Hassan News: ಮಕ್ಕಳ ಆಟಾಟೋಪ, ಸರ್ಕಾರಿ ಹಾಸ್ಟೆಲ್‌ನಲ್ಲಿ ಮಕ್ಕಳಿಂದ ಧಂ ಮಾರೋ ಧಂ, ಹೇಳೋರಿಲ್ಲ ಕೇಳೋರಿಲ್ಲ!
- Hassan News: ಮನೆಯಲ್ಲಿದ್ದರೆ ಎಲ್ಲಿ ಪೋಲಿ ಬೀಳುತ್ತಾರೋ ಎಂಬ ಭಯದಲ್ಲಿ ತಮ್ಮ ಮಕ್ಕಳು ಚೆನ್ನಾಗಿ ಓದಲಿ ಅಂತ ಪೋಷಕರು ಹಾಸ್ಟೆಲ್ಗೆ ಕಳುಹಿಸುತ್ತಾರೆ. ಆದರೆ ಹಾಸನದ ಬೇಲೂರು ತಾಲೂಕಿನ ಬಿಕ್ಕೋಡಿನಲ್ಲಿರುವ ಹಾಸ್ಟೆಲ್ನ ಅಪ್ರಾಪ್ತ ಬಾಲಕರು ಧಮ್ ಮಾರೋ ಧಮ್ ಎನ್ನುತ್ತಿದ್ದಾರೆ.

(1 / 5)
ಹಾಸನದ ಬೇಲೂರು ತಾಲೂಕು ಬಿಕ್ಕೋಡಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಮಕ್ಕಳು ಮೇಲ್ನೋಟಕ್ಕೆ ಬಿಡಿ-ಸಿಗರೇಟು ಸೇದಿರುವುದು ಕಂಡು ಬಂದಿದೆ. ಜೊತೆಗೆ ಮಧ್ಯಪಾನ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
(2 / 5)
ಅಪ್ರಾಪ್ತ ಮೂವರು ಮಕ್ಕಳು ಧೂಮಪಾನದಲ್ಲಿ ತೊಡಗಿರುವ ವಿಡಿಯೋ ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಕೈ ಸೇರಿದೆ. ಈ ವಿಡಿಯೋದಲ್ಲಿ ಅವಾಚ್ಯ ಪದಗಳನ್ನು ಬಳಸಿದ್ದಾರೆ. ಇಲ್ಲಿ ಆತಂಕವಿಲ್ಲದೇ ತಾ ಮೊದಲು-ನಾ ಮೊದಲು ಎನ್ನುವಂತೆ ಧೂಮಪಾನ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
(3 / 5)
ಈ ಹಾಸ್ಟೆಲ್‌ನಲ್ಲಿ 8, 9, 10ನೇ ತರಗತಿಯ ಒಟ್ಟು 38 ವಿದ್ಯಾರ್ಥಿಗಳು ತಂಗಿದ್ದಾರೆ. ಇಲ್ಲಿ ವಾರ್ಡನ್ ಮತ್ತು ಇಬ್ಬರು ಸಹಾಯಕರು ಸೇವೆ ಸಲ್ಲಿಸುತ್ತಿದ್ದಾರೆ. ಇವರ ನಡೆಗೆ ಅಸಮಾಧಾನ ವ್ಯಕ್ತವಾಗಿದೆ.
(4 / 5)
ಕೇವಲ ಬೀಡಿ-ಸಿಗರೇಟ್ ಮಾತ್ರವಲ್ಲ, ವೈಟ್ನರ್, ಗಾಂಜಾ ಮತ್ತು ಮಧ್ಯಪಾನ ಕೂಡ ಮಾಡುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಮಹಡಿ ಮೇಲೆ ಬಿಯರ್ ಬಾಟಲ್ಸ್ ಕೂಡ ಕಂಡು ಬಂದಿವೆಯಂತೆ. ಇದೀಗ ವಾರ್ಡನ್ ಚಂದ್ರಶೇಖರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಇಲಾಖೆಯ ಸಹಾಯಕ ನಿರ್ದೇಶಕ ತಿಳಿಸಿದ್ದಾರೆ.
ಇತರ ಗ್ಯಾಲರಿಗಳು