Amla in Pregnancy: ಗರ್ಭಿಣಿಯರು ನೆಲ್ಲಿಕಾಯಿ ಸೇವಿಸಬಹುದೇ? ಹೌದಾದರೆ ಅದರ ಪ್ರಯೋಜನಗಳೇನು?
- ಗರ್ಭಾವಸ್ಥೆಯಲ್ಲಿ ಮಹಿಳೆಯರು ಕೆಲವು ಆಹಾರಗಳನ್ನು ತ್ಯಜಿಸಬೇಕಾಗುತ್ತದೆ. ಗರ್ಭಿಣಿಯರಿಗೆ ಹುಳಿ ಪದಾರ್ಥಗಳು ಹೆಚ್ಚು ಇಷ್ಟವಾಗುತ್ತದೆ. ಹಾಗಿದ್ರೆ ನೆಲ್ಲಿಕಾಯಿಯನ್ನು ತಿನ್ನಬಹುದೇ ಎಂಬ ಪ್ರಶ್ನೆ ಅನೇಕರಲ್ಲಿ ಕಾಡಿರುತ್ತದೆ.
- ಗರ್ಭಾವಸ್ಥೆಯಲ್ಲಿ ಮಹಿಳೆಯರು ಕೆಲವು ಆಹಾರಗಳನ್ನು ತ್ಯಜಿಸಬೇಕಾಗುತ್ತದೆ. ಗರ್ಭಿಣಿಯರಿಗೆ ಹುಳಿ ಪದಾರ್ಥಗಳು ಹೆಚ್ಚು ಇಷ್ಟವಾಗುತ್ತದೆ. ಹಾಗಿದ್ರೆ ನೆಲ್ಲಿಕಾಯಿಯನ್ನು ತಿನ್ನಬಹುದೇ ಎಂಬ ಪ್ರಶ್ನೆ ಅನೇಕರಲ್ಲಿ ಕಾಡಿರುತ್ತದೆ.
(1 / 6)
ಗರ್ಭಿಣಿಯರು ನಿಯಮಿತವಾಗಿ ನೆಲ್ಲಿಕಾಯಿ ಸೇವಿಸುವುದರಿಂದ ಗರ್ಭಾವಸ್ಥೆಯಲ್ಲಿ ಯಾವುದೇ ತೊಂದರೆಗಳು ಉಂಟಾಗುವುದಿಲ್ಲ. ಅತಿಯಾಗಿ ಸೇವಿಸಬಾರದು ಅಷ್ಟೇ. ಇದರ ಬಹು ಪೌಷ್ಟಿಕಾಂಶದ ಗುಣಗಳು ಗರ್ಭಾವಸ್ಥೆಯಲ್ಲಿ ತಾಯಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಆ ಪ್ರಯೋಜನಗಳು ಯಾವುವೆಂದು ನೋಡೋಣ ಬನ್ನಿ. (Freepik)
(2 / 6)
ನೆಲ್ಲಿಕಾಯಿ ಸೇವನೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗರ್ಭಾವಸ್ಥೆಯಲ್ಲಿ ಇದರ ಸೇವನೆ ಮೂತ್ರದ ಸೋಂಕಿನಿಂದ ದೇಹವನ್ನು ರಕ್ಷಿಸುತ್ತದೆ.(Freepik)
(3 / 6)
ಬೆಳಗಿನ ಬೇನೆಯನ್ನು ನಿವಾರಿಸುತ್ತದೆ. ಗರ್ಭಿಣಿಯರಿಗೆ ಬೆಳಿಗ್ಗೆ ತುಂಬಾ ಅಹಿತಕರವಾಗಿರುತ್ತದೆ. ತುಂಬಾ ಆಯಾಸವಾಗುತ್ತಿದೆ, ವಾಕರಿಕೆ ಮತ್ತು ಆಲಸ್ಯದಿಂದ ಬಳಲುತ್ತಿರುತ್ತಾರೆ. ನಿಯಮಿತವಾಗಿ ನೆಲ್ಲಿಕಾಯಿ ಸೇವಿಸುವುದರಿಂದ ಈ ಸಮಸ್ಯೆಯು ದೂರವಾಗುತ್ತದೆ.(Freepik)
(4 / 6)
ಗರ್ಭಾವಸ್ಥೆಯಲ್ಲಿ ಮಲಬದ್ಧತೆ ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಕೆಲವರಿಗೆ ಈ ಸಮಯದಲ್ಲಿ ಮೂಲವ್ಯಾಧಿ ಕೂಡ ಇರುತ್ತದೆ. ನೆಲ್ಲಿಕಾಯಿಯಲ್ಲಿ ನಾರಿನಂಶ ಅಧಿಕವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆಯೂ ದೂರವಾಗುತ್ತದೆ. (Freepik)
(5 / 6)
ಗರ್ಭಾವಸ್ಥೆಯಲ್ಲಿ ಕೈ ಕಾಲುಗಳು ಊದಿಕೊಳ್ಳುತ್ತವೆ. ನೆಲ್ಲಿಕಾಯಿ ಉರಿಯೂತ ನಿವಾರಕ ಗುಣಗಳನ್ನು ಹೊಂದಿವೆ. ಹೀಗಾಗಿ ಇದು ಕೈ ಕಾಲುಗಳ ಊತವನ್ನು ತಡೆಯುತ್ತದೆ.(Freepik)
ಇತರ ಗ್ಯಾಲರಿಗಳು