Rekha Birthday: ಬಾಲಿವುಡ್ ನಟಿ ರೇಖಾ ಸಂಪತ್ತಿಗೆ ವಾರಸುದಾರರು ಯಾರು, ಅಪಾರ ಸಂಪತ್ತು ಕಾರು ಬಂಗಲೆ ಇದ್ದರೂ ಖ್ಯಾತ ನಟಿ ಏಕಾಂಗಿ
Rekha Birthday: ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿರುವ ರೇಖಾ ಅವರ ಹುಟ್ಟುಹಬ್ಬ ಇಂದು. ಬಾಲಿವುಡ್‌ನಲ್ಲಿ ಜನಪ್ರಿಯ ನಟಿಯಾಗಿದ್ದರೂ ಇವರು ವೈಯಕ್ತಿಕ ಜೀವನದಲ್ಲಿ ಏಕಾಂಗಿ. ಗರ್ಗಾಂಜ್‌ನಲ್ಲಿ ಅಪಾರ ಆಸ್ತಿ, ಐಷಾರಾಮಿ ಬಂಗಲೆ ಮತ್ತು ದುಬಾರಿ ಕಾರುಗಳನ್ನು ಹೊಂದಿದ್ದು, ವಿಲಾಸಿ ಜೀವನಶೈಲಿ ಹೊಂದಿದ್ದಾರೆ.
(1 / 5)
ಬಾಲಿವುಡ್ ನಟಿ ರೇಖಾ ಇಂದು (ಅಕ್ಟೋಬರ್ 10) ತಮ್ಮ 69 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 69ರ ಹರೆಯದಲ್ಲೂ ಸೌಂದರ್ಯದ ವಿಷಯದಲ್ಲಿ ಬಾಲಿವುಡ್‌ನ ದೊಡ್ಡ ನಟಿಯರೊಂದಿಗೆ ಪೈಪೋಟಿ ನಡೆಸುವಷ್ಟು ಸುಂದರಿ ಇವರಾಗಿದ್ದಾರೆ. ನಟಿ ರೇಖಾ ಅವರು ತಮ್ಮ ಚಿತ್ರಗಳಿಂದ ಮಾತ್ರವಲ್ಲದೆ ವೈಯಕ್ತಿಕ ಜೀವನದ ಕುರಿತೂ ಆಗಾಗ ಸುದ್ದಿಯಲ್ಲಿರುತ್ತಾರೆ.
(2 / 5)
ಬಾಲಿವುಡ್ ನಟಿ ರೇಖಾ ಅವರು ಅನೇಕ ಜನಪ್ರಿಯ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದ್ದರಂತೆ. ಅಮಿತಾಬ್ ಬಚ್ಚನ್ ಮತ್ತು ರೇಖಾ ಅವರ ಪ್ರೇಮಕಥೆ ಇನ್ನೂ ಚರ್ಚೆಯಲ್ಲಿದೆ.
(3 / 5)
ಬಾಲಿವುಡ್ ನಟಿ ಅಪಾರ ಆಸ್ತಿ ಹೊಂದಿದ್ದರೂ ಅವರಿಗೆ ಸಂಬಂಧಿಗಳು ಇಲ್ಲ. ಗಂಡ ಮತ್ತು ಮಕ್ಕಳು ಇಲ್ಲದೆ ಇರುವ ಇವರ ಕೋಟಿಗಟ್ಟಲೆ ಆಸ್ತಿ ಯಾರ ಪಾಲಾಗಲಿದೆ ಎಂಬ ಚರ್ಚೆಯೂ ನಡೆಯುತ್ತಿದೆ.
(4 / 5)
ರೇಖಾ ಅವರು ತಮ್ಮ ಜೀವಿತಾವಧಿಯಲ್ಲಿ ಸಾಕಷ್ಟು ಸಂಪತ್ತು ಮತ್ತು ಖ್ಯಾತಿಯನ್ನು ಗಳಿಸಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ರೇಖಾ ಅವರ ಸಂಪತ್ತು 400 ಕೋಟಿ ರೂಪಾಯಿಗಿಂತಲೂ ಹೆಚ್ಚು. ಇವರ ನಂತರ ಈ ಆಸ್ತಿಯ ಹಕ್ಕು ಯಾರದ್ದು ಎಂಬ ಪ್ರಶ್ನೆಯೂ ಇದೆ.
(5 / 5)
ರೇಖಾ ನಂತರ ಆಕೆಯ ಆಸ್ತಿಯ ಉಸ್ತುವಾರಿಯನ್ನು ಅವರ ಮ್ಯಾನೇಜರ್ ಫರ್ಜಾನ ವಹಿಸಿಕೊಳ್ಳಲಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಕಳೆದ 32 ವರ್ಷಗಳಿಂದ ರೇಖಾ ಜೊತೆ ಫರ್ಜಾನಾ ನೆರಳಿನಂತೆ ಇದ್ದಾರೆ. ಅವರ ಕಷ್ಟ ಸುಖದಲ್ಲಿ ಬೆನ್ನೆಲುಬು ಆಗಿ ಇವರು ನಿಂತಿದ್ದಾರೆ. ಹೀಗಾಗಿ, ಸಂಪತತಿನ ಸ್ವಲ್ಪ ಭಾಗವನ್ನು ಫರ್ಜಾನಾರಿಗೆ ನೀಡಲು ಉದ್ದೇಶಿಸಲಾಗಿದೆ ಎನ್ನಲಾಗಿದೆ. ಸಂಪತ್ತಿನ ಒಂದಿಷ್ಟು ಭಾಗವನ್ನು ಟ್ರಸ್ಟ್‌ಗೆ ನೀಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ.
ಇತರ ಗ್ಯಾಲರಿಗಳು