ಗಗನಕ್ಕೇರಿದೆ ಚಿನ್ನದ ದರ; ಲಕ್ಷ ರೂಪಾಯಿಯತ್ತ ಲಗ್ಗೆಯಿಡುತ್ತಿರುವ ಬಂಗಾರ
- ಬುಧವಾರ ಏಪ್ರಿಲ್ 16ರಂದು ಅಂತರರಾಷ್ಟ್ರೀಯ ಸ್ಪಾಟ್ ಚಿನ್ನದ ಬೆಲೆ ಔನ್ಸ್‌ಗೆ 3,318 ಯುಎಸ್‌ಡಿ (ಯುನೈಟೆಡ್ ಸ್ಟೇಟ್ ಡಾಲರ್) ತಲುಪಿದ್ದರೆ, ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 98,100 ರೂಪಾಯಿ ಏರಿದೆ.
- ಬುಧವಾರ ಏಪ್ರಿಲ್ 16ರಂದು ಅಂತರರಾಷ್ಟ್ರೀಯ ಸ್ಪಾಟ್ ಚಿನ್ನದ ಬೆಲೆ ಔನ್ಸ್‌ಗೆ 3,318 ಯುಎಸ್‌ಡಿ (ಯುನೈಟೆಡ್ ಸ್ಟೇಟ್ ಡಾಲರ್) ತಲುಪಿದ್ದರೆ, ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 98,100 ರೂಪಾಯಿ ಏರಿದೆ.
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
(1 / 7)
ಬುಧವಾರ ಏಪ್ರಿಲ್ 16ರಂದು ಅಂತರರಾಷ್ಟ್ರೀಯ ಸ್ಪಾಟ್ ಚಿನ್ನದ ಬೆಲೆ ಔನ್ಸ್‌ಗೆ 3,318 ಯುಎಸ್‌ಡಿ (ಯುನೈಟೆಡ್ ಸ್ಟೇಟ್ ಡಾಲರ್) ತಲುಪಿದ್ದರೆ, ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 98,100 ರೂಪಾಯಿ ಏರಿದೆ. ಅಮೆರಿಕ - ಚೀನಾ ನಡುವಿನ ಸುಂಕ ಸಮರ ಉತ್ತುಂಗಕ್ಕೇರಿ ಇದಕ್ಕೆ ಕಾರಣ ಎನ್ನಲಾಗುತ್ತಿದೆ
(2 / 7)
ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಅಮೆರಿಕ ಶೇ.245 ರಷ್ಟು ಸುಂಕ ವಿಧಿಸುತ್ತಿರುವುದಾಗಿ ಘೋಷಿಸಿದೆ. ಇತ್ತ ಚೀನಾ ಕೂಡ ಅಮೆರಿಕಕ್ಕೆ ತಕ್ಕ ಉತ್ತರ ನೀಡಿದ್ದು, ಅಮೆರಿಕದ ಬೋಯಿಂಗ್ ವಿಮಾನಗಳು ಮತ್ತು ಬಿಡಿಭಾಗಗಳ ಖರೀದಿಯನ್ನು ನಿಲ್ಲಿಸಿದೆ. ಹೀಗೆ ಚೀನಾ- ಅಮೆರಿಕ ನಡುವಿನ ಬಿಕ್ಕಟ್ಟು ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ.
(3 / 7)
ಚಿನ್ನದ ದರ ಏರಿಕೆ, ಇಲ್ಲಿದೆ ವಿವರ:ಕಳೆದ ಎರಡೇ ದಿನದಲ್ಲಿ ಆಭರಣ ಚಿನ್ನದ ಬೆಲೆ 22 ಕ್ಯಾರೆಟ್‌ಗೆ 2000ರೂ ಏರಿಕೆಯಾಗಿದೆ. ನಿನ್ನೆ ಬುಧವಾರ 22 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ 950ರೂ ಇಳಿಕೆಯಾಗಿತ್ತು. ಇಂದು ಗುರುವಾರ ಕೂಡ 1050ರೂ ಏರಿಕೆಯಾಗಿದ್ದು, 89,200ರೂಪಾಯಿ ದರದಲ್ಲಿ ವಹಿವಾಟು ನಡೆಸುತ್ತಿದೆ.
(5 / 7)
ಬೆಳ್ಳಿ ದರದ ವಿವರ:ಬೆಳ್ಳಿ ದರ ಕಳೆದ ಎರಡು ದಿನಗಳಿಂದ ಸ್ವಲ್ಪ ಇಳಿಕೆಯಾಗಿತ್ತು. ಆದರೆ, ಇಂದು ಗುರುವಾರ ಏಪ್ರಿಲ್ 17ರಂದು ಬೆಳ್ಳಿ ದರ ಸ್ಥಿರವಾಗಿದೆ
(6 / 7)
ಬೆಂಗಳೂರಲ್ಲಿ ಪ್ರತಿ ಕೆಜಿ ಬೆಳ್ಳಿಗೆ 1 ಲಕ್ಷದಂತೆ ವಹಿವಾಟು ನಡೆಯುತ್ತಿದೆ. ಹೈದರಾಬಾದ್‌ನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 1.10 ಲಕ್ಷ ತಲುಪಿದೆ.
(7 / 7)
ಭಾರತ ಬೆಳ್ಳಿ ಮತ್ತು ಆಭರಣ ವ್ಯಾಪಾರಿಗಳ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ, “ವ್ಯಕ್ತಿಗಳು ಹೆಚ್ಚಿನ ಬೆಲೆಗಳನ್ನು ಬಂಡವಾಳ ಮಾಡಿಕೊಳ್ಳಲು ಅಥವಾ ಇತರ ಹೂಡಿಕೆಗಳಿಂದ ನಷ್ಟವನ್ನು ಸರಿದೂಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಮಾರಾಟದಲ್ಲಿ ಅಸಾಮಾನ್ಯ ಏರಿಳಿತ ಕಂಡುಬರುತ್ತಿದೆ” ಎಂದು ಹೇಳಿದ್ದಾರೆಂದು ಬ್ಯುಸಿನೆಸ್ ವರ್ಲ್ಡ್ ಜಾಲತಾಣ ವರದಿ ಮಾಡಿದೆ.
ಇತರ ಗ್ಯಾಲರಿಗಳು