Calendar 2024: 'HT ಕನ್ನಡ' ಓದುಗರಿಗೆ ಇಲ್ಲಿದೆ 12 ನುಡಿಮುತ್ತುಗಳಿರುವ ಸೊಗಸಾದ ಕ್ಯಾಲೆಂಡರ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Calendar 2024: 'Ht ಕನ್ನಡ' ಓದುಗರಿಗೆ ಇಲ್ಲಿದೆ 12 ನುಡಿಮುತ್ತುಗಳಿರುವ ಸೊಗಸಾದ ಕ್ಯಾಲೆಂಡರ್‌

Calendar 2024: 'HT ಕನ್ನಡ' ಓದುಗರಿಗೆ ಇಲ್ಲಿದೆ 12 ನುಡಿಮುತ್ತುಗಳಿರುವ ಸೊಗಸಾದ ಕ್ಯಾಲೆಂಡರ್‌

ಕ್ಯಾಲೆಂಡರ್ ವರ್ಷ ಉರುಳಿ ಹೋಗುತ್ತಿದೆ. ಹೌದು 2023ರ ಕೊನೇ ದಿನ ಇಂದು. ನಾಳೆ 2024ರ ಮೊದಲ ದಿನ. ಹೊಸ ವರ್ಷವನ್ನು ಸ್ವಾಗತಿಸುವುದಕ್ಕೆ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದುಗರಿಗಾಗಿ ಗಣ್ಯರ ಪ್ರೇರಣಾದಾಯಿ ಮಾತುಗಳಿರುವ ದಿನದರ್ಶಿಯನ್ನು ರೂಪಿಸಿದೆ. ಡೌನ್‌ಲೋಡ್‌ ಮಾಡಿ ಒಂದೆಡೆ ಸೇವ್ ಮಾಡಿ ಇಟ್ಟುಕೊಳ್ಳಬಹುದು..  

ಕಾಲಚಕ್ರ ಉರುಳುತ್ತಿರುವಾಗ ಕ್ಯಾಲೆಂಡರ್ ವರ್ಷ ಕೂಡ ಉರುಳಿ ಹೋಗುತ್ತದೆ. 2023 ಉರುಳಿ, 2024ರ ಹೊಸ್ತಿಲಲ್ಲಿದ್ದೇವೆ. ಹೊಸ ಹುರುಪು, ಹುಮ್ಮಸ್ಸಿನೊಂದಿಗೆ ಹೊಸ ಕ್ಯಾಲೆಂಡರ್ ವರ್ಷವನ್ನು ಬರಮಾಡಿಕೊಳ್ಳುವ ಹೊತ್ತು. ಗಣ್ಯರ ನುಡಿಮುತ್ತುಗಳಿರುವ ದಿನದರ್ಶಿಯನ್ನು ಹಿಂದೂಸ್ತಾನ್ ಟೈಮ್ಸ್ ಸಿದ್ಧಪಡಿಸಿದೆ. ಬದುಕಿಗೆ ಧನಾತ್ಮಕ ಪ್ರೇರಣೆ ತುಂಬುವ ಗಣ್ಯರ ನುಡಿಮುತ್ತುಗಳಿರುವ 12 ತಿಂಗಳ ದಿನದರ್ಶಿ ಇದು.
icon

(1 / 13)

ಜನವರಿ 2024: ಅದೃಷ್ಟವಂತ ಎಂದರೆ ಅವಕಾಶವನ್ನು ಪಡೆಯುವವನು. ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು.- ಸ್ವಾಮಿ ವಿವೇಕಾನಂದ
icon

(2 / 13)

ಫೆಬ್ರವರಿ 2024: ಕಾಲಪ್ರಜ್ಞೆ ಇಲ್ಲದವನಿಗೆ ಗಡಿಯಾರ ಬರಿ ಅಲಂಕಾರವಷ್ಟೆ - ಕೆ.ಎಸ್‌.ನಿಸಾರ್ ಅಹಮ್ಮದ್
icon

(3 / 13)

ಮಾರ್ಚ್ 2024: ಮನಸ್ಸು ಎಲ್ಲಕ್ಕೂ ಮೂಲ. ಅದನ್ನು ಸರಿಪಡಿಸಿಕೊಳ್ಳದ ಹೊರತು ಇನ್ನಾವುದೂ ಸರಿಯಾಗದು- ಡಿವಿಜಿ
icon

(4 / 13)

ಏಪ್ರಿಲ್ 2024: ನಿಮ್ಮ ಕನಸುಗಳ ಬೆನ್ನು ಹತ್ತಿ. ಆದರೆ ಅದನ್ನು ಸಾಧಿಸಲು ಅಡ್ಡದಾರಿಗಳು ಇಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿ - ಸಚಿನ್ ತೆಂಡೂಲ್ಕರ್
icon

(5 / 13)

ಮೇ 2024: ತರ್ಕ ಮತ್ತು ಚಿಂತನಾ ಕ್ರಮಗಳನ್ನು ಗಣಿತ ಕಲಿಸುತ್ತದೆ. ಮೆಥಡಾಲಜಿ ಮತ್ತು ಕುಳಿತು ವಿಚಾರ ಮಾಡುವ ಪದ್ಧತಿಯನ್ನೂ ಕಲಿಸುತ್ತದೆ. ನಾಟಕಕಾರನಿಗೆ ಈ ರೀತಿ ಮ್ಯಾಥಮೆಟಿಕಲ್ ವೇ ಆಫ್ ಥಿಂಕಿಂಗ್ ಅಗತ್ಯ. - ಗಿರೀಶ್ ಕಾರ್ನಾಡ್
icon

(6 / 13)

ಜೂನ್ 2024: ಹಣವನ್ನು ಸರಿಯಾಗಿ ನಿರ್ವಹಿಸಲೂ ಬಾರದ ಕುಟುಂಬ ಹಾಳಾಗಿರುವುದನ್ನು ನೋಡಿದ್ದೇನೆ. ಆದ್ದರಿಂದ ಮಹಿಳೆಗೆ ಶಿಕ್ಷಣ ಸಿಗಬೇಕು. ಅದರಲ್ಲೂ ತಾಯಂದಿರಿಗೆ ಅಕ್ಷರ ಜ್ಞಾನ ಬೇಕು- ಸಾರಾ ಅಬೂಬಕರ್
icon

(7 / 13)

ಜುಲೈ 2024: ಸಾಮಾನ್ಯ ಚಿಂತಕರು ತಿರಸ್ಕರಿಸಿದ್ದನ್ನು ಅಸಾಮಾನ್ಯ ಚಿಂತಕರು ಮರುಬಳಕೆ  ಮಾಡುತ್ತಾರೆ - ಜೆಆರ್‌ಡಿ ಟಾಟಾ
icon

(8 / 13)

ಆಗಸ್ಟ್ 2024: ಓದಿ ಮರುಳಾಗಬಾರದು. ಓದದೆಯೂ ಮರುಳಾಗಬಾರದು. ಓದಿ ಹುರುಳಾಗಬೇಕು - ವಿ.ಕೃ.ಗೋಕಾಕ
icon

(9 / 13)

ಆಗಸ್ಟ್ 2024: ಓದಿ ಮರುಳಾಗಬಾರದು. ಓದದೆಯೂ ಮರುಳಾಗಬಾರದು. ಓದಿ ಹುರುಳಾಗಬೇಕು - ವಿ.ಕೃ.ಗೋಕಾಕ

ಸೆಪ್ಟೆಂಬರ್ 2024: ಅನ್ಯರ ಬುದ್ಧಿವಾದಕ್ಕೆ ಕಿವಿಗೊಡುವ ಸದ್ಬುದ್ಧಿ ನಮಗಿದ್ದರೆ, ನಮ್ಮ ಜೀವನದಲ್ಲಿ ಎಷ್ಟೋ ಅನಾಹುತಗಳನ್ನು ನಾವು ತಪ್ಪಿಸಬಹುದು- ಕೆ.ಪಿ.ಪೂರ್ಣಚಂದ್ರ ತೇಜಸ್ವಿ
icon

(10 / 13)

ಅಕ್ಟೋಬರ್ 2024: ನಾಳೆ ಹೇಗೆ ಎಂಬ ಪ್ರಶ್ನೆಗಿಂತಲೂ ಇಂದು ಹೇಗೆ ಎಂಬ ಪ್ರಶ್ನೆ ನಮ್ಮನ್ನು ಮಹತ್ತರವಾಗಿ ಕಾಡಬೇಕು- ಶಿವರಾಮ ಕಾರಂತ
icon

(11 / 13)

ನವೆಂಬರ್ 2024: ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮ ಯಾವಾಗಲೂ ನಿಮಗೆ ಯಶಸ್ಸನ್ನು ತಂದುಕೊಡುತ್ತದೆ. ಹಿಂಜರಿಯಬೇಡಿ. - ವಿರಾಟ್ ಕೊಹ್ಲಿ
icon

(12 / 13)

ಡಿಸೆಂಬರ್ 2024: ನಾವೆಲ್ಲರೂ ಒಬ್ಬರಿಗೊಬ್ಬರು ಸಹಾಯ ಮಾಡಲು ಬಯಸುತ್ತೇವೆ. ನಾವು ಮನುಷ್ಯರೇ ಹಾಗೆ… - ಚಾರ್ಲಿ ಚಾಪ್ಲಿನ್‌
icon

(13 / 13)

ಇತರ ಗ್ಯಾಲರಿಗಳು