ಹೈಡ್ ಮಾಡೋಕೆ ಏನಿದೆ, ತಗೊ ಮೊಬೈಲ್ ಎನ್ನಿ, ಅದಕ್ಕೂ ಮೊದಲು ಪೇಟಿಎಂ ಪೇಮೆಂಟ್ ಹಿಸ್ಟರಿ ಹೈಡ್ ಮಾಡಿ, ಹೇಗಂತೀರಾ- ಇಲ್ಲಿದೆ ನೋಡಿ ಟಿಪ್ಸ್
ಭಾರತದ ಪ್ರಮುಖ ಡಿಜಿಟಲ್ ಪಾವತಿ ಪ್ಲಾಟ್‌ಫಾರಂ ಪೇಟಿಎಂ ತನ್ನ ಯುಪಿಐ ಬಳಕೆದಾರರಿಗೆ ಹೊಚ್ಚ ಹೊಸ “ಹೈಡ್ ಪೇಮೆಂಟ್” ಫೀಚರ್ ಅನ್ನು ಪರಿಚಯಿಸಿದೆ. ಇದು ಬಳಕೆದಾರರ ಪ್ರೈವೆಸಿಯನ್ನು ಕಾಪಾಡಲು ಅನುಕೂಲ ಮಾಡಿಕೊಡುತ್ತದೆ. ಹೇಗಂತೀರಾ, ಇಲ್ಲಿದೆ ನೋಡಿ ಹೊಸ ಫೀಚರ್ ಬಳಸೋದಕ್ಕೆ ಸಿಂಪಲ್ ಟಿಪ್ಸ್.
(1 / 9)
ಹೈಡ್ ಮಾಡೋಕೆ ಏನಿದೆ, ತಗೊ ಮೊಬೈಲ್ ಎನ್ನಿ, ಅದಕ್ಕೂ ಮೊದಲು ಪೇಟಿಎಂ ಪೇಮೆಂಟ್ ಹಿಸ್ಟರಿ ಹೈಡ್ ಮಾಡಿ. ಪೇಟಿಎಂ ತನ್ನ ಬಳಕೆದಾರರಿಗಾಗಿ ಹೊಚ್ಚ ಹೊಸ ಹೈಡ್ ಪೇಮೆಂಟ್ ಫೀಚರ್ ಅನ್ನು ಪರಿಚಯಿಸಿದೆ. ಅದನ್ನು ಬಳಸೋದು ಹೇಗೆ ಎಂಬುದನ್ನು ತಿಳಿಯೋಣ.
(PC- Paytm)(2 / 9)
ಸಾಮಾನ್ಯವಾಗಿ ಮನೆಗಳಲ್ಲಿ ಕುಟುಂಬ ಸದಸ್ಯರು ಪರಸ್ಪರ ಪೇಮೆಂಟ್ ಹಿಸ್ಟರಿ ಚೆಕ್ ಮಾಡಿಕೊಳ್ಳುವ ಮೂಲಕ ಪತ್ತೇದಾರಿ ಕೆಲಸ ಮಾಡುವುದು ಗಮನಿಸಿರುತ್ತೀರಿ. ಇಂತಹ ಮುಜುಗರದ ಸನ್ನಿವೇಶ ತಪ್ಪಿಸಿಕೊಳ್ಳುವುದಕ್ಕಾಗಿ ಪೇಟಿಎಂ ಹೈಡ್ ಪೇಮೆಂಟ್ ಫೀಚರ್ ಅನ್ನು ಪರಿಚಯಿಸಿದೆ.
(PC- Paytm)(3 / 9)
ಈ ಫೀಚರ್ ಬಳಸಿಕೊಂಡು ತೀರಾ ಖಾಸಗಿ ಪಾವತಿಗಳನ್ನು ಅಂದರೆ ಗಿಫ್ಟ್, ಮೆಡಿಕಲ್‌ನಿಂದ ಔಷಧ ಖರೀದಿ ಅಥವಾ ರಹಸ್ಯ ವೆಚ್ಚಗಳನ್ನು ಮರೆಮಾಡಬಹುದು.
(PC- Paytm)(4 / 9)
ಪೇಟಿಎಂ ಆಪ್‌ನಲ್ಲಿ ನಿಮ್ಮ ಯುಪಿಐ ಪಾವತಿಯ ಹಿಸ್ಟರಿಯನ್ನು ಹೈಡ್ ಮಾಡುವುದಕ್ಕೆ ಹೀಗೆ ಮಾಡಿ- ನಿಮ್ಮ ಪೇಟಿಎಂ ಆಪ್ ಓಪನ್ ಮಾಡಿ. ಅದರಲ್ಲಿ “Balance and History” ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
(5 / 9)
ನಂತರ ಸ್ಕ್ರಾನ್ ಡೌನ್ ಮಾಡುತ್ತ ಬನ್ನಿ. ಟ್ರಾನ್ಸಾಕ್ಷನ್‌ಗಳ ಪೈಕಿ ಯಾವ ವಹಿವಾಟನ್ನು ಮರೆಮಾಡಬೇಕೋ ಅದರ ಮೇಲೆ ಕ್ಲಿಕ್ ಮಾಡಿ, ಅದರಲ್ಲಿ “ಹೈಡ್” ಎಂಬ ಆಯ್ಕೆ ಕಾಣಬಹುದು. ಅದನ್ನು ಕ್ಲಿಕ್ ಮಾಡಿದಾಗ ಕನ್ಫರ್ಮ್ ಮಾಡಲು “ಯೆಸ್” ಎಂಬುದಮನ್ನು ಕ್ಲಿಕ್ ಮಾಡಿ. ಅದು ಮರೆಯಾಗುತ್ತದೆ.
(PC- Paytm)(6 / 9)
ಹೈಡ್ ಮಾಡೋಕೆ ಏನಿದೆ, ತಗೊ ಮೊಬೈಲ್ ಎನ್ನಿ, ಅದಕ್ಕೂ ಮೊದಲು ಪೇಟಿಎಂ ಪೇಮೆಂಟ್ ಹಿಸ್ಟರಿ ಹೈಡ್ ಮಾಡಿ, ಹೇಗೆ ಅನ್ನೋದನ್ನು ತಿಳಿದುಕೊಂಡಿರಿ ಅಲ್ವ. ಒಂದೊಮ್ಮೆ ನಿಮ್ಮ ಫೋನ್‌ನಲ್ಲಿರುವ ಪೇಟಿಎಂ ಆಪ್‌ನಲ್ಲಿ ಈ ಫೀಚರ್ ಇಲ್ಲ ಎಂದಾದರೆ, ಗೂಗಲ್ ಪ್ಲೇಸ್ಟೋರ್‌ಗೆ ಹೋಗಿ ಆಪ್ ಅಪ್ಡೇಟ್ ಮಾಡಿಕೊಳ್ಳಿ.
(PC- Paytm)(7 / 9)
ಹೌದು ಬಹುತೇಕರ ಮನದ ಮಾತು ಇದು. ಹೈಡ್ ಮಾಡುವಷ್ಟು ಪರ್ಸನಲ್ ವಿಚಾರ ಏನಿದೆ ನಮ್ಮ ಹತ್ರ, ಏನೂ ಇಲ್ಲ. ಆದಾಗ್ಯೂ ನನ್ನ ಹಣಕಾಸಿನ ವಹಿವಾಟು ಮಾತ್ರ ಹೈಡ್ ಮಾಡ್ತೇನೆ. ಹೇಗೆ ಅಂದ್ರೆ ಪೇಟಿಎಂ ಪೇಮೆಂಟ್ ಆಪ್‌ನಲ್ಲಿ ಪೇಮೆಂಟ್ ಹಿಸ್ಟರಿಗೆ ಹೋಗಿ, ಪೇಮೆಂಟ್ ಮೇಲೆ ಬೆರಳಿಟ್ಟು ಎಡದಿಂದ ಬಲಕ್ಕೆ ಸ್ವೈಪ್ ಮಾಡಿ ಬಿಡ್ತೇನೆ ಅಷ್ಟೆ.
(PC- Paytm)(8 / 9)
ಈ ಚಿತ್ರದಲ್ಲಿ ಇದೆಯಲ್ಲ ಹಾಗೆ. ಹೈಡ್ ಅನ್ನೋ ಐಕಾನ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಆಯಿತು. ಇನ್ನು ಹೈಡ್ ಮಾಡಿದ ಪೇಮೆಂಟ್ ಹಿಸ್ಟರಿ ಪುನಃ ನೋಡಬೇಕು ಎಂದಾದರೆ ಏನು ಮಾಡಬೇಕು? ಎಂಬ ಪ್ರಶ್ನೆ ಕೂಡ ಸಹಜ. ಇಲ್ಲಿದೆ ಆ ವಿವರ.
(PC- Paytm)ಇತರ ಗ್ಯಾಲರಿಗಳು