿಮ್ಮ ಕೈಗಳಿಂದ ಸ್ವಲ್ಪ ಒತ್ತುವ ಮೂಲಕ ಆ ಜೀರಿಗೆಯನ್ನು ಸ್ವಲ್ಪ ಮುರಿಯಿರಿ. ಈಗ ಅದಕ್ಕೆ ಸಾಸಿವೆ ಎಣ್ಣೆಯನ್ನು ಬೆರೆಸಿ. ಮಧ್ಯಾಹ್ನದಿಂದಲೇ ಮನೆಯ ಮೂಲೆ ಮೂಲೆಯಲ್ಲಿ ಇಡಿ. ಈ ಎಣ್ಣೆಯ ಬಲವಾದ ವಾಸನೆಯು ಸೊಳ್ಳೆಗಳನ್ನು ಮನೆಯೊಳಗೆ ಪ್ರವೇಶಿಸಲು ಬಿಡುವುದಿಲ್ಲ.
icon

(3 / 6)

ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಬೇವಿನ ಎಲೆಗಳು ಕೂಡ ತುಂಬಾ ಉಪಯುಕ್ತ. ಈ ಸಂದರ್ಭದಲ್ಲಿ, ನೀವು ಚಹಾ ಮರದ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಬಹುದು ಮತ್ತು ಅದನ್ನು ಮನೆಯಾದ್ಯಂತ ಸಿಂಪಡಿಸಬಹುದು. ಬೇವಿನ ಎಲೆಯ ರಸವನ್ನು ನೀರಿನಲ್ಲಿಯೂ ಬಳಸಬಹುದು.
icon

(4 / 6)

ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಬೇವಿನ ಎಲೆಗಳು ಕೂಡ ತುಂಬಾ ಉಪಯುಕ್ತ. ಈ ಸಂದರ್ಭದಲ್ಲಿ, ನೀವು ಚಹಾ ಮರದ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಬಹುದು ಮತ್ತು ಅದನ್ನು ಮನೆಯಾದ್ಯಂತ ಸಿಂಪಡಿಸಬಹುದು. ಬೇವಿನ ಎಲೆಯ ರಸವನ್ನು ನೀರಿನಲ್ಲಿಯೂ ಬಳಸಬಹುದು.(Pexels)

ಒಂದು ಭಾಗ ಬೆಳ್ಳುಳ್ಳಿ ರಸವನ್ನು ಐದು ಭಾಗಗಳ ನೀರಿನೊಂದಿಗೆ ಮಿಶ್ರಣ ಮಾಡಿ. ಮಿಶ್ರಣವನ್ನು ಬಾಟಲಿಯಲ್ಲಿ ತುಂಬಿಸಿ ಮತ್ತು ಸೊಳ್ಳೆಗಳು ಕಚ್ಚಬಹುದಾದ ದೇಹದ ಹೊರಭಾಗಗಳಲ್ಲಿ ಸಿಂಪಡಿಸಿ. ಈ ಘೋರ ವಾಸನೆಗೆ ಸೊಳ್ಳೆಗಳು ಹತ್ತಿರ ಕೂಡ ಸುಳಿಯುವುದಿಲ್ಲ.
icon

(5 / 6)

ಮನೆಯಿಂದ ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ತುಳಸಿ, ಪುದೀನ, ನಿಂಬೆ ಹುಲ್ಲು ಮುಂತಾದ ಕೆಲವು ಒಳಾಂಗಣ ಸಸ್ಯಗಳನ್ನು ನೆಡಬಹುದು. ಈ ಎಲ್ಲ ಸಸ್ಯಗಳ ವಾಸನೆಯು ಸೊಳ್ಳೆಗಳನ್ನು ಹಿಮ್ಮೆಟ್ಟಿಸುತ್ತದೆ.
icon

(6 / 6)

IPL_Entry_Point

ಇತರ ಗ್ಯಾಲರಿಗಳು