ಗುರುಗ್ರಾಮ ಎಟಿಎಂ ರಾಬರಿ: ಎಟಿಎಂ ಯಂತ್ರ ಇದ್ದಂತೆಯೇ ಇದೆ, ಆದರೆ 10 ಲಕ್ಷ ರೂಪಾಯಿ ಮಂಗಮಾಯ, ಹೇಗೆ ಸಾಧ್ಯ, ಮುಂದುವರಿದಿದೆ ಪೊಲೀಸ್ ತನಿಖೆ
ಎಟಿಎಂ ದರೋಡೆ ಪ್ರಕರಣಗಳು ಇತ್ತೀಚೆಗೆ ಸಾಮಾನ್ಯ. ಆದರೆ, ಗುರುಗ್ರಾಮದ ಎಟಿಎಂ ರಾಬರಿ ಸಾಮಾನ್ಯವಲ್ಲ. ಎಟಿಎಂ ಯಂತ್ರ ಇದ್ದಂತೆಯೇ ಇದೆ. ಅದಕ್ಕೇನೂ ಹಾನಿಯಾಗಿಲ್ಲ. ಆದರೂ 10 ಲಕ್ಷ ರೂಪಾಯಿ ಮಾತ್ರ ಅದರೊಳಗಿಲ್ಲ. ಈ ರೀತಿ ದರೋಡೆ ಹೇಗೆ ಸಾಧ್ಯ?- ಪೊಲೀಸ್ ತನಿಖೆ ಮುಂದುವರಿದಿದೆ. ವಿವರ ಹೀಗಿದೆ.
(1 / 10)
ಉತ್ತರ ಪ್ರದೇಶದ ಗುರುಗ್ರಾಮದ ಸೆಕ್ಟರ್ 34ರ ರಿಕೋ ಆಟೋ ಇಂಡಸ್ಟ್ರೀಸ್ ಸಮೀಪದ ಆಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಇಂತಹ ಅಸಾಮಾನ್ಯ ದರೋಡೆ ನಡೆದಿರುವಂಥದ್ದು. ಎಟಿಎಂ ಯಂತ್ರಕ್ಕೆ ಹಾನಿ ಮಾಡದೇ 10 ಲಕ್ಷ ರೂಪಾಯಿ ಎಗರಿಸಿದ ಹೈಟೆಕ್ ಕಳ್ಳ ಯಾರು ಎಂಬ ಕುತೂಹಲವೂ ಪೊಲೀಸರಿಗೆ ಇತ್ತು ಎಂದು ಲೈವ್ ಹಿಂದೂಸ್ತಾನ್ ವರದಿ ಮಾಡಿದೆ (ಸಾಂಕೇತಿಕ ಚಿತ್ರ)
(2 / 10)
ಗುರುಗ್ರಾಮ ಎಟಿಎಂ ರಾಬರಿ ಪ್ರಕರಣ ಸಂಬಂಧಿಸಿ ಶಂಕಿತ ಆರೋಪಿಯೊಬ್ಬನನ್ನು ಪೊಲೀಸರು ಶನಿವಾರ ಬಂಧಿಸಿದರು. ಆತನನ್ನು ವಿಚಾರಣೆಗೊಳಪಡಿಸಿದಾಗ, ಆತ ಎಟಿಎಂ ಯಂತ್ರಕ್ಕೆ ಹಾನಿ ಮಾಡದೇ 10 ಲಕ್ಷ ರೂಪಾಯಿ ದರೋಡೆ ಮಾಡಿದ್ದು ಎಲ್ಲರನ್ನೂ ದಂಗುಬಡಿಸಿತ್ತು. ಬಹುಶಃ ಇಂತಹ ಪ್ರಕರಣ ಇದೇ ಮೊದಲು ಎನ್ನುತ್ತಾರೆ ಪೊಲೀಸರು. (ಸಾಂಕೇತಿಕ ಚಿತ್ರ)
(Pexel Photos)(3 / 10)
ಆತ ಎಟಿಎಂ ಯಂತ್ರವನ್ನು ಬುಡ ಸಹಿತ ಕಿತ್ತು ಹಾಕಿಲ್ಲ. ಅದನ್ನು ಒಡೆದು ಹಾಕಿಲ್ಲ. ಅಥವಾ ಹಿಂಬದಿಯಿಂದ ಮುರಿದು ಹಣ ತೆಗೆದುಕೊಂಡಿಲ್ಲ. ಈ ವಿಲಕ್ಷಣ ದರೋಡೆಯ ದೂರು ದಾಖಲಿಸಿಕೊಂಡ ಗುರುಗ್ರಾಮ ಪೊಲೀಸರು ತನಿಖೆ ನಡೆಸಿದ್ದಾರೆ. (ಸಾಂಕೇತಿಕ ಚಿತ್ರ)
(Pexel Photos)(4 / 10)
ದರೋಡೆಗೆ ಒಳಗಾದ ಆಕ್ಸಿಸ್ ಬ್ಯಾಂಕ್ ಎಟಿಎಂ ಅನ್ನು ಹಿಟಾಚಿ ಪೇಮೆಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿದೆ. ತಮಿಳುನಾಡು ಚೆನ್ನೈನ ಸಿಲಿಕಾನ್ ಟವರ್‌ನಲ್ಲಿ ಇದರ ಪ್ರಧಾನ ಕಚೇರಿ ಇರುವಂಥದ್ದು. ದರೋಡೆ ನಡೆದಿರುವ ಬಗ್ಗೆ ಕಂಪನಿಯ ವಕೀಲ ಗೌರವ್ ಕುಮಾರ್ ದೂರು ನೀಡಿದ್ದರು. (ಸಾಂಕೇತಿಕ ಚಿತ್ರ)
(5 / 10)
ಅವರು ಕೊಟ್ಟ ದೂರು ಪ್ರಕಾರ, ಏಪ್ರಿಲ್ 30ರಂದು ರಾತ್ರಿ ಅಪರಿಚಿತ ಕಳ್ಳರು ಎಟಿಎಂ ಯಂತ್ರವನ್ನು ಮುರಿಯದೇ ಅಥವಾ ಅದಕ್ಕೆ ಹಾನಿ ಮಾಡದೇ ಅದರಿಂದ 10 ಲಕ್ಷ ರೂಪಾಯಿ ದೋಚಿದ್ಧಾರೆ. ಎಟಿಎಂನಲ್ಲಿ ಅಳವಡಿಸಿದ್ದ ಪಿಸಿ ಕೋರ್, ಚೆಸ್ಟ್ ಲಾಕ್, ಡಿವಿಆರ್, ಬ್ಯಾಟರಿ, ಹಾರ್ಡ್ ಡಿಸ್ಕ್‌ಗಳನ್ನೂ ಕಳವು ಮಾಡಲಾಗಿದೆ. (ಸಾಂಕೇತಿಕ ಚಿತ್ರ)
(Pexel Photos)(6 / 10)
ಗುರುಗ್ರಾಮ್ ಪೊಲೀಸರು ಈ ಕಂಪನಿಗೆ ನೋಟಿಸ್ ನೀಡಿದ್ದಾರೆ. ಇದು ಕಳ್ಳತನದ ಈ ಘಟನೆಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತದೆ. ನಿರ್ವಹಣಾ ತಂಡದ ಅಧಿಕಾರಿ ಅಥವಾ ಉದ್ಯೋಗಿ ಈ ಕಳ್ಳರೊಂದಿಗೆ ಶಾಮೀಲಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. (ಸಾಂಕೇತಿಕ ಚಿತ್ರ)
(Pexel Photos)(7 / 10)
ಎಟಿಎಂ ಅನ್ನು ಹ್ಯಾಕ್ ಮಾಡುವ ಮೂಲಕ ಹ್ಯಾಕರ್‌ಗಳು ಈ ಮೊತ್ತವನ್ನು ಹಿಂಪಡೆದಿದ್ದಾರೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಸಾಂಕೇತಿಕ ಚಿತ್ರ)
(Pexel Photos)(8 / 10)
ಪ್ರತಿ ಎಟಿಎಂಗೆ ಅಲಾರಂ ಸಂಪರ್ಕ ಕಲ್ಪಿಸಲಾಗಿದೆ. ಯಾವುದೇ ರೀತಿಯ ತೊಂದರೆ ಇದ್ದರೆ, ಅದು ಕೂಡಲೇ ಸದ್ದು ಮಾಡುತ್ತದೆ. ಆದರೆ ಇಲ್ಲಿ ಅದು ನಡೆದಿರಲಿಲ್ಲ. ರಿಕೋ ಕಂಪನಿ ಮತ್ತು ಈ ಎಟಿಎಂ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. (ಸಾಂಕೇತಿಕ ಚಿತ್ರ)
(Pexel Photos)(9 / 10)
ಎಟಿಎಂ ತೆರೆಯಲು ಕೀಲಿ ಮತ್ತು ಒಳಗೆ ಡಿಜಿಟಲ್ ಲಾಕ್ ತೆರೆಯಲು ಪಾಸ್ ವರ್ಡ್ ಬೇಕು. ಹೀಗಿರುವಾಗ, ಪೊಲೀಸರಿಗೆ ಈ ಕಳವು ಪ್ರಕರಣ ಕಗ್ಗಂಟಾಗಿ ಉಳಿದಿದೆ. ಗಮನಿಸಬೇಕಾದ ವಿಷಯ ಏನು ಅಂದರೆ, ಕಳವು ನಡೆದು 10 ದಿನಗಳ ಬಳಿಕ ದೂರು ನೀಡಲಾಗಿದೆ. (ಸಾಂಕೇತಿಕ ಚಿತ್ರ)
(Pexel Photos)ಇತರ ಗ್ಯಾಲರಿಗಳು