ಕಾಶ್ಮೀರಕ್ಕೆ ಬದಲಾಗಿ ನಿಮ್ಮ ನಟಿಯನ್ನು ನಮಗೆ ಕೊಡಿ, ಪಾಕಿಸ್ತಾನಿ ಸೈನಿಕರಿಗೆ ಈ ಬಾಲಿವುಡ್ ಸುಂದರಿ ಮೇಲೆ ಕಣ್ಣು
ಇದೇ ಮೇ 15ರಂದು ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಹುಟ್ಟುಹಬ್ಬ. ಇತ್ತೀಚೆಗೆ ಪಾಕಿಸ್ತಾನದ ವಿರುದ್ಧ ಭಾರತವು ಆಪರೇಷನ್ ಸಿಂದೂರ ಕೈಗೊಂಡಾಗ ಮಾಧುರಿ ದೀಕ್ಷಿತ್ ಕೂಡ ಸುದ್ದಿಯಲ್ಲಿದ್ದರು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಸೈನಿಕರು ಮಾಧುರಿ ದೀಕ್ಷಿತ್‌ರನ್ನು ಕೇಳಿರುವ ಸುದ್ದಿ ಮತ್ತೆ ಇತ್ತೀಚೆಗೆ ವೈರಲ್ ಆಗಿತ್ತು.
(1 / 9)
ಮೇ 15ರಂದು ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಹುಟ್ಟುಹಬ್ಬ. ಇತ್ತೀಚೆಗೆ ಪಾಕಿಸ್ತಾನದ ವಿರುದ್ಧ ಭಾರತವು ಆಪರೇಷನ್ ಸಿಂದೂರ ಕೈಗೊಂಡಾಗ ಮಾಧುರಿ ದೀಕ್ಷಿತ್ ಕೂಡ ಸುದ್ದಿಯಲ್ಲಿದ್ದರು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಸೈನಿಕರು ಮಾಧುರಿ ದೀಕ್ಷಿತ್‌ರನ್ನು ಕೇಳಿರುವ ಸುದ್ದಿ ಮತ್ತೆ ಇತ್ತೀಚೆಗೆ ವೈರಲ್ ಆಗಿತ್ತು. 1999ರಲ್ಲಿ ಕಾರ್ಗಿಲ್ ಯುದ್ಧ ನಡೆದ ಸಮಯದಲ್ಲಿ ಯುದ್ಧವನ್ನು ನಿಲ್ಲಿಸಲು ಪಾಕಿಸ್ತಾನಿ ಸೈನಿಕರು ಯಾರೂ ಊಹಿಸಲು ಸಾಧ್ಯವಿರದ ವಿಚಿತ್ರ ಬೇಡಿಕೆಯನ್ನುಇಟ್ಟಿದ್ದರು.
(2 / 9)
ಆ ಸಮಯದಲ್ಲಿ ಮಶ್ಕೋಹ್ ಹೈಟ್ಸ್‌ನಲ್ಲಿರುವ ಪಾಯಿಂಟ್ 4875 ಸಂಕೀರ್ಣದಲ್ಲಿ ಭಾರತೀಯ ಪಡೆಗಳು ಪಾಕಿಸ್ತಾನಿ ಬಂಕರ್‌ಗಳನ್ನು ಕ್ಲೋಸ್ ಮಾಡಿದ್ದವು. ಗುಂಡಿನ ದಾಳಿಗೆ ತುಸು ಬ್ರೇಕ್ ನೀಡಲಾಗಿತ್ತು. ಅಲ್ಲಿ ಎರಡೂ ಕಡೆಯವರೂ ಪಂಜಾಬಿ ಭಾಷೆ ಮಾತನಾಡುತ್ತಿದ್ದರು.
(3 / 9)
ಇಂತಹ ಸಮಯದಲ್ಲಿ ಎರಡೂ ಕಡೆಯ ಸೈನಿಕರು ಪರಸ್ಪರ ನಿಂದನೆ ಮಾಡುವುದು, ಕೆಟ್ಟದ್ದಾಗಿ ಮಾತನಾಡುವುದು ಸಾಮಾನ್ಯವಾಗಿತ್ತು. ಇದೇ ಸಮಯದಲ್ಲಿ ಕೆಲವೊಂದು ಹಾಸ್ಯಮಯ ಸನ್ನಿವೇಶಗಳೂ ನಡೆಯುತ್ತಿದ್ದವು.
(4 / 9)
12 ನಾರ್ದರ್ನ್ ಲೈಟ್ ಇನ್‌ಫೆಂಟ್ರಿ (ಎನ್‌ಎಲ್‌ಐ)ಯ ಪಾಕಿಸ್ತಾನಿ ಸೈನಿಕನೊಬ್ಬ ತನ್ನ ಬಂಕರ್ ಅನ್ನು ಸುತ್ತುವರೆದಿದ್ದ 13 ಜೆಎಕೆ ರೈಫಲ್ಸ್‌ನ ಸೈನಿಕರ ಕಡೆಗೆ ನೋಡುತ್ತಾ ಹೀಗೆ ಹೇಳಿದ್ದನಂತೆ. "ನೀವು ನಮ್ಮ ಮೇಲೆ ಯಾಕೆ ಇಷ್ಟೊಂದು ಗುಂಡು ಹಾರಿಸುವಿರಿ. ನಮ್ಮ ಮೇಲೆ ಗುಂಡು ಹಾರಿಸಬೇಡಿ. ನಾವು ಹಿಂತಿರುಗುತ್ತೇವೆ. ನಮಗೆ ಮಾಧುರಿ ದೀಕ್ಷಿತ್‌ರನ್ನು ಗಿಫ್ಟ್ ಆಗಿ ನೀಡಿ" ಎಂದು ಹೇಳಿದನಂತೆ.
(5 / 9)
ಆ ಪಾಕಿಸ್ತಾನಿ ಸೈನಿಕನಿಗೆ ಕೊನೆಯದಾಗಿ ದೊರಕಿದ್ದು ಮಾಧುರಿ ದೀಕ್ಷಿತ್ ಅಲ್ಲ. ಗುಂಡೇಟು. ಈ ಘಟನೆಯನ್ನು ಬಳಿಕ ಸೈನಿಕರು ನೆನಪಿಸಿಕೊಂಡಿದ್ದರು.
(6 / 9)
"ಮೊದಲು ನಮ್ಮ ನಡುವೆ ನಿಂದನೆಗಳು ನಡೆದವು. ಇದು ನಮ್ಮ ಮಾನಸಿಕತೆಯ ಮೇಲೆ ಪರಿಣಾಮ ಬೀರುತ್ತಿದ್ದವು. ಅಂತಿಮವಾಗಿ ಅದು ತಮಾಷೆಯಾಗಿ ಬದಲಾಯಿತು. ಪಾಕಿಸ್ತಾನಿ ಸೈನಿಕನೊಬ್ಬ ಗುಂಡು ಹಾರಿಸುವುದನ್ನು ನಿಲ್ಲಿಸಿದನು. ಮಾಧುರಿ ದೀಕ್ಷಿತ್‌ಳನ್ನು ನೀಡುವಂತೆ ಕೇಳಿದನು" ಎಂದು ಸೈನಿಕರೊಬ್ಬರು ನೆನಪಿಸಿಕೊಂಡಿದ್ದರು.
(7 / 9)
"ಆ ಪಾಕಿಸ್ತಾನಿ ಸೈನಿಕನಿಗೆ ಬದುಕಲು ಕೆಲವು ಸೆಕೆಂಡ್‌ಗಳು ಇದ್ದವು. ಆ ಸಮಯದಲ್ಲಿ ಹಾಸ್ಯ ಪ್ರಜ್ಞೆ ತೋರಿದ್ದನು" ಎಂದು ಈ ಹಿಂದೆ ಮಾಧ್ಯಮಗಳಿಗೆ ವೀರ ಚಕ್ರ ಪಡೆದಿರುವ ಬ್ರಿಗೇಡಿಯರ್ ಎಸ್ ವಿಜಯ್ ಭಾಸ್ಕರ್ ಹೇಳಿದ್ದರು.
(8 / 9)
ಅಂದಹಾಗೆ ಇದೇ ಮೇ 15ರಂದು ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಹುಟ್ಟುಹಬ್ಬ. ಇವರು ಮೇ 15 , 1965ರಂದು ಜನಿಸಿದರು.
ಇತರ ಗ್ಯಾಲರಿಗಳು