ಕೂದಲು ಉದುರೋದು, ಬಿಳಿ ಕೂದಲಿನ ಕೂದಲಿನ ಸಮಸ್ಯೆಯಿಂದ ಬೇಸರವಾಗಿದ್ರೆ, ಪರಿಹಾರಕ್ಕೆ ಕಿವಿ ಹಣ್ಣನ್ನು ಹೀಗೆ ಬಳಸಿ ನೋಡಿ
ಕಿವಿ ಹಣ್ಣು ಆರೋಗ್ಯಕ್ಕೆ ಮಾತ್ರವಲ್ಲ, ಕೂದಲಿಗೆ ಕೂಡ ಅದ್ಭುತ ಪ್ರಯೋಜನಗಳನ್ನು ಮಾಡುತ್ತದೆ. ಕೂದಲಿಗೆ ಕಿವಿ ಹಣ್ಣಿನ ಕೆಲವು ಮನೆಮದ್ದುಗಳು ಮತ್ತು 5 ಪ್ರಯೋಜನಗಳು ಇಲ್ಲಿವೆ.
(1 / 14)
ಕಿವಿ ಸಿಹಿ-ಹುಳಿ ರುಚಿ ಹೊಂದಿರುವ ಹಣ್ಣಾಗಿದ್ದು, ಇದು ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಚರ್ಮ, ಕೂದಲು ಮತ್ತು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ, ಎ ಮತ್ತು ಇ ಗಳಲ್ಲಿ ಅಧಿಕವಾಗಿದೆ. ಇದು ತಲೆಗೂದಲು ಉದುರುವುದನ್ನು ಹಾಗೂ ಬಿಳಿ ಕೂದಲನ್ನು ತಡೆಯಲು ಸಹಾಯ ಮಾಡುತ್ತದೆ. ಕಿವಿ ಹಣ್ಣು ಕೂದಲಿಗೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.
(Pixabay)(2 / 14)
ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ: ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ಇದು ಕಾಲಜನ್ ಉತ್ಪಾದನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಕಾಲಜನ್ ಒಂದು ರಚನಾತ್ಮಕ ಪ್ರೋಟೀನ್ ಆಗಿದ್ದು, ಇದು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ.
(Pixabay)(3 / 14)
ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ: ಅಧ್ಯಯನವೊಂದರ ಪ್ರಕಾರ, ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಇ ಅಂಶ ಹೇರಳವಾಗಿದೆ. ಈ ವಿಟಮಿನ್‌ಗಳು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಕೂದಲಿನ ಆರೋಗ್ಯವನ್ನು ಸುಧಾರಿಸಲು ಅಗತ್ಯವಾಗಿದೆ. ಅವು ಕೂದಲನ್ನು ಬೇರಿನಿಂದ ಬಲಪಡಿಸುವ ಮೂಲಕ ಆರೋಗ್ಯಕರ ಕೂದಲನ್ನು ಉತ್ತೇಜಿಸುತ್ತವೆ. ನೆತ್ತಿಯಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಕಿವಿ ಹಣ್ಣಿನಲ್ಲಿ ಕಬ್ಬಿಣ, ಸತು, ಮೆಗ್ನೀಸಿಯಮ್ ಮತ್ತು ರಂಜಕವೂ ಇದ್ದು, ಇವೆಲ್ಲವೂ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತವೆ ಹಾಗೂ ಕೂದಲು ಉದುರುವಿಕೆಯನ್ನು ನಿಯಂತ್ರಿಸುತ್ತದೆ.
(Pixabay)(4 / 14)
ಬಿಳಿ ಕೂದಲು ಬರುವುದನ್ನು ತಡೆಯುತ್ತದೆ: ಅಧ್ಯಯನವೊಂದರ ಪ್ರಕಾರ, ಕಿವಿಯಲ್ಲಿರುವ ಪೋಷಕಾಂಶಗಳು ಕೂದಲಿನ ಬಣ್ಣವನ್ನು ಕಾಪಾಡಿಕೊಳ್ಳಲು ಕಾರಣವಾಗುವ ವರ್ಣದ್ರವ್ಯವಾದ ಮೆಲನಿನ್ ಉತ್ಪಾದನೆಗೆ ಅವಶ್ಯಕವಾಗಿದೆ. ಇದು ಕೂದಲಿನ ನೈಸರ್ಗಿಕ ಬಣ್ಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತಲೆಗೂದಲು ಅಕಾಲಿಕವಾಗಿ ಬಿಳಿ ಬಣ್ಣಕ್ಕೆ ತಿರುಗುವುದನ್ನು ನಿಯಂತ್ರಿಸುತ್ತದೆ.
(Pixabay)(5 / 14)
ಸೀಳು ಕೂದಲು ನಿವಾರಿಸುತ್ತದೆ: ಕಿವಿಯಲ್ಲಿ ಫೋಲೇಟ್, ಪೊಟ್ಯಾಸಿಯಮ್ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಸೇರಿದಂತೆ ವಿವಿಧ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದು ಕೂದಲಿನ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಈ ಪೋಷಕಾಂಶಗಳು ಕೂದಲಿನ ತೇವಾಂಶ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಶುಷ್ಕತೆ, ಕೂದಲು ಉದುರುವಿಕೆ ಮತ್ತು ಸೀಳು ಕೂದಲನ್ನು ಕಡಿಮೆ ಮಾಡುತ್ತದೆ.
(Pixabay)(6 / 14)
ತಲೆಹೊಟ್ಟು ಕಡಿಮೆ ಮಾಡುತ್ತದೆ: ಕಿವಿ ಹಣ್ಣು ಕಬ್ಬಿಣ, ಸತು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದ್ದು, ಇದು ತಲೆಹೊಟ್ಟುಗೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ನೆತ್ತಿಯ ಚರ್ಮಕ್ಕೆ ಇದು ಸಹಕಾರಿಯಾಗಿದೆ.
(Pixabay)(7 / 14)
ಕೂದಲಿಗೆ ಕಿವಿ ಹಣ್ಣು ಬಳಸುವುದು ಹೇಗೆ?ಈ ರಸಭರಿತ ಹಣ್ಣಿನ ಪ್ರಯೋಜನಗಳನ್ನು ಪಡೆಯಲು ಕೂದಲಿನ ಆರೈಕೆಯ ದಿನಚರಿಯಲ್ಲಿ ಹಲವು ವಿಧಗಳಲ್ಲಿ ಬಳಸಬಹುದು. ನೀವು ಪ್ರಯತ್ನಿಸಬಹುದಾದ ಕೆಲವು ಸುಲಭ ಮತ್ತು ಪರಿಣಾಮಕಾರಿ ಮನೆಮದ್ದುಗಳು ಇಲ್ಲಿವೆ:
(Pixabay)(8 / 14)
ಕಿವಿ ಹೇರ್ ಮಾಸ್ಕ್: ಹಣ್ಣನ್ನು ಮ್ಯಾಶ್ ಮಾಡಿ, ಒಂದು ಚಮಚ ಜೇನುತುಪ್ಪ ಮತ್ತು 2 ಹನಿ ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲು ಮತ್ತು ನೆತ್ತಿಗೆ ಹಚ್ಚಿ, 30 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ಹೇರ್ ಮಾಸ್ಕ್ ಕೂದಲು ಮತ್ತು ನೆತ್ತಿಯನ್ನು ಪೋಷಿಸಲು ಮತ್ತು ತೇವಗೊಳಿಸಲು ಸಹಾಯ ಮಾಡುತ್ತದೆ.
(Pixabay)(9 / 14)
ಕಿವಿ ರಸದಿಂದ ಕೂದಲು ತೊಳೆಯಿರಿ: ಒಂದೆರಡು ಕಿವಿ ಹಣ್ಣುಗಳನ್ನು ನೀರಿನೊಂದಿಗೆ ಬೆರೆಸಿ. ಇದರ ರಸವನ್ನು ಕೂದಲಿನ ಬುಡಕ್ಕೆ ಹಚ್ಚಿ, ನೆತ್ತಿಗೆ ಮಸಾಜ್ ಮಾಡಿ. ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಇದು ಕೂದಲಿನ ಹೊಳಪಿಗೆ ಸಹಾಯಕವಾಗಿದೆ.
(Pixabay)(10 / 14)
ಕಿವಿ ಹೇರ್ ಕಂಡಿಷನರ್: ಒಂದು ಕಿವಿ ಹಣ್ಣನ್ನು ಮ್ಯಾಶ್ ಮಾಡಿ, ಅದಕ್ಕೆ 3-4 ಚಮಚ ಮೊಸರು ಅಥವಾ ತೆಂಗಿನ ಹಾಲಿನೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಕೂದಲಿನ ತುದಿಗಳಿಗೆ ಹಚ್ಚಿ, 15-20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ತೊಳೆಯಿರಿ. ಈ ಕಂಡಿಷನರ್ ಕೂದಲನ್ನು ಸಡಿಲಗೊಳಿಸಲು ಮತ್ತು ಮೃದುಗೊಳಿಸಲು ಸಹಾಯ ಮಾಡುತ್ತದೆ.
(Pixabay)(11 / 14)
ಕಿವಿ ಹೇರ್ ಟಾನಿಕ್: ಒಂದು ಕಿವಿ ಹಣ್ಣನ್ನು ಒಂದು ಕಪ್ ನೀರು ಮತ್ತು ಒಂದು ಚಮಚ ಆಪಲ್ ಸೈಡರ್ ವಿನೆಗರ್‌ನೊಂದಿಗೆ ಬೆರೆಸಿ, ಇದನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ತೊಳೆಯುವ ಮೊದಲು ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ಆರೋಗ್ಯಕರ ನೆತ್ತಿಯನ್ನು ಉತ್ತೇಜಿಸಲು ಇದು ಸಹಾಯಕವಾಗಿದೆ.
(Pixabay)(12 / 14)
ಕಿವಿ ಹೇರ್ ಸೀರಮ್: ಒಂದು ಕಿವಿ ಹಣ್ಣನ್ನು ಮ್ಯಾಶ್ ಮಾಡಿ, ಅದಕ್ಕೆ ಮೂರರಿಂದ ನಾಲ್ಕು ಚಮಚ ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಬೆರೆಸಿ. ಕೂದಲನ್ನು ಸ್ವಲ್ಪ ತೇವ ಅಥವಾ ಒದ್ದೆ ಮಾಡಿಕೊಂಡು ಈ ಸೀರಮ್ ಹಚ್ಚಿ. ಮುಖ್ಯವಾಗಿ ತುದಿಗಳಿಗೆ ಹಚ್ಚುವುದು ಉತ್ತಮ.ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಮತ್ತು ಕೂದಲಿನ ಸುಕ್ಕುಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
(Pixabay)(13 / 14)
ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.
(Pixabay)ಇತರ ಗ್ಯಾಲರಿಗಳು