Fathers Day Quotes: ಪ್ರೀತಿಯ ಅಪ್ಪನಿಗೆ ಇಲ್ಲಿವೆ ಹೃದಯಸ್ಪರ್ಶಿ ಕೋಟ್ಸ್; ಅಪ್ಪನೆಂಬ ಆಕಾಶಕ್ಕೆ ಈಗಲೇ ತಲುಪಲಿ ಈ ನಿಮ್ಮ ಅಪ್ಪುಗೆಯ ಮಾತು
- Fathers Day Quotes: ಈ ಭಾನುವಾರವನ್ನು (ಜೂನ್ 18) ಅಪ್ಪನ ದಿನವಾಗಿ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಅಪ್ಪ ಎನ್ನುವ ಸಹನಾ ಮೂರ್ತಿಗೆ ನಿಮ್ಮ ಪ್ರೀತಿಯ ಅಪ್ಪುಗೆ ಸಿಗಲಿ. ಆ ದಿನದಂದು ನಿಮ್ಮ ಜೀವನದ ನಾಯಕನಿಗೆ ಶುಭಾಶಯ ಕೋರಿ. ಇಲ್ಲಿವೆ 10 ಆಯ್ದ ಹೃದಯಸ್ಪರ್ಶಿ ಕೋಟ್ಸ್.
- Fathers Day Quotes: ಈ ಭಾನುವಾರವನ್ನು (ಜೂನ್ 18) ಅಪ್ಪನ ದಿನವಾಗಿ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಅಪ್ಪ ಎನ್ನುವ ಸಹನಾ ಮೂರ್ತಿಗೆ ನಿಮ್ಮ ಪ್ರೀತಿಯ ಅಪ್ಪುಗೆ ಸಿಗಲಿ. ಆ ದಿನದಂದು ನಿಮ್ಮ ಜೀವನದ ನಾಯಕನಿಗೆ ಶುಭಾಶಯ ಕೋರಿ. ಇಲ್ಲಿವೆ 10 ಆಯ್ದ ಹೃದಯಸ್ಪರ್ಶಿ ಕೋಟ್ಸ್.
(1 / 12)
ಅಪ್ಪ ಎನ್ನುವ ಸಹನಾ ಮೂರ್ತಿಗೆ ನಿಮ್ಮ ಪ್ರೀತಿಯ ಅಪ್ಪುಗೆ ಸಿಗಲಿ. ಆ ದಿನದಂದು ನಿಮ್ಮ ಜೀವನದ ನಾಯಕನಿಗೆ ಶುಭಾಶಯ ಕೋರಿ.
(2 / 12)
ತಂದೆಯ ದಿನದ ಆಚರಣೆ ವರ್ಷಕ್ಕೆ ಒಮ್ಮೆ ಮಾತ್ರ ಬರಬಹುದು. ಆದರೆ, ನೀವು ನೀಡಿದ ಪ್ರೀತಿಯನ್ನು, ನಿಮ್ಮ ತ್ಯಾಗವನ್ನು ನಾನು ಪ್ರತಿದಿನ ನೆನಪಿಸಿಕೊಳ್ಳುತ್ತೇನೆ, ಕೃತಜ್ಞತೆ ಅರ್ಪಿಸುತ್ತೇನೆ. ಐ ಲವ್ ಯು ಅಪ್ಪ.
(4 / 12)
ಜೀವ ಕೊಟ್ಟು ಜೀವನ ರೂಪಿಸಿದ ಅಪ್ಪ, ನಿಜ ಹೇಳಬೇಕೆಂದರೆ ದಿನವೂ ಅಪ್ಪನ ದಿನವೇ. ಅಪ್ಪಂದಿರ ದಿನದ ಶುಭಾಶಯಗಳು ಅಪ್ಪ
(5 / 12)
ನನ್ನ ಹೃದಯದಲ್ಲಿ ನಿಮಗೊಂದು ವಿಶಿಷ್ಟ ಸ್ಥಾನವಿದೆ. ನನ್ನ ಮೊದಲ ಪ್ರೀತಿಯಾಗಿರೋ ನಿಮಗೆ ಅಪ್ಪಂದಿರ ದಿನದ ಶುಭಾಶಯಗಳು.
(6 / 12)
ಬದುಕಿನ ಕಷ್ಟದ ನಡುವೆಯೂ ಎಲ್ಲವನ್ನೂ ಸಹಿಸಿಕೊಂಡು, ಎಲ್ಲಾ ಸಮಸ್ಯೆಯ ಎದುರೂ ಗುರಾಣಿಯಂತೆ ನಿಂತು ಕುಟುಂಬವನ್ನು ಕಾಪಾಡುವವರು ನೀವು. ಅಪ್ಪ ನೀವೇ ನಮ್ಮ ಶಕ್ತಿ, ನೀವೇ ನಮಗೆ ದೇವರು ಕೊಟ್ಟ ದೊಡ್ಡ ವರ. ಹ್ಯಾಪಿ ಫಾದರ್ಸ್ ಡೇ
(7 / 12)
ನೀವು ನನ್ನ ಸೂಪರ್ ಹೀರೋ, ನನ್ನ ಉತ್ತಮ ಸ್ನೇಹಿತ, ನನ್ನ ಕಷ್ಟಗಳನ್ನು ಪರಿಹರಿಸುವ ಮಾರ್ಗದರ್ಶಿ. ನಿಮಗೆ ತಂದೆಯ ದಿನದ ಶುಭಾಶಯಗಳು.
(8 / 12)
ದೇವರು ಕರುಣಿಸಿದ ಬಹುದೊಡ್ಡ ಉಡುಗೊರೆ ನೀವು. ನಿಮ್ಮ ತ್ಯಾಗ, ಪ್ರೀತಿಯನ್ನು ವರ್ಣಿಸಲು, ಧನ್ಯವಾದ ಹೇಳಲು ಪದಗಳೇ ಸಾಲದು. ಅದ್ಭುತ ಪ್ರೀತಿಯಿಂದ ತುಂಬಿದ ಸಂತೋಷದಾಯಕ ಜೀವನವನ್ನು ನೀವು ನನಗೆ ನೀಡಿದ್ದೀರಿ. ಹ್ಯಾಪಿ ಫಾದರ್ಸ್ ಡೇ ಅಪ್ಪ
(9 / 12)
ಸದಾ ನನ್ನ ಬೆಂಬಲವಾಗಿರುವಿರಿ, ಸದಾ ದಾರಿ ತೋರುವ ಗುರುವಾಗಿದ್ದೀರಿ, ಗುರಿ ಮುಟ್ಟುವ ಬೆಳಕಾಗಿದ್ದೀರಿ, ನಿಮ್ಮ ಪ್ರೀತಿ ಸದಾ ಕಾಲಕ್ಕೂ ಜೇನಿಗಿಂತಲೂ ಸಿಹಿ… ನಿಮಗೆ ತಂದೆಯ ದಿನದ ಶುಭಾಶಯಗಳು
(10 / 12)
ತಂದೆ ನಿಜವಾದ ಸೂಪರ್ ಹೀರೋ. ಸದಾ ಹೃದಯವಂತಿಕೆ ಮತ್ತು ಸ್ಫೂರ್ತಿಯ ಚಿಲುಮೆಯಂತೆ ಇರುವ ತಂದೆ ಮಕ್ಕಳ ಪಾಲಿನ ದೊಡ್ಡ ಶಕ್ತಿ. ನನ್ನ ಬಹುದೊಡ್ಡ ಶಕ್ತಿಯಾದ ಅಪ್ಪ ನಿಮಗೆ ತಂದೆಯ ದಿನದ ಶುಭಾಶಯಗಳು
(11 / 12)
ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಾದ ಅಪ್ಪ ನಿಮಗೆ ನಾನು ಸದಾ ಋಣಿ. ನನ್ನ ಪಾಲಿಗೆ ದೇವರು ಕೊಟ್ಟ ದೊಡ್ಡ ಉಡುಗೊರೆ ನೀವು. ಹ್ಯಾಪಿ ಫಾದರ್ಸ್ ಡೇ ಅಪ್ಪ
ಇತರ ಗ್ಯಾಲರಿಗಳು