Guru Transit: ವೃಷಭ ರಾಶಿಯಲ್ಲಿ ಗುರು ಸಂಚಾರ; ಈ 3 ರಾಶಿಯವರಿಗೆ ಆರೋಗ್ಯ ಸಮಸ್ಯೆ, ಕೆಲಸದ ಸ್ಥಳದಲ್ಲಿ ತೊಂದರೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Guru Transit: ವೃಷಭ ರಾಶಿಯಲ್ಲಿ ಗುರು ಸಂಚಾರ; ಈ 3 ರಾಶಿಯವರಿಗೆ ಆರೋಗ್ಯ ಸಮಸ್ಯೆ, ಕೆಲಸದ ಸ್ಥಳದಲ್ಲಿ ತೊಂದರೆ

Guru Transit: ವೃಷಭ ರಾಶಿಯಲ್ಲಿ ಗುರು ಸಂಚಾರ; ಈ 3 ರಾಶಿಯವರಿಗೆ ಆರೋಗ್ಯ ಸಮಸ್ಯೆ, ಕೆಲಸದ ಸ್ಥಳದಲ್ಲಿ ತೊಂದರೆ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳ ಚಲನೆಯು ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನಲೆಯಲ್ಲಿ ಗುರುವಿನ ಚಲನವಲನದಿಂದ ಹಲವು ರಾಶಿಯವರಿಗೆ ಪ್ರತಿಕೂಲ ಸನ್ನಿವೇಶಗಳು ಎದುರಾಗಲಿವೆ.

9 ಗ್ರಹಗಳಲ್ಲಿ ಗುರುವನ್ನು ಅತ್ಯಂತ ಪವಿತ್ರ ಗ್ರಹವಾಗಿದೆ. ದೇವರ ರಾಜ ಗುರುವನ್ನು ಅತ್ಯಂತ ಶಕ್ತಿಶಾಲಿ ಗ್ರಹವೆಂದು ಪರಿಗಣಿಸಲಾಗಿದೆ. ಅವನು ಸಂಪತ್ತು, ಸಮೃದ್ಧಿ, ಸಂತಾನ ಮತ್ತು ಮದುವೆಗೆ ಕಾರಣನಾಗುತ್ತಾರೆ.  ಗುರುವನ್ನು ಬೃಹಸ್ಪತಿ ಎಂದೂ ಕರೆಯುತ್ತಾರೆ. ಜಾತಕದಲ್ಲಿ ಆತನ ಸ್ಥಾನ ಬಳಗೊಳ್ಳಲು ಜನರು ಸಾಕಷ್ಟು ಹೋಮ, ಪೂಜೆಗಳನ್ನು ಮಾಡುತ್ತಾರೆ, ದಾನ ಕೈಗೊಳ್ಳುತ್ತಾರೆ.
icon

(1 / 7)

ಗುರುವು ವರ್ಷಕ್ಕೊಮ್ಮೆ ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ಈ ವರ್ಷ ಗುರುವಿನ ಸಂಕ್ರಮಣವನ್ನು ಗ್ರಹಗಳ ಅತಿ ದೊಡ್ಡ ಸಂಕ್ರಮಣ ಎಂದು ಕರೆಯುತ್ತಾರೆ.  ಮೇ 3 ರಂದು, ಗುರುವು ಮೇಷದಿಂದ ಶುಕ್ರನ ಸ್ವಂತ ವೃಷಭ ರಾಶಿಗೆ ಪ್ರವೇಶಿಸಿದ್ದಾನೆ. 
icon

(2 / 7)

ಗುರು ಸಂಕ್ರಮಣವು ಕೆಲವು ರಾಶಿಚಕ್ರದ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಕೆಲವರಿಗೆ ಸಮಸ್ಯೆಯನ್ನುಂಟುಮಾಡುತ್ತದೆ.  ಗುರುವಿನ ರಾಶಿ ಬದಲಾವಣೆಯಿಂದ ಯಾವ ರಾಶಿಯವರು ಏನು ಸಮಸ್ಯೆ ಎದುರಿಸಲಿದ್ದಾರೆ ನೋಡೋಣ. 
icon

(3 / 7)

ಧನು ರಾಶಿ: ಗುರುವು ಧನಸ್ಸು ರಾಶಿಯ 6ನೇ ಮನೆಯಲ್ಲಿ ಸಾಗುತ್ತಾನೆ. ಇದು ನಿಮಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆರೋಗ್ಯದ ಬಗ್ಗೆ ನೀವು ಬಹಳ ಜಾಗರೂಕರಾಗಿರಬೇಕು. ಕೆಲಸದ ಸ್ಥಳದಲ್ಲಿ ನಿಮಗೆ ಶತ್ರುಗಳು ಹೆಚ್ಚಾಗಬಹುದು. ಎಲ್ಲರೂ ನಿಮ್ಮ ವಿರುದ್ಧ ಪಿತೂರಿ ಮಾಡಲು ಸಿದ್ಧರಿರುತ್ತಾರೆ. ಆದ್ದರಿಂದ ಪ್ರತಿ ಹೆಜ್ಜೆಯಲ್ಲೂ ನೀವು ಬಹಳ ಎಚ್ಚರಿಕೆಯಿಂದ ಇರಬೇಕು. 
icon

(4 / 7)

ತುಲಾ: ಗುರು ಗ್ರಹವು ನಿಮ್ಮ ರಾಶಿಚಕ್ರದ ಎಂಟನೇ ಮನೆಯಲ್ಲಿ ಸಾಗುತ್ತಿದೆ. ಈ ಸಮಯದಲ್ಲ ನೀವು  ನಿಮ್ಮ ಸಹೋದ್ಯೋಗಿಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ನಿಮ್ಮ ವ್ಯಾಪಾರ ಕುಂಠಿತವಾಗಬಹುದು, ಉದ್ಯೋಗದಲ್ಲಿ ಯಾವುದೇ ಪ್ರಗತಿ ಇರುವುದಿಲ್ಲ. 
icon

(5 / 7)

 ಮೀನ : ಬೃಹಸ್ಪತಿಯು ಮೀನ ರಾಶಿಯವರ 3ನೇ ಮನೆಯಲ್ಲಿದ್ದಾನೆ. ಇದು ನಿಮ್ಮ ಸೋಮಾರಿತನವನ್ನು ಹೆಚ್ಚಿಸುತ್ತದೆ. ಕೈಗೊಂಡ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಲು ಬಹಳ ಸಮಯ ಬೇಕಾಗುತ್ತದೆ. ನೀವು ಕೆಲಸ ಮಾಡುವ ಸ್ಥಳದಲ್ಲಿ ಬಹಳ ಜಾಗರೂಕರಾಗಿರಬೇಕು. 
icon

(6 / 7)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(7 / 7)

ಇತರ ಗ್ಯಾಲರಿಗಳು