Glass vessels Cleaning Tips: ಗಾಜಿನ ಪಾತ್ರೆಯನ್ನು ಸ್ವಚ್ಛಗೊಳಿಸಲು ಈ ಟಿಪ್ಸ್ ಅನುಸರಿಸಿ
- Glass vessels Cleaning Tips: ಗಾಜಿನ ಪಾತ್ರೆಗಳು ಅಡುಗೆಕೋಣೆಯ ಅಂದವನ್ನು ಹೆಚ್ಚಿಸುತ್ತವೆ. ಆದರೆ ಇವುಗಳ ನಿರ್ವಹಣೆ ನಿಜಕ್ಕೂ ಕಷ್ಟ. ಇನ್ನು ತೊಳೆಯುವ ವಿಚಾರಕ್ಕೆ ಬಂದರೆ ಕೆಲವೊಮ್ಮೆ ಚೆನ್ನಾಗಿ ತೊಳೆದ ಮೇಲೂ ಕಲೆಗಳು ಉಳಿದು ಹೋಗುತ್ತವೆ. ಗಾಜಿನ ಪಾತ್ರೆಯ ಕಲೆ ಹೋಗಿ ಹೊಳೆಯುವಂತೆ ಮಾಡಲು ಈ ಟಿಪ್ಸ್ ಅನುಸರಿಸಿ.

(1 / 5)
ಗಾಜಿನ ಪಾತ್ರೆಯ ನಿರ್ವಹಣೆ ಕಷ್ಟ ಎನ್ನುವ ಕಾರಣಕ್ಕೆ ಅತಿಥಿಗಳು ಬಂದಾಗಷ್ಟೇ ಇವುಗಳನ್ನು ಬಳಸುತ್ತೇವೆ. ಆದರೆ ಗಾಜಿನ ಸಾಮಾನುಗಳನ್ನು ಸ್ವಚ್ಛಗೊಳಿಸುವುದು ಕೊಂಚ ಕಿರಿಕಿರಿಯ ಕೆಲಸ. ಕೆಲವೊಮ್ಮೆ ಎಷ್ಟೇ ಸ್ವಚ್ಛಗೊಳಿಸಿದರೂ ಕಲೆಗಳು ಉಳಿಯುತ್ತವೆ. ಕೆಲವು ಸರಳ ಮನೆಮದ್ದುಗಳಿಂದ ಗಾಜಿನ ಪಾತ್ರೆಗಳನ್ನು ಹೊಳೆಯುವಂತೆ ಮಾಡಬಹುದು. ಈ ಕುರಿತ ಟಿಪ್ಸ್ ಇಲ್ಲಿದೆ.
(2 / 5)
ಗಾಜಿನ ಪಾತ್ರೆಗಳನ್ನು ಸ್ಕ್ರಬರ್ ಅಥವಾ ಬ್ರಷ್‌ನಿಂದ ತೊಳೆಯಬೇಡಿ. ಇದರಿಂದ ಅವುಗಳು ಹಾಳಾಗಬಹುದು. ಅಲ್ಲದೆ ಸ್ಕ್ರಬರ್‌ನಿಂದ ಸ್ಕ್ರ್ಯಾಚ್ ಉಂಟಾಗಬಹುದು. ಆ ಕಾರಣಕ್ಕೆ ಗಾಜಿನ ಸಾಮಾನುಗಳನ್ನು ತೊಳೆಯಲು ಯಾವಾಗಲೂ ಮೃದುವಾದ ಸ್ಪಾಂಜ್ ಬಳಸಿ. ಇದರಿಂದ ನೀರಿನ ಕಲೆಗಳೂ ಉಳಿಯುವುದಿಲ್ಲ.
(3 / 5)
ಗಾಜಿನ ಸಾಮಾನುಗಳನ್ನು ಸ್ವಚ್ಛಗೊಳಿಸುವಾಗ ವಿನೆಗರ್ ಬಳಸಬಹುದು. ಇವು ಕಲೆಗಳನ್ನು ತೆಗೆದು ಹಾಕುವುದು ಮಾತ್ರವಲ್ಲ, ಗಾಜಿನ ಹೊಳಪನ್ನೂ ಹೆಚ್ಚಿಸುತ್ತವೆ. ಇದರಿಂದ ನೀರಿನಂಶ ಒಣಗಿದ ಮೇಲೆ ಕಲೆ ಉಳಿಯುವುದನ್ನು ತಪ್ಪಿಸಬಹುದು. ಇದರೊಂದಿಗೆ ಬಿಸಿ ನೀರಿನಲ್ಲಿ ಪಾತ್ರೆ ತೊಳೆಯುವುದರಿಂದಲೂ ಕೂಡ ಗಾಜಿನ ಪಾತ್ರೆಯ ಕಲೆಯನ್ನು ತೆಗೆದು ಹಾಕಬಹುದು.
(4 / 5)
ಅಡುಗೆ ಸೋಡವನ್ನು ಬಳಸಿ ಗಾಜಿನ ಪಾತ್ರೆಯನ್ನು ತೊಳೆಯಬಹುದು, ನೀರಿನೊಂದಿಗೆ ಸ್ವಲ್ಪ ಅಡುಗೆಸೋಡಾವನ್ನು ಬೆರೆಸಿ, ಗಾಜಿನ ಪಾತ್ರೆಯನ್ನು ಉಜ್ಜಿ. ಇದರಿಂದ ಪಾತ್ರೆಯ ಹೊಳಪು ಹೆಚ್ಚುವುದರೊಂದಿಗೆ ಕಲೆಗಳು ಮಾಯವಾಗುತ್ತವೆ.
ಇತರ ಗ್ಯಾಲರಿಗಳು