Kannada News  /  Photo Gallery  /  Grand Welcome For Prime Minister Modi Who Arrived In Hubli Road Show See Photos

PM Modi road show in Hubli: ಹುಬ್ಬಳ್ಳಿಗೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ, ರೋಡ್ ಶೋ: ಫೋಟೋಸ್

12 January 2023, 18:23 IST HT Kannada Desk
12 January 2023, 18:23 , IST

ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ಮೋದಿ ಭರ್ಜರಿ ರೋಡ್‌ ಶೋ ನಡೆಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಅವರನ್ನು ನೋಡಲು ರಸ್ತೆ ಬದಿಗಳಲ್ಲಿ ಜನಸಾಗರವೇ ಸೇರಿತ್ತು. ಅದರ ಫೋಟೋಗಳು ಇಲ್ಲಿವೆ.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಸಚಿವ ಜೋಶಿ, ನಳಿನ್ ಕುಮಾರ್ ಕಟೀಲ್ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರು ಸ್ವಾಗತಿಸಿದರು. 

(1 / 10)

ಪ್ರಧಾನಿ ನರೇಂದ್ರ ಮೋದಿ ಮೇಲೆ ಹೂವು ಚೆಲ್ಲುವ ಮೂಲಕ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ಘೋಷಣೆಗಳ ಕೂಗಿ ಅದ್ಧೂರಿಯಾಗಿ ಸ್ವಾಗತಿಸಿದರು. 

(2 / 10)

ರಸ್ತೆಯ ಬದಿಗಳಲ್ಲಿ ನಿಂತಿದ್ದ ನೂರಾರು ಅಭಿಮಾನಗಳು ಪ್ರಧಾನಿ ಮೋದಿ ಅವರನ್ನು ಕಣ್ತುಂಬಿಕೊಂಡರು. ಕೆಲವರು ಸೆಲ್ಫಿ ಪ್ಲೀಸ್ ಎಂಬ ಭಿತ್ತಿಪತ್ರವನ್ನು ಪ್ರದರ್ಶಿಸಿದರು. 

(3 / 10)

ಬಿಸಿಲಿನ ನಡುವೆ ಇಬ್ಬರು ಮಹಿಳೆಯರು ತಾವಿದ್ದ ಸ್ಥಳದಿಂದಲೇ ಪ್ರಧಾನಿ ಮೋದಿ ಅವರಿಗೆ ನಮಸ್ಕರಿಸಿದರು. 

(4 / 10)

ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪವಾಯಿತು. ಬಾಲಕನೊರ್ವ ಓಡಿ ಬಂದು ಪ್ರಧಾನಿಗೆ ಹೂವಿನ ಹಾರ ಹಾಕಲು ಮುಂದಾದನು. ಆಗ ಭದ್ರತಾ ಸಿಬ್ಬಂದಿ ಆತನನ್ನು ತಡೆದರೂ ಬಾಲಕನಿಂದ ಮೋದಿ ಹೂವಿನ ಹಾರವನ್ನು ತೆಗೆದುಕೊಂಡರು. 

(5 / 10)

ಗೃಹಣಿಯೊಬ್ಬರು ತಾವಿದ್ದ ಸ್ಥಳದಲ್ಲಿಂದಲೇ ಪ್ರಧಾನಿ ಮೋದಿಯತ್ತ ಕೈಬೀಸಿದರು. 

(6 / 10)

ಗೃಹಣಿಯೊಬ್ಬರು ತಾವಿದ್ದ ಸ್ಥಳದಲ್ಲಿಂದಲೇ ಪ್ರಧಾನಿ ಮೋದಿಯತ್ತ ಕೈಬೀಸಿದರು. 

ಯುವತಿಯರು ಹರ್ಷೋದ್ಗಾರಗಳೊಂದಿಗೆ ಮೋದಿ ಮೋದಿ ಎಂದು ಕೂಗಿದರು. 

(7 / 10)

ಯುವತಿಯರು ಹರ್ಷೋದ್ಗಾರಗಳೊಂದಿಗೆ ಮೋದಿ ಮೋದಿ ಎಂದು ಕೂಗಿದರು. 

ರಸ್ತೆ ಪಕ್ಕದ ಕಟ್ಟಡಗಳ ಮೇಲೆ ನಿಂತ ಹಲವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಣ್ತುಂಬಿಕೊಂಡರು. 

(8 / 10)

29ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆಗೆ ಹುಬ್ಬಳ್ಳಿಗೆ ಆಗಮಿಸಿರುವ ಪ್ರಧಾನಿ ಮೋದಿ, ಭರ್ಜರಿ ರೋಡ್‌ ಶೋ ನಡೆಸಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ, ರೈಲ್ವೆ ಮೈದಾನದವರೆಗೆ ಪ್ರಧಾನಿ ಮೋದಿ ರೋಡ್‌ ಶೋ ನಡೆಸಿದ್ದು, ಈ ವೇಳೆ ಪ್ರಧಾನಿ ಮೋದಿ ಅವರನ್ನು ನೋಡಲು ಜನಸಾಗರವೇ ಸೇರಿತ್ತು. 

(9 / 10)

ಪ್ರಧಾನಿ ನರೇಂದ್ರ ಮೋದಿ ಅವರು ರಸ್ತೆಯ ಬದಿಗಳಲ್ಲಿ ನೆರದಿದ್ದ ಜನರತ್ತ ಕೈಬೀಸಿದರು. 

(10 / 10)

ಇತರ ಗ್ಯಾಲರಿಗಳು