ಬೆಳ್ಳಗಿರುವುದೆಲ್ಲಾ ಒಳ್ಳೆಯದಲ್ಲಾ; ಆರೋಗ್ಯವಾಗಿರಬೇಕಂದ್ರೆ ಈ 6 ಬಿಳಿ ಆಹಾರ ಸೇವನೆ ಕಡಿಮೆ ಮಾಡಿ
- White foods: ನಿತ್ಯ ಜೀವನದಲ್ಲಿ ನಾವು ಸೇವಿಸುವ ಹಲವು ಆಹಾರಗಳಿಂದ ಆರೋಗ್ಯಕ್ಕೆ ಪ್ರಯೋಜನದ ಬದಲಾಗಿ ಹಾನಿಯೇ ಹೆಚ್ಚು. ಕೆಲವು ಪದಾರ್ಥಗಳು ಬಾಯಿಗೆ ರುಚಿಯಾದರೂ ಆರೋಗ್ಯಕ್ಕೆ ಅದರಿಂದ ಏನೂ ಲಾಭವಿಲ್ಲ. ಇದರಲ್ಲಿ ಬಿಳಿ ಬಣ್ಣದಲ್ಲಿರುವ ಈ 6 ಪದಾರ್ಥಗಳು ಪ್ರಮುಖವು.
- White foods: ನಿತ್ಯ ಜೀವನದಲ್ಲಿ ನಾವು ಸೇವಿಸುವ ಹಲವು ಆಹಾರಗಳಿಂದ ಆರೋಗ್ಯಕ್ಕೆ ಪ್ರಯೋಜನದ ಬದಲಾಗಿ ಹಾನಿಯೇ ಹೆಚ್ಚು. ಕೆಲವು ಪದಾರ್ಥಗಳು ಬಾಯಿಗೆ ರುಚಿಯಾದರೂ ಆರೋಗ್ಯಕ್ಕೆ ಅದರಿಂದ ಏನೂ ಲಾಭವಿಲ್ಲ. ಇದರಲ್ಲಿ ಬಿಳಿ ಬಣ್ಣದಲ್ಲಿರುವ ಈ 6 ಪದಾರ್ಥಗಳು ಪ್ರಮುಖವು.
(1 / 6)
ಬಿಳಿ ಪಾಸ್ತಾ: ಬಿಳಿ ಪಾಸ್ಟಾವನ್ನು ಸಂಸ್ಕರಿಸಿದ ಗೋಧಿಯಿಂದ ತಯಾರಿಸಲಾಗುತ್ತದೆ. ಇದರಲ್ಲಿ ಫೈಬರ್ ಕೊರತೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ತ್ವರಿತವಾಗಿ ಹೆಚ್ಚಿಸಬಹುದು. ಬಾಯಿಗೆ ರುಚಿಯಾದರೂ ನಿಯಮಿತ ಸೇವನೆಯಿಂದ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಊಟದ ನಂತರ ನಿಮಗೆ ಮತ್ತೆ ಹಸಿವಿನ ಭಾವನೆ ತರುತ್ತದೆ.(Pixabay)
(2 / 6)
ಬಿಳಿ ಹಿಟ್ಟು: ಸಂಸ್ಕರಿಸಿದ ಬಿಳಿ ಹಿಟ್ಟಿನಲ್ಲಿ ಪೋಷಕಾಂಶಗಳು ಮತ್ತು ಫೈಬರ್ ಕಡಿಮೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಗೆ ಕಾರಣವಾಗುತ್ತದೆ. ತಿಂದ ಬೆನ್ನಲ್ಲೇ ಹಸಿವು ಹೆಚ್ಚುತ್ತದೆ. ಪೇಸ್ಟ್ರಿ ಮತ್ತು ತಿಂಡಿ ತಯಾರಿಗೆ ಹೆಚ್ಚು ಬಳಸಲಾಗುತ್ತದೆ.(Pixabay)
(3 / 6)
ಆಲೂಗೆಡ್ಡೆ ಚಿಪ್ಸ್: ಚಿಪ್ಸ್ ತರಕಾರಿಯಿಂದ ಮಾಡಿದರೂ, ಆಲೂಗಡ್ಡೆ ಚಿಪ್ಸ್ ಅನ್ನು ಸಾಮಾನ್ಯವಾಗಿ ಅನಾರೋಗ್ಯಕರ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಜೊತೆಗೆ ಇದಕ್ಕೆ ಉಪ್ಪು ಕೂಡಾ ಹಾಕಲಾಗುತ್ತದೆ. ಇದು ಉರಿಯೂತದ ಜೊತೆಗೆ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಚಿಪ್ಸ್‌ನಲ್ಲಿ ಕ್ಯಾಲರಿ ಹೆಚ್ಚು ಆದರೆ ಪೌಷ್ಟಿಕಾಂಶ ಕಡಿಮೆ.(Pixabay)
(4 / 6)
ಬಿಳಿ ಬ್ರೆಡ್: ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಿದ ಬಿಳಿ ಬ್ರೆಡ್ ಸೇವನೆಯು ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ತಿಂದ ಕೂಡಲೇ ಶಕ್ತಿಯ ಕುಸಿತಕ್ಕೆ ಕಾರಣವಾಗುತ್ತದೆ. ಇದರ ಜೊತೆಗೆ ತೂಕ ಹೆಚ್ಚಾಗುವ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.(Pixabay)
(5 / 6)
ಬಿಳಿ ಅಕ್ಕಿ: ಬಿಳಿ ಅಕ್ಕಿ ರಕ್ತದಲ್ಲಿನ ಸಕ್ಕರೆಯ ತ್ವರಿತ ಏರಿಕೆಗೆ ಕಾರಣವಾಗುತ್ತದೆ.ಬ್ರೌನ್ ರೈಸ್ ಅಥವಾ ವೈಲ್ಡ್ ರೈಸ್‌ನಂಥ ಧಾನ್ಯಗಳಿಗೆ ಹೋಲಿಸಿದರೆ ಇದರಲ್ಲಿ ಪೋಷಕಾಂಶಗಳು ಕಡಿಮೆ. ಬಿಳಿ ಅಕ್ಕಿ ತೂಕ ಅಥವಾ ರಕ್ತದಲ್ಲಿನ ಸಕ್ಕರೆ ಮಟ್ಟ ನಿರ್ವಹಿಸುವವರಿಗೆ ಅಷ್ಟು ಸೂಕ್ತವಲ್ಲ.(Pixabay)
(6 / 6)
ಬಿಳಿ ಸಕ್ಕರೆ: ಸಂಸ್ಕರಿಸಿದ ಬಿಳಿ ಸಕ್ಕರೆಯು ಯಾವುದೇ ಪೌಷ್ಟಿಕಾಂಶವಿಲ್ಲದ ಸರಳ ಕಾರ್ಬೋಹೈಡ್ರೇಟ್ ಆಗಿದೆ. ಇದರಿಂದ ದೇಹಕ್ಕೆ ಕ್ಯಾಲರಿಗಳು ಸಿಗಲ್ಲ. ಹೀಗಾಗಿ ಹೆಚ್ಚು ಸಕ್ಕರೆ ಸೇವಿಸಿದರೆ ತೂಕ ಹೆಚ್ಚಾಗುವುದು, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಶುರುವಾಗುತ್ತವೆ. ಜೇನುತುಪ್ಪ ಅಥವಾ ಹಣ್ಣು ಆಧಾರಿತ ಸಿಹಿ ಆಹಾರಗಳನ್ನು ಸಕ್ಕರೆಗೆ ನೈಸರ್ಗಿಕ ಪರ್ಯಾಯಗಳಾಗಿ ಸೇವಿಸಬಹುದು. ಇದು ಹೆಚ್ಚು ಪೋಷಕಾಂಶಗಳನ್ನು ನೀಡುತ್ತದೆ. (Pixabay)
ಇತರ ಗ್ಯಾಲರಿಗಳು