Guru Transit: ವೃಷಭ ರಾಶಿಯನ್ನು ಪ್ರವೇಶಿಸಲಿರುವ ಗುರು; ನವ ಪಂಚಮ ಯೋಗದಿಂದ ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ
Guru Transit: ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ಚಲನೆಗೆ ಬಹಳ ಪ್ರಾಮುಖ್ಯತೆ ಇದೆ. ವ್ಯಕ್ತಿಯ ಜೀವನದ ಮೇಲೆ ಗ್ರಹಗತಿಗಳ ಬಹಳ ಪರಿಣಾಮ ಬೀರುತ್ತದೆ ಈ ಹಿನ್ನೆಲೆ ಗುರುವಿನ ಆಶೀರ್ವಾದದಿಂದ ಅನೇಕ ರಾಶಿಯವರಿಗೆ ಉತ್ತಮ ಫಲಿತಾಂಶ ದೊರೆಯಲಿದೆ.
(1 / 7)
ಒಂಬತ್ತು ಗ್ರಹಗಳಲ್ಲಿ ಗುರುವನ್ನು ಪ್ರಮುಖ ಗ್ರಹ ಎಂದು ಕರೆಯಲಾಗುತ್ತದೆ. ಇದನ್ನು ಬೃಹಸ್ಪತಿ ಎಂದೂ ಕರೆಯಲಾಗುತ್ತದೆ. ಗುರುವು ವರ್ಷಕ್ಕೊಮ್ಮೆ ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ಗುರುವು ಯಾವ ರಾಶಿಯಲ್ಲಿ ಸಂಚರಿಸುವನೋ ಆ ರಾಶಿಯವರಿಗೆ ಐಶ್ವರ್ಯ ನೀಡುತ್ತಾನೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.
(2 / 7)
ಗುರುವು ಪ್ರಸ್ತುತ ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದು ಮೇ ತಿಂಗಳಲ್ಲಿ ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ. ಇದರ ಪರಿಣಾಮ ಕೆಲವು ರಾಶಿಯವರಿಗೆ ಉತ್ತಮ ಫಲಿತಾಂಶ ದೊರೆಯಲಿದೆ.
(3 / 7)
ಕೇತು ಯಾವಾಗಲೂ ಹಿಮ್ಮುಖವಾಗಿ ಚಲಿಸುತ್ತಾನೆ. ರಾಹು ಮತ್ತು ಕೇತುಗಳು ಬೇರ್ಪಡಿಸಲಾಗದ ಗ್ರಹಗಳು. ಪ್ರಸ್ತುತ ಕೇತುವು ಕನ್ಯಾರಾಶಿಯಲ್ಲಿ ನೆಲೆಸಿದ್ದಾನೆ.
(4 / 7)
ಮೇ ತಿಂಗಳಲ್ಲಿ ಗುರುವು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಅದೇ ಸಮಯದಲ್ಲಿ, ಕನ್ಯಾರಾಶಿಯಲ್ಲಿ ಕೇತು ಸಂಕ್ರಮಿಸುವ ಸಂದರ್ಭದಲ್ಲಿ ನವ ಪಂಚ ಯೋಗವು ರೂಪುಗೊಳ್ಳುತ್ತದೆ. ಈ ಯೋಗವು ಖಂಡಿತವಾಗಿಯೂ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಸಂಪೂರ್ಣ ಅದೃಷ್ಟ ಖುಲಾಯಿಸಲಿದೆ.
(5 / 7)
ವೃಷಭ: ನವ ಪಂಚಮ ರಾಜಯೋಗವು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಈ ಯೋಗದಿಂದ ಹಣದ ಕೊರತೆ ಇರುವುದಿಲ್ಲ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ದೊರೆಯುತ್ತದೆ. ಉದ್ಯೋಗ ಮತ್ತು ವ್ಯವಹಾರದ ವಿಚಾರವಾಗಿ ಉತ್ತಮ ಲಾಭ ಪಡೆಯಲಿದ್ದೀರಿ.
(6 / 7)
ಮಕರ: ನವ ಪಂಚಮ ಯೋಗದಿಂದ ಮಕರ ರಾಶಿಯವರ ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸ ಪೂರ್ಣಗೊಳ್ಳಲಿದೆ. ನಿಮಗೆ ಯೋಗದ ಅವಧಿ ಪ್ರಾರಂಭವಾಗುತ್ತದೆ. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಬಡ್ತಿ ಮತ್ತು ವೇತನ ಹೆಚ್ಚಳವನ್ನು ಪಡೆಯುವಿರಿ.
ಇತರ ಗ್ಯಾಲರಿಗಳು