ಸಿನಿಮೋತ್ಸವಗಳಲ್ಲಿ ಮೆಚ್ಚುಗೆ ಪಡೆದ ಗೋಪಾಲಕೃಷ್ಣ ದೇಶಪಾಂಡೆ ನಟನೆಯ ಸೈಕಲಾಜಿಕಲ್‌ ಥ್ರಿಲ್ಲರ್‌ ‌ʻಗ್ರೀನ್ʼ ಚಿತ್ರ ಬಿಡುಗಡೆಗೆ ರೆಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಿನಿಮೋತ್ಸವಗಳಲ್ಲಿ ಮೆಚ್ಚುಗೆ ಪಡೆದ ಗೋಪಾಲಕೃಷ್ಣ ದೇಶಪಾಂಡೆ ನಟನೆಯ ಸೈಕಲಾಜಿಕಲ್‌ ಥ್ರಿಲ್ಲರ್‌ ‌ʻಗ್ರೀನ್ʼ ಚಿತ್ರ ಬಿಡುಗಡೆಗೆ ರೆಡಿ

ಸಿನಿಮೋತ್ಸವಗಳಲ್ಲಿ ಮೆಚ್ಚುಗೆ ಪಡೆದ ಗೋಪಾಲಕೃಷ್ಣ ದೇಶಪಾಂಡೆ ನಟನೆಯ ಸೈಕಲಾಜಿಕಲ್‌ ಥ್ರಿಲ್ಲರ್‌ ‌ʻಗ್ರೀನ್ʼ ಚಿತ್ರ ಬಿಡುಗಡೆಗೆ ರೆಡಿ

  • ಸೈಕಲಾಜಿಕಲ್ ಮೈಂಡ್ ಬೆಂಡಿಂಗ್ ಕಥಾಹಂದರ ಹೊಂದಿರುವ ʻಗ್ರೀನ್‌ʼ ಚಿತ್ರ ಶೂಟಿಂಗ್‌ ಕೆಲಸಗಳನ್ನು ಮುಗಿಸಿಕೊಂಡು, ಬಿಡುಗಡೆಗೆ ರೆಡಿಯಾಗಿದೆ. ರಾಜ್ ವಿಜಯ್ ನಿರ್ದೇಶನದ ಈ ಸಿನಿಮಾ ಈಗಾಗಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿಯೂ ಪ್ರದರ್ಶನಗೊಂಡು ಹಲವು ಪ್ರಶಸ್ತಿಗಳ ಜತೆ ಪ್ರಶಂಸೆ ಗಳಿಸಿದೆ.

ಗೋಪಾಲಕೃಷ್ಣ ದೇಶಪಾಂಡೆ ಮುಖ್ಯಭೂಮಿಕೆಯಲ್ಲಿರುವ ಗ್ರೀನ್‌ ಸಿನಿಮಾದಲ್ಲಿ ಬಾಲಾಜಿ ಮನೋಹರ್, ಆರ್.ಜೆ. ವಿಕ್ಕಿ, ವಿಶ್ವನಾಥ್ ಮಾಂಡಲಿಕ, ಶಿವ ಮಂಜು,‌ ಡಿಂಪಿ ಫದ್ಯಾ, ಮುರುಡಯ್ಯ, ರಾಮಚಂದ್ರ, ಗಿರೀಶ್ ಅಭಿನಯಿಸಿದ್ದಾರೆ. ಕೆ‌‌.ಮಧುಸೂದನ್ ಛಾಯಾಗ್ರಹಣ ಹಾಗೂ ಶಕ್ತಿ ಸ್ಯಾಕ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
icon

(1 / 5)

ಇಡೀ ಜೀವನವನ್ನೇ ನಿಯಂತ್ರಿಸುತ್ತಿರುವ ತನ್ನೊಳಗಿನ ರಾಕ್ಷಸನಿಂದ ಹೊರಬರಲು ಹೊರಡುವ ನಾಯಕನ ಕಥೆಯೇ ಗ್ರೀನ್. ಸೈಕಲಾಜಿಕಲ್‌ ಎಳೆಯ ಗ್ರೀನ್‌ ಸಿನಿಮಾದಲ್ಲಿ ಒಂದಷ್ಟು ಹೊಸ ವಿಚಾರಗಳನ್ನು ಹೊತ್ತು ನಿರ್ದೇಶಕರು ಆಗಮಿಸಿದಂತಿದೆ. ಕಥಾನಾಯಕನ ಆಂತರಿಕ ಹೋರಾಟದ ಬಗ್ಗೆ ಈ ಸಿನಿಮಾ ಮಾತನಾಡುತ್ತದೆ.
icon

(2 / 5)

ಮಾನವ ಮನಸ್ಸಿನ ಸಂಕೀರ್ಣತೆಗಳನ್ನು ಪರಿಶೋಧಿಸುವ ಈ ಕಥೆ ವೈಯಕ್ತಿಕವಾಗಿ ನಮಗೆ ಬಹಳ ಹತ್ತಿರವಾದದ್ದು. ನಿರ್ಮಾಪಕರಾಗಿ ಈ ಚಿತ್ರಕ್ಕೆ ಆಕರ್ಷಿತರಾದ ಕಾರಣ, ತನ್ನೊಳಗಿನ ಆಂತರಿಕ ಹೋರಾಟಗಳಿಂದ ನಮ್ಮ ಕಥಾನಾಯಕ ತನ್ನ ನಿಯಂತ್ರಣ ಕಳೆದುಕೊಳ್ಳುವಾಗ ಉಂಟಾಗುವ ನಿರಾಯಾಸಭಾವನೆಯನ್ನು ನಿಖರವಾಗಿ ಚಿತ್ರಿಸುತ್ತದೆ.
icon

(3 / 5)

ಈ ಚಿತ್ರವು ವಾಸ್ತವದ ಮೇಲಿನ ನಮ್ಮ ನಂಬಿಕೆಗಳನ್ನು ಪ್ರಶ್ನಿಸುತ್ತದೆ ಮತ್ತು ನಮ್ಮೊಳಗೇ ಅವಿತಿರುವ ಭಯವನ್ನು ಎದುರಿಸುವುದು, ಎದುರಿಸಲು ನೆರವು ಬೇಕಾದಲ್ಲಿ ಸಹಾಯ ಕೋರುವುದು ಎಷ್ಟು ಅವಶ್ಯಕ ಎಂಬುದನ್ನು ಹೇಳುತ್ತದೆ.
icon

(4 / 5)

ನಮ್ಮ ಮನಃಸ್ಥಿತಿ, ಧೈರ್ಯ ಮತ್ತು ಪ್ರತಿಯೊಬ್ಬರೂ ಎದುರಿಸುವ ಸದ್ದಿಲ್ಲದ ಹೋರಾಟಗಳ ಬಗ್ಗೆ ಆಳವಾದ ಅನುಭವ ನೀಡುವ ಚಿತ್ರ. ಒಂದೊಳ್ಳೆ ಭಾವನಾತ್ಮಕ ಅನುಭವಕ್ಕಾಗಿ ಖಂಡಿತ ವೀಕ್ಷಣೆಗೆ ಅರ್ಹ ಎನ್ನುತ್ತಾರೆ ನಿರ್ಮಾಪಕ ರಾಜ್ ವಿಜಯ್ ಹಾಗೂ ಸಹ ನಿರ್ಮಾಪಕ ಬಿ.ಎನ್ ಸ್ವಾಮಿ.
icon

(5 / 5)

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು