ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಿದ್ದರಾಮಯ್ಯಗೆ ಶಕ್ತಿ ಟಿಕೆಟ್‌ನ ಹಾರ, ಅರಸೀಕೆರೆ ವಿದ್ಯಾರ್ಥಿನಿ ಅಭಿಮಾನಕ್ಕೆ ಸಿಎಂ ಖುಷ್‌

ಸಿದ್ದರಾಮಯ್ಯಗೆ ಶಕ್ತಿ ಟಿಕೆಟ್‌ನ ಹಾರ, ಅರಸೀಕೆರೆ ವಿದ್ಯಾರ್ಥಿನಿ ಅಭಿಮಾನಕ್ಕೆ ಸಿಎಂ ಖುಷ್‌

  • ಸಿಎಂ ಸಿದ್ದರಾಮಯ್ಯ( CM Siddaramaiah) ಅವರು ಭಿನ್ನ ಬಗೆಯ ಹಾರಗಳನ್ನು ಹಾಕಿಸಿಕೊಂಡಿದ್ದಾರೆ. ಆದರೆ ಅರಸಿಕೆರೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ನೀಡಿದ್ದ ಶಕ್ತಿ ಯೋಜನೆಯ ಉಚಿತ ಟಿಕೆಟ್‌ನ ಹಾರ ಭಿನ್ನವಾಗಿತ್ತು. ಇದನ್ನು ನೋಡಿದ ಸಿಎಂ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ ಏನಿತ್ತು. ಇಲ್ಲಿದೆ ಚಿತ್ರ ನೋಟ..

ಕರ್ನಾಟಕದಲ್ಲಿ ಶಕ್ತಿ ಯೋಜನೆ ಜಾರಿಯಾಗಿ ವರ್ಷವಾಗುತ್ತಿದೆ.. ಕೋಟ್ಯಂತರ ಮಹಿಳೆಯರು ಇದರ ಲಾಭ ಪಡೆದಿದ್ದಾರೆ. ವಿದ್ಯಾರ್ಥಿನಿಯರೂ ಕೂಡ ಉಪಯೋಗ ಪಡೆದುಕೊಂಡಿದ್ದಾರೆ. 
icon

(1 / 6)

ಸಿಎಂ ಸಿದ್ದರಾಮಯ್ಯ ಅವರಿಗೆ ಫ್ರೀ ಟಿಕೆಟ್ ಹಾರ ಅರ್ಪಣೆ ಮಾಡಿ ಉಚಿತ ಬಸ್ ಪ್ರಯಾಣಕ್ಕೆ ಕಾನೂನು‌ ವಿದ್ಯಾರ್ಥಿನಿಯ ವಿನೂತನ ಶೈಲಿಯ ಧನ್ಯತೆ‌ ಅರ್ಪಿಸಿದ್ದು ಈ ಹಾರದ ಮೂಲಕ, 
icon

(2 / 6)

ಅರಸೀಕೆರೆಯ ಮೊದಲ ವರ್ಷದ ಕಾನೂನು ವಿದ್ಯಾರ್ಥಿನಿಯೊಬ್ಬರು ತಾವು ಉಚಿತವಾಗಿ ಪ್ರಯಾಣಿಸಿದ ಫ್ರೀ ಬಸ್ ಟಿಕೆಟ್ ಗಳಿಂದ ಮಾಡಿದ್ದ ಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಕಿದರು. 
icon

(3 / 6)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೇಯಸ್ ಪರ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ವಿದ್ಯಾರ್ಥಿನಿ ಎಂ.ಎ.ಜಯಶ್ರೀ ಅವರು ಫ್ರೀ ಟಿಕೆಟ್ ಹಾರವನ್ನು ಅರ್ಪಿಸಿದರು.  
icon

(4 / 6)

ಮುಖ್ಯಮಂತ್ರಿಗಳಿಗೆ ಹಾರ ಅರ್ಪಿಸುತ್ತಾ ಜಯಶ್ರೀ ಅವರು, "ನೀವು ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಸರ್ಕಾರ ಕೊಟ್ಟ ಉಚಿತ ಪ್ರಯಾಣದ ಫಲವಾಗಿ ನಾನು ಕಾನೂನು ವಿದ್ಯಾಭ್ಯಾಸವನ್ನು ನಿರಾತಂಕವಾಗಿ ಮಾಡಲು ಸಾಧ್ಯವಾಗಿದೆ. ಹೀಗಾಗಿ ಎಲ್ಲಾ ಫ್ರೀ ಟಿಕೆಟ್ ಗಳನ್ನು ಜೋಡಿಸಿಟ್ಟುಕೊಂಡು ಹಾರ ಮಾಡಿದ್ದೆ. ನಿಮಗೆ ಅರ್ಪಿಸುವುದಕ್ಕೆ ತಿಂಗಳುಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದೆ. ಇವತ್ತು ಅರಸೀಕೆರೆಗೆ ಬರ್ತಾ ಇದ್ದೀರಿ ಅಂತ ಗೊತ್ತಾಯ್ತು. ಒಂದೇ ಉಸಿರಲ್ಲಿ ಹಾರ ಹಿಡ್ಕೊಂಡು ಓಡಿ ಬಂದಿದ್ದೇನೆ" ಎನ್ನುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯತೆ ಅರ್ಪಿಸಿ ಆಶೀರ್ವಾದ ಪಡೆದುಕೊಂಡರು
icon

(5 / 6)

ಸಾರಿಗೆ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪಯಣಿಸುವ ಈ ಯೋಜನೆ ಕರ್ನಾಟಕದಲ್ಲಿ ಅರಂಭವಾದ ಬಳಿಕ ತೆಲಂಗಾಣ, ಹರಿಯಾಣ ಸಹಿತ ಹಲವು ರಾಜ್ಯಗಳಲ್ಲಿ ಶುರುವಾಗಿದೆ. 
icon

(6 / 6)

IPL_Entry_Point

ಇತರ ಗ್ಯಾಲರಿಗಳು