Hassan News: ಬರೋಬ್ಬರಿ 125 ಕೆಜಿ ಜೋಳದ ಚೀಲ ಹೊತ್ತು ಶ್ರವಣಬೆಳಗೊಳದ ವಿಂಧ್ಯಗಿರಿ ಹತ್ತಿದ ಯುವಕ; ಫೋಟೋ ನೋಡಿ
- Shravanabelagola: ಇದು ಭಕ್ತಿಯ ಶಕ್ತಿಯೋ, ದೈಹಿಕ ಶಕ್ತಿಯೋ ಗೊತ್ತಿಲ್ಲ. ವಿಶ್ವಪ್ರಸಿದ್ಧ ಪ್ರವಾಸಿ ತಾಣ ಶ್ರವಣಬೆಳಗೊಳದಲ್ಲಿ ಭಗವಾನ್ ಬಾಹುಬಲಿ ನೆಲೆಸಿರುವ ವಿಂಧ್ಯಗಿರಿಯನ್ನು ಹತ್ತಲು ಆರೋಗ್ಯವಂತರಿಗೇ ಏದುಸಿರು ಬರುತ್ತದೆ. ಆದರೆ, ಯುವಕನೊಬ್ಬ ಮಣಭಾರದ ಜೋಳದ ಚೀಲ ಹೊತ್ತು ವಿಂಧ್ಯಗಿರಿಯನ್ನು ಕೇವಲ 41 ನಿಮಿಷಗಳಲ್ಲಿ ಹತ್ತಿದ್ದಾರೆ.

(1 / 5)
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಹುನ್ನೂರು ಗ್ರಾಮದ ಹನುಮಂತ ಪರಸಪ್ಪ ಸರಪಳಿ ಎಂಬ ಯುವಕ ಬರೋಬ್ಬರಿ 125 ಕೆಜಿ ತೂಕದ ಜೋಳದ ಚೀಲ ಹೊತ್ತು ವಿಂಧ್ಯಗಿರಿ ತುದಿಗೆ ಏರುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
(2 / 5)
ಭಾರವಾದ ಚೀಲ ಹೊತ್ತು ಯಶಸ್ವಿಯಾಗಿ ಬೆಟ್ಟ ಏರಿ ಸೈ ಎನಿಸಿಕೊಂಡ ಸಾಹಸಿ ಸಾಧನೆಗೆ ಅನೇಕ ಕಡೆಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿವೆ.
(3 / 5)
ಸುಮಾರು 700 ಮೀಟರ್ ಎತ್ತರದಲ್ಲಿ ನೆಲೆಸಿರುವ ಐತಿಹಾಸಿಕ ಶ್ರವಣಬೆಳಗೊಳ ಗೊಮ್ಮಟೇಶ್ವರನ ದರ್ಶನ ಪಡೆಯಲು ಬರಿಗೈಯಲ್ಲಿ ಹೋಗುವುದಕ್ಕೆ ಕಷ್ಟ ಪಡುತ್ತಿರುವ ಈ ಸಂದರ್ಭದಲ್ಲಿ, 125 ಕೆಜಿ ಭಾರಹೊತ್ತು ಬೆಟ್ಟ ಹತ್ತಿರುವುದು ಸಾಧನೆಯೇ ಸರಿ ಎಂಬುದು ಅನೇಕರ ಮಾತಾಗಿದೆ.
(4 / 5)
ವಿಂಧ್ಯಗಿರಿ ಬೆಟ್ಟವನ್ನು ಕೇವಲ 41 ನಿಮಿಷಗಳಲ್ಲಿ ಹತ್ತುವ ಮೂಲಕ ತಮ್ಮ ಶಕ್ತಿ ಸಾಮರ್ಥ್ಯ ಏನೆಂದು ಸಾಬೀತು ಮಾಡಿದ್ದಾರೆ. ಬೆಟ್ಟ ಏರಿದ ಬಳಿಕ ಬಾಹುಬಲಿಯ ಪದತಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಇತರ ಗ್ಯಾಲರಿಗಳು