January 1 changes: ಹೊಸ ವರ್ಷದಿಂದ ಯಾವುದು ದುಬಾರಿ, ಯಾವುದು ಅಗ್ಗ? ಜನವರಿ 1ರಿಂದ ಈ ಬದಲಾವಣೆಗಳಿಗೆ ಸಜ್ಜಾಗಿ
- January 1 changes: ಹೊಸ ವರ್ಷದಲ್ಲಿ ಹಲವು ವಸ್ತುಗಳ ದರ ಹೆಚ್ಚಳವಾಗಲಿದೆ. ಇದೇ ಸಮಯದಲ್ಲಿ ಕೆಲಸವೊಂದು ವಸ್ತುಗಳ ದರ ಕಡಿಮೆಯಾಗಲಿದೆ. ಕಾರುಗಳ ದರ, ಎಟಿಎಂ ವಿತ್‌ಡ್ರಾ ಶುಲ್ಕ ಹೆಚ್ಚಳ, ಸೋಪು, ಬಿಸ್ಕೆಟ್, ಎಲ್‌ಪಿಜಿ, ಸಿಎನ್‌ಜಿ, ಆಯಿಲ್ ಸೇರಿದಂತೆ ವಿವಿಧ ವಸ್ತುಗಳು ದರದಲ್ಲಿ ಆಗುವ ಬದಲಾವಣೆಗಳ ಕುರಿತು ವಿವರ ಇಲ್ಲಿದೆ.
- January 1 changes: ಹೊಸ ವರ್ಷದಲ್ಲಿ ಹಲವು ವಸ್ತುಗಳ ದರ ಹೆಚ್ಚಳವಾಗಲಿದೆ. ಇದೇ ಸಮಯದಲ್ಲಿ ಕೆಲಸವೊಂದು ವಸ್ತುಗಳ ದರ ಕಡಿಮೆಯಾಗಲಿದೆ. ಕಾರುಗಳ ದರ, ಎಟಿಎಂ ವಿತ್‌ಡ್ರಾ ಶುಲ್ಕ ಹೆಚ್ಚಳ, ಸೋಪು, ಬಿಸ್ಕೆಟ್, ಎಲ್‌ಪಿಜಿ, ಸಿಎನ್‌ಜಿ, ಆಯಿಲ್ ಸೇರಿದಂತೆ ವಿವಿಧ ವಸ್ತುಗಳು ದರದಲ್ಲಿ ಆಗುವ ಬದಲಾವಣೆಗಳ ಕುರಿತು ವಿವರ ಇಲ್ಲಿದೆ.
(1 / 10)
January 1 changes: ಜನವರಿ 1ರಿಂದ ವಿಶೇಷವಾಗಿ ಗ್ರಾಹಕ ವಸ್ತುಗಳು ದುಬಾರಿಯಾಗುವ ಸೂಚನೆ ದೊರಕಿದೆ. ಎಫ್‌ಎಂಸಿಜಿ ವಲಯಕ್ಕೆ 2024 ವರ್ಷ ಒಂದಿಷ್ಟು ಸವಾಲಿನಿಂದ ಕೂಡಿತ್ತು. ವಿಶೇಷವಾಗಿ ಕಚ್ಚಾ ವಸ್ತುಗಳ ದರ ಹೆಚ್ಚಳದಿಂದಾಗಿ ಕಂಪನಿಗಳಿಗೆ ದರ ಹೆಚ್ಚಿಸುವಂತಹ ಅನಿವಾರ್ಯತೆ ಉಂಟಾಗಿದೆ. ತಾಳೆ ಎಣ್ಣೆ, ಕಾಫಿ, ಕೋಕೋ ಮುಂತಾದ ಕಮಾಡಿಟಿಗಳ ದರ ಹೆಚ್ಚಳದಿಂದಾಗಿ ವಿವಿಧ ವಸ್ತುಗಳ ದರವನ್ನು ಈಗಾಗಲೇ ಹೆಚ್ಚಿಸಿವೆ. ಜನವರಿ ಒಂದರಿಂದ ಇನ್ನಷ್ಟು ಗ್ರಾಹಕ ವಸ್ತುಗಳ ದರ ದುಬಾರಿಯಾಗಲಿದೆ.
(2 / 10)
ವಾಹನಗಳ ದರ ಹೆಚ್ಚಳ: ಜನವರಿ 1ರಿಂದ ಹಲವು ಕಂಪನಿಗಳ ತಮ್ಮ ಕಾರುಗಳ ದರ ಹೆಚ್ಚಳ ಮಾಡುವ ಸೂಚನೆ ಇದೆ. ಈಗಾಗಲೇ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಎಸ್‌ಯುವಿ ಮತ್ತು ವಾಣಿಜ್ಯ ವಾಹನಗಳ ದರವನ್ನು ಶೇಕಡ 3ರಷ್ಟು ಏರಿಕೆ ಮಾಡುವ ಸೂಚನೆ ನೀಡಿದೆ. ಹ್ಯುಂಡೈ ಮತ್ತು ಮಾರುತಿ ಸುಜುಕಿ ಕೂಡ ದರ ಹೆಚ್ಚಿಸುವುದಾಗಿ ತಿಳಿಸಿದೆ. ಕಿಯಾ, ಜೆಎಸ್‌ಡಬ್ಲ್ಯು, ಎಂಜಿ ಮೋಟಾರ್ ಕೂಡ ದರ ಹೆಚ್ಚಿಸುವುದಾಗಿ ತಿಳಿಸಿವೆ.
(3 / 10)
ಎಟಿಎಂ ಶುಲ್ಕ ಹೆಚ್ಚಳ: ಜನವರಿ 1ರಿಂದ ಎಟಿಎಂನಿಂದ ಹಣ ವಿತ್‌ಡ್ರಾ ಮಾಡುವುದಕ್ಕೆ ಬ್ಯಾಂಕ್‌ಗಳು ಹೆಚ್ಚುವರಿ ಶುಲ್ಕ ವಿಧಿಸುವ ಸಾಧ್ಯತೆ ಇದೆ. ಬ್ಯಾಂಕ್ ಮತ್ತು ಎಟಿಎಂ ಆಪರೇಟರ್‌ಗಳು ಇಂತಹ ಒಂದು ಪ್ರಸ್ತಾಪ ಮಾಡಿದ್ದಾರೆ. ಈ ಕುರಿತಂತೆ ಏನಾದರೂ ಸಂದೇಹಗಳಿದ್ದರೆ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ.
(4 / 10)
ಮೊಬೈಲ್ ರೀಚಾರ್ಜ್ ಅಗ್ಗ: ಜನವರಿ 1ರಿಂದ ಮೊಬೈಲ್ ರೀಚಾರ್ಜ್ ದರ ಇಳಿಕೆ ಕಾಣುವ ಸಾಧ್ಯತೆಯಿದೆ. ಟ್ರಾಯ್ ಸೂಚನೆಯಿಂದಾಗಿ ಕೆಲವು ಪ್ಲ್ಯಾನ್‌ಗಳ ದರ ಇಳಿಕೆಯಾಗುವ ಸಾಧ್ಯತೆ ಇದೆ. ಇದೇ ಸಮಯದಲ್ಲಿ ಇಂಟರ್‌ನೆಟ್ ಇಲ್ಲದ ಕಾಲ್ ಪ್ಲ್ಯಾನ್‌ಗಳನ್ನು ಪರಿಚಯಿಸುವಂತೆಯೂ ಸೂಚಿಸಲಾಗಿದೆ.
(5 / 10)
ಪಾರ್ಲೆ-ಜಿ ಬಿಸ್ಕೆಟ್ ದರ ದುಬಾರಿ: ಜನವರಿ 1ರಿಂದ ಪಾರ್ಲೆ-ಜಿ ಬಿಸ್ಕೆಟ್ ದರ ದುಬಾರಿಯಾಗಲಿದೆ. ಉತ್ಪಾದನೆ ವೆಚ್ಚ ಹೆಚ್ಚಾಗಿರುವ ಕಾರಣ ದುಬಾರಿಯಾಗಲಿದೆ. ಇದು ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ.
(6 / 10)
ಪೆಟ್ರೋಲ್ ಮತ್ತು ಡೀಸೆಲ್ ದರ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಬದಲಾವಣೆಯಾಗುವ ಸೂಚನೆ ಇರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಳಿತವಾಗಬಹುದು.
(7 / 10)
ಸೋಪು ದುಬಾರಿ: ಕಚ್ಚಾ ವಸ್ತುಗಳ ದರ ಏರಿಕೆಯಿಂದಾಗಿ ಸೋಪು ದರ ಶೇಕಡ 7-8ರಷ್ಟು ಹೆಚ್ಚಾಗಲಿದೆ. ಇದು ಮಧ್ಯಮ ವರ್ಗಕ್ಕೆ ಹೆಚ್ಚು ಹೊರೆಯಾಗಲಿದೆ.
(8 / 10)
ಮದ್ಯ ದರ ದುಬಾರಿಯಾಗುವುದೇ?: ಕೆಲವೊಂದು ರಾಜ್ಯಗಳಲ್ಲಿ ಹೊಸ ವರ್ಷದಿಂದ ಮದ್ಯದ ದರ ದುಬಾರಿಯಾಗುವ ಸಾಧ್ಯತೆಯಿದೆ. ಸದ್ಯ ಕರ್ನಾಟಕ ಸರಕಾರ ಈ ಕುರಿತು ಯಾವುದೇ ಸೂಚನೆ ನೀಡದೆ ಇರುವುರಿಂದ ಮದ್ಯಪ್ರಿಯರು ನಿರಾಳವಾಗಿರಬಹುದು.
ಇತರ ಗ್ಯಾಲರಿಗಳು