Holi 2024: ಹೋಳಿ ಸಂಭ್ರಮದ ನಡುವೆ ಕೂದಲ ಕಾಳಜಿ ಮರಿಬೇಡಿ; ರಾಸಾಯನಿಕ ಬಣ್ಣಗಳಿಂದ ಕೂದಲನ್ನು ರಕ್ಷಿಸಿಕೊಳ್ಳಲು ಈ ಕ್ರಮ ಪಾಲಿಸಿ
ಹೋಳಿ ಬಣ್ಣಗಳ ಹಬ್ಬ, ಇಲ್ಲಿ ಬಣ್ಣವೇ ಸಂಭ್ರಮ. ಆದರೆ ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಬಣ್ಣಗಳಿಂದ ಚರ್ಮ, ಕೂದಲಿನ ಸಮಸ್ಯೆಗಳು ಬಿಡದಂತೆ ಕಾಡುತ್ತಿವೆ. ಹಾಗಾಗಿ ಹೋಳಿಯಾಡುವ ಮುನ್ನ ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿ.
(1 / 6)
ಇತ್ತೀಚಿನ ದಿನಗಳಲ್ಲಿ ಕೂದಲಿನ ಸಮಸ್ಯೆಗಳು ಹೆಚ್ಚುತ್ತಿವೆ. ಅದರಲ್ಲೂ ಸದ್ಯದಲ್ಲೇ ಹೋಳಿ ಹಬ್ಬವಿದ್ದು, ರಾಸಾಯನಿಕ ಬಣ್ಣಗಳ ಬಳಕೆಯಿಂದ ಕೂದಲಿನ ಸಮಸ್ಯೆಗಳು ಇನ್ನಷ್ಟು ಹೆಚ್ಚುವುದರಲ್ಲಿ ಅನುಮಾನವಿಲ್ಲ. ಬಣ್ಣದ ನೀರು ಕೂದಲಿಗೆ ತಾಕುವುದರಿಂದ ನೆತ್ತಿ ಒಣಗುವುದು, ಕೂದಲು ಸೀಳುವುದು ಇಂತಹ ಹಲವು ಸಮಸ್ಯೆಗಳು ಎದುರಾಗುತ್ತವೆ. ಹೋಳಿ ಬಣ್ಣಗಳ ಪರಿಣಾಮದಿಂದ ಕೂದಲನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ಪರಿಹಾರ.
(Photo by Aris MESSINIS / AFP)(2 / 6)
ಹೋಳಿಯಾಡಲು ಹೋಗುವ ಮೊದಲು ಕೂದಲಿಗೆ ಎಣ್ಣೆ ಹಚ್ಚಲು ಮರೆಯದಿರಿ. ಬಣ್ಣಗಳೊಂದಿಗೆ ಆಟವಾಡುವ ಮೊದಲು ಕೂದಲಿಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಕೂದಲಿಗೆ ಹಾನಿಯಾಗುವುದನ್ನು ತಡೆಯಬಹುದು. ಹೋಳಿಯಾಡಿ ಬಂದ ತಕ್ಷಣ ಸ್ನಾನ ಮಾಡುವುದನ್ನು ಮರೆಯಬೇಡಿ.
(utpal sarkar/ANI Photo)(3 / 6)
ಹೋಳಿಯಾಡುವ ಮುನ್ನ ಕೂದಲನ್ನು ಬಿಗಿಯಾಗಿ ಕಟ್ಟಿಕೊಳ್ಳಿ. ಕೂದಲನ್ನು ಸಡಿಲವಾಗಿ ಹರಡಿಕೊಂಡಿರುವುದರಿಂದ ಬಣ್ಣಗಳು ಕೂದಲಿಗೆ ಅಂಟಿಕೊಳ್ಳುತ್ತವೆ. ಇದರಿಂದ ಇನ್ನಷ್ಟು ಸಮಸ್ಯೆಗಳು ಹೆಚ್ಚಬಹುದು.
(Photo by Raj K Raj/ Hindustan Times)(4 / 6)
ಕೂದಲಿಗೆ ಬಣ್ಣ ಹರಡುವುದನ್ನು ತಡೆಯಲು ಟೋಪಿ ಅಥವಾ ಸ್ಕಾರ್ಫ್ ಧರಿಸುವುದು ಉತ್ತಮ. ಇದರಿಂದ ರಾಸಾಯನಿಕ ಬಣ್ಣದಿಂದ ಕೂದಲನ್ನು ರಕ್ಷಿಸಬಹುದು.
(Photo by Raj K Raj/ Hindustan Times)(5 / 6)
ಹೋಳಿ ಆಡಿದ ನಂತರ ಬಣ್ಣಗಳನ್ನು ಸ್ವಚ್ಛವಾಗಿ ತೆಗೆಯಬೇಕು. ಆದರೆ ಬಿಸಿನೀರನ್ನು ಬಳಸಬಾರದು. ಇದು ನಿಮ್ಮ ಕೂದಲಿಗೆ ಮತ್ತಷ್ಟು ಹಾನಿ ಮಾಡುತ್ತದೆ. ಬದಲಾಗಿ, ನಿಮ್ಮ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ.
(utpal sarkar/ANI Photo)ಇತರ ಗ್ಯಾಲರಿಗಳು