ನಾಳೆಯೇ ಒಟಿಟಿಗೆ ಬರಲಿದೆ ಅಜಿತ್ ನಟನೆಯ ʻಗುಡ್ ಬ್ಯಾಡ್ ಅಗ್ಲಿʼ ಸಿನಿಮಾ, ಐದು ಭಾಷೆಗಳಲ್ಲಿ ಸ್ಟ್ರೀಮಿಂಗ್; ವೀಕ್ಷಣೆ ಎಲ್ಲಿ?
ಕಾಲಿವುಡ್ ನಟ ಅಜಿತ್ ನಟನೆಯ ʻಗುಡ್ ಬ್ಯಾಡ್ ಅಗ್ಲಿʼ ಸಿನಿಮಾ ಒಟಿಟಿ ಸ್ಟ್ರೀಮಿಂಗ್‌ನ ಸನಿಹದಲ್ಲಿದೆ. ಇನ್ನೊಂದು ದಿನದಲ್ಲಿ ಈ ಸಿನಿಮಾ ಒಟಿಟಿಗೆ ಆಗಮಿಸಲಿದೆ. ಮೂಲ ತಮಿಳಿನ ಜತೆಗೆ ಕನ್ನಡದಲ್ಲಿಯೂ ಈ ಸಿನಿಮಾ ವೀಕ್ಷಣೆಗೆ ಲಭ್ಯ ಇರಲಿದೆ.
(1 / 5)
ತಮಿಳು ಸ್ಟಾರ್ ಹೀರೋ ಅಜಿತ್ ಕುಮಾರ್ ನಟಿಸಿರುವ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಏಪ್ರಿಲ್ 10ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. ತಮಿಳಿನ ಜೊತೆಗೆ ತೆಲುಗಿನಲ್ಲೂ ಬಿಡುಗಡೆಯಾಯಿತು. ಈ ಆಕ್ಷನ್ ಕಾಮಿಡಿ ಚಿತ್ರ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿತು.
(2 / 5)
ಗುಡ್ ಬ್ಯಾಡ್ ಅಗ್ಲಿ ಸಿನಿಮಾ ನಾಳೆ (ಮೇ 8) ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಒಂದು ತಿಂಗಳಲ್ಲೇ ಸ್ಟ್ರೀಮಿಂಗ್‌ಗೆ ಎಂಟ್ರಿ ಕೊಡುತ್ತಿದೆ ಈ ಸಿನಿಮಾ.
(3 / 5)
ಗುಡ್ ಬ್ಯಾಡ್ ಅಗ್ಲಿ ಸಿನಿಮಾ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ.
(4 / 5)
ಗುಡ್ ಬ್ಯಾಡ್ ಅಗ್ಲಿ ಚಿತ್ರಕ್ಕೆ ಅಧಿಕ್ ರವಿಚಂದ್ರನ್ ನಿರ್ದೇಶನ ಮಾಡಿದ್ದಾರೆ. ಎಕೆ ಅಲಿಯಾಸ್ ರೆಡ್ ಡ್ರಾಗನ್ ಎಂಬ ಗ್ಯಾಂಗ್‌ಸ್ಟರ್ ಸುತ್ತ ಈ ಸಿನಿಮಾ ಕಥೆ ಸಾಗುತ್ತದೆ. ಈ ಸಿನಿಮಾದಲ್ಲಿ ತ್ರಿಷಾ ನಾಯಕಿಯಾಗಿ ನಟಿಸಿದ್ದಾರೆ. ಅರ್ಜುನ್ ದಾಸ್, ಪ್ರಭು, ಪ್ರಸನ್ನ, ಸುನೀಲ್, ಜಾಕಿ ಶ್ರಾಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇತರ ಗ್ಯಾಲರಿಗಳು