ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  T20i Ranking: ಅಗ್ರಸ್ಥಾನ ಕಳೆದುಕೊಂಡ ಹಾರ್ದಿಕ್ ಪಾಂಡ್ಯ, ಟಾಪ್-10ರಲ್ಲಿ ಸ್ಥಾನ ಪಡೆದ ಋತುರಾಜ್ ಗಾಯಕ್ವಾಡ್

T20I Ranking: ಅಗ್ರಸ್ಥಾನ ಕಳೆದುಕೊಂಡ ಹಾರ್ದಿಕ್ ಪಾಂಡ್ಯ, ಟಾಪ್-10ರಲ್ಲಿ ಸ್ಥಾನ ಪಡೆದ ಋತುರಾಜ್ ಗಾಯಕ್ವಾಡ್

  • T20I Ranking: ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯಲ್ಲಿ ಅಬ್ಬರಿಸಿದ ಭಾರತದ ಯುವ ಆಟಗಾರರಾದ ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್ ಮತ್ತು ಮುಕೇಶ್ ಕುಮಾರ್ ಉತ್ತಮ ಶ್ರೇಯಾಂಕ ಪಡೆದಿದ್ದಾರೆ.

ಐಸಿಸಿ ನೂತನ ಟಿ20ಐ ರ್ಯಾಂಕಿಂಗ್​ ಪಟ್ಟಿ ಪ್ರಕಟಗೊಂಡಿದೆ. ಟಾಪ್-10ರಲ್ಲಿ ನಾಲ್ವರು ಭಾರತದ ಆಟಗಾರರು ಕಾಣಿಸಿಕೊಂಡಿದ್ದಾರೆ. ಆದರೆ ಯಾರೂ ಕೂಡ ಅಗ್ರಸ್ಥಾನದಲ್ಲಿಲ್ಲ. ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಅಬ್ಬರಿಸಿದ ಯುವ ಆಟಗಾರರು ಭಾರಿ ಜಿಗಿತ ಕಂಡಿದ್ದಾರೆ.
icon

(1 / 8)

ಐಸಿಸಿ ನೂತನ ಟಿ20ಐ ರ್ಯಾಂಕಿಂಗ್​ ಪಟ್ಟಿ ಪ್ರಕಟಗೊಂಡಿದೆ. ಟಾಪ್-10ರಲ್ಲಿ ನಾಲ್ವರು ಭಾರತದ ಆಟಗಾರರು ಕಾಣಿಸಿಕೊಂಡಿದ್ದಾರೆ. ಆದರೆ ಯಾರೂ ಕೂಡ ಅಗ್ರಸ್ಥಾನದಲ್ಲಿಲ್ಲ. ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಅಬ್ಬರಿಸಿದ ಯುವ ಆಟಗಾರರು ಭಾರಿ ಜಿಗಿತ ಕಂಡಿದ್ದಾರೆ.(Sukumaran)

ಕಳೆದ ಬಾರಿ ಪ್ರಕಟಗೊಂಡ ಆಲ್​ರೌಂಡರ್ಸ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದಿದ್ದ ಹಾರ್ದಿಕ್ ಪಾಂಡ್ಯ, ಈಗ 2ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಟಿ20ಐ ಬ್ಯಾಟರ್ಸ್ ಸೂರ್ಯಕುಮಾರ್ ಯಾದವ್ ಈ ಬಾರಿ ಕೂಡ ಎರಡನೇ ಸ್ಥಾನದಲ್ಲೇ ಮುಂದುವರೆದಿದ್ದಾರೆ.
icon

(2 / 8)

ಜಿಂಬಾಬ್ವೆ ವಿರುದ್ಧದ 2ನೇ ಟಿ20ಐನಲ್ಲಿ ಅಜೇಯ 77 ರನ್ ಸಿಡಿಸಿದ ಋತುರಾಜ್ ಗಾಯಕ್ವಾಡ್ ಭಾರಿ ಜಿಗಿತ ಕಂಡಿದ್ದಾರೆ. ಬ್ಯಾಟರ್​​ಗಳ ಪಟ್ಟಿಯಲ್ಲಿ 13 ಸ್ಥಾನಗಳ ಏರಿಕೆ ಕಂಡು 7ನೇ ಸ್ಥಾನ ಪಡೆದಿದ್ದಾರೆ. ಆದರೆ ಯಶಸ್ವಿ ಜೈಸ್ವಾಲ್ ಟಾಪ್ 10ರಿಂದ ಹೊರಬಿದ್ದಿದ್ದಾರೆ.
icon

(3 / 8)

ಟಿ20 ಬ್ಯಾಟರ್​​ಗಳ ಪಟ್ಟಿಯಲ್ಲಿ ಸೂರ್ಯಕುಮಾರ್ 2ನೇ ಸ್ಥಾನ ಪಡೆದರೆ, ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅಗ್ರಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್​ನ ಫಿಲ್ ಸಾಲ್ಟ್, ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಕ್ರಮವಾಗಿ 3, 4 ಮತ್ತು 5ನೇ ಸ್ಥಾನದಲ್ಲಿದ್ದಾರೆ.
icon

(4 / 8)

ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಡಕೌಟ್ ಆಗಿದ್ದ ಅಭಿಷೇಕ್ ಶರ್ಮಾ, 2ನೇ ಪಂದ್ಯದಲ್ಲಿ ಶತಕ ಸಿಡಿಸಿದರು. ಹೀಗಾಗಿ ಅಭಿಷೇಕ್ ಅಗ್ರ 100ರೊಳಗೆ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಅವರು 75ನೇ ಸ್ಥಾನ ಪಡೆದಿದ್ದಾರೆ. ರೋಹಿತ್ (37), ರಿಂಕು ಸಿಂಗ್ (39), ವಿರಾಟ್ ಕೊಹ್ಲಿ (43), ಹಾರ್ದಿಕ್ ಪಾಂಡ್ಯ (64), ಇಶಾನ್ ಕಿಶನ್ (66) ಮತ್ತು ಶುಭ್ಮನ್ ಗಿಲ್ ಮತ್ತು ಶಿವಂ ದುಬೆ ಜಂಟಿಯಾಗಿ 73 ನೇ ಸ್ಥಾನದಲ್ಲಿದ್ದಾರೆ.
icon

(5 / 8)

ಟಿ20 ಬೌಲರ್​​​ಗಳ ಪಟ್ಟಿಯಲ್ಲಿ ರವಿ ಬಿಷ್ಣೋಯ್ ದೊಡ್ಡ ಜಿಗಿತ ಸಾಧಿಸಿದ್ದಾರೆ. 8 ಸ್ಥಾನ ಮೇಲಕ್ಕೇರಿ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಜಂಟಿ 14ನೇ ಸ್ಥಾನದಲ್ಲಿದ್ದಾರೆ. ಬುಮ್ರಾ 2 ಸ್ಥಾನ ಕುಸಿದಿದ್ದಾರೆ. ಅಕ್ಷರ್ ಪಟೇಲ್ 9ನೇ ಸ್ಥಾನ, ಕುಲ್ದೀಪ್ ಯಾದವ್ 11ನೇ ಸ್ಥಾನದಲ್ಲಿದ್ದಾರೆ.
icon

(6 / 8)

ಟಿ20 ಬೌಲರ್​​ಗಳ ರ್ಯಾಂಕಿಂಗ್​​ನಲ್ಲಿ ಅರ್ಷದೀಪ್ ಸಿಂಗ್ 5 ಸ್ಥಾನ ಕುಸಿದು 18ನೇ ಸ್ಥಾನದಲ್ಲಿದ್ದಾರೆ.  ಹಾರ್ದಿಕ್ 56, ಮೊಹಮ್ಮದ್ ಸಿರಾಜ್ 72, ಚಹಲ್ 78, ವಾಷಿಂಗ್ಟನ್ ಸುಂದರ್ 82, ಮುಕೇಶ್ ಕುಮಾರ್ 20 ಸ್ಥಾನ ಮೇಲಕ್ಕೇರಿ 94ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್​​ನ ಆದಿಲ್ ರಶೀದ್ ಪ್ರಸ್ತುತ ವಿಶ್ವದ ನಂಬರ್ 1 ಟಿ20 ಬೌಲರ್ ಆಗಿದ್ದಾರೆ. ದಕ್ಷಿಣ ಆಫ್ರಿಕಾದ ಅನ್ರಿಚ್ ನೋಕಿಯಾ, ಶ್ರೀಲಂಕಾದ ವನಿಂದು ಹಸರಂಗ, ಅಫ್ಘಾನಿಸ್ತಾನದ ರಶೀದ್ ಖಾನ್, ಆಸ್ಟ್ರೇಲಿಯಾದ ಜೋಶ್ ಹೇಜಲ್​ವುಡ್ ಕ್ರಮವಾಗಿ 2, 3, 4, ಐದನೇ ಸ್ಥಾನದಲ್ಲಿದ್ದಾರೆ.
icon

(7 / 8)

ಟಿ20 ವಿಶ್ವಕಪ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಟಿ20 ಆಲ್​ರೌಂಡರ್​​ಗಳ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದರು. ಆದಾಗ್ಯೂ, ಅವರು ಜಿಂಬಾಬ್ವೆ ಪ್ರವಾಸದಲ್ಲಿ ಆಡದ ಕಾರಣ ಅಗ್ರಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಹಸರಂಗ ಅಗ್ರಸ್ಥಾನಕ್ಕೇರಿದ್ದಾರೆ. ಟಿ20 ಆಲ್​ರೌಂಡರ್​​ಗಳ ಪಟ್ಟಿಯಲ್ಲಿ ಅಕ್ಷರ್ ಪಟೇಲ್ 12ನೇ ಸ್ಥಾನದಲ್ಲಿದ್ದಾರೆ.
icon

(8 / 8)

ಇತರ ಗ್ಯಾಲರಿಗಳು