ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Prajwal Revanna: ಹಾಸನದಲ್ಲಿ ಪ್ರಜ್ವಲ್‌ ವಿರುದ್ದ ಮಹಿಳಾಕ್ರೋಶ, ಬೃಹತ್‌ ಮೆರವಣಿಗೆ, ಬಂಧನಕ್ಕೆ ಹಕ್ಕೊತ್ತಾಯ

Prajwal Revanna: ಹಾಸನದಲ್ಲಿ ಪ್ರಜ್ವಲ್‌ ವಿರುದ್ದ ಮಹಿಳಾಕ್ರೋಶ, ಬೃಹತ್‌ ಮೆರವಣಿಗೆ, ಬಂಧನಕ್ಕೆ ಹಕ್ಕೊತ್ತಾಯ

  • Hassan News ಸಂಸದ ಪ್ರಜ್ವಲ್‌ ರೇವಣ್ಣ( Prajwal Revanna) ಕೂಡಲೇ ಬಂಧನಕ್ಕೆ ಆಗ್ರಹಿಸಿ ಹಾಸನದಲ್ಲಿ ಪ್ರಗತಿಪರ ಸಂಘಟನೆಗಳಿಂದ ಭಾರೀ ಪ್ರತಿಭಟನೆ ನಡೆಯಿತು. ಹಾಸನ ಚಲೋ( Hassan Chalo) ಹೋರಾಟಕ್ಕೆ ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಹೋರಾಟಗಾರರು ಆಕ್ರೋಶ ಹೊರ ಹಾಕಿದರು. ಹೋರಾಟದ ಸ್ವರೂಪದ ಚಿತ್ರನೋಟ ಇಲ್ಲಿದೆ.

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಖಂಡಿಸಿ ಗುರುವಾರ ನಡೆದ ಹಾಸನ ಚಲೋ ಹೋರಾಟದಲ್ಲಿ ಗಮನ ಸೆಳೆದ ಪೋಸ್ಟರ್‌.
icon

(1 / 7)

ಹಾಸನ ಮಾತ್ರವಲ್ಲದೇ ಹಲವು ಭಾಗಗಳಿಂದ ಆಗಮಿಸಿದ್ದ ಮಹಿಳೆಯರು, ಪುರುಷರು, ಹೋರಾಟಗಾರರು ಅಪರಾಧಿಗಳನ್ನು ಶಿಕ್ಷಿಸಿ, ದೌರ್ಜನ್ಯಕ್ಕೆ ಒಳಗಾದವರನ್ನಲ್ಲ ಎನ್ನುವ ಪೋಸ್ಟರ್‌ ಹಿಡಿದು ಹೆಜ್ಜೆ ಹಾಕಿದರು.,
icon

(2 / 7)

ಕ್ಷುದ್ರ ರಾಜಕೀಯದಾಟಕ್ಕೆ ಹೆಣ್ಣನ್ನು ಬಳಸಬೇಡಿ. ಪ್ರಜ್ವಲ್‌ ಪಾಸ್‌ಪೋರ್ಟ್‌ ರದ್ದಿಗೆ ಕೇಂದ್ರದ ವಿಳಂಬ ನೀತಿಯೇಕೆ ಎನ್ನುವ ಘೋಷವಾಕ್ಯದ ಪೋಸ್ಟರ್‌ ಗಳು ಹಾಸನ ಚಲೋ ಹೋರಾಟದಲ್ಲಿ ಗಮನ ಸೆಳದವು
icon

(3 / 7)

ಹಾಸನ ಪ್ರಮುಖ ರಸ್ತೆಯಲ್ಲಿ ಸಂಚರಿಸಿದ ಹೋರಾಟಗಾರರು ಪ್ರಜ್ವಲ್‌ ರೇವಣ್ಣ ಹಾಗೂ ಪೆನ್‌ಡ್ರೈವ್‌ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ದ ಘೋಷಣೆಗಳನ್ನು ಕೂಗಿದರು.
icon

(4 / 7)

ಹಾಸನದ ಪ್ರಮುಖ ರಸ್ತೆಯಲ್ಲ ಬೃಹತ್‌ ಮೆರವಣಿಗೆ ನಡೆಸಿ ಸಂತ್ರಸ್ತ ಹೆಣ್ಣು ಮಕ್ಕಳಿಗೆ ದನಿ ತುಂಬಿದ ಹೋರಾಟಗಾರರು ನಂತರ ಸಮಾವೇಶವನ್ನೂ ಆಯೋಜಿಸಿದ್ದರು.
icon

(5 / 7)

ಹಾಸನದ ಪ್ರಮುಖ ರಸ್ತೆಗಳಲ್ಲಿ ಹೆಣ್ಮಕ್ಕಳ ನೈತಿಕ ಸ್ಥೈರ್ಯ ಕುಸಿಯಲು ಬಿಡಬೇಡಿ ಎನ್ನುವ ಘೋಷಣೆಗಳೊಂದಿಗೆ ಪೋಸ್ಟರ್‌ಗಳು ರಾರಾಜಿಸಿದವು.
icon

(6 / 7)

ಹಾಸನದಲ್ಲಿ ಹಿರಿಯ ಸಾಹಿತಿಗಳು, ಹೋರಾಟಗಾರರು, ಚಿಂತಕರು ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿಯನ್ನು ಸಲ್ಲಿಸಿದರು.
icon

(7 / 7)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು