ಕನ್ನಡ ಸುದ್ದಿ  /  Photo Gallery  /  Health Benefits Of Fruits Peel

Fruits Peel Benefits: ಈ ಹಣ್ಣುಗಳ ಸಿಪ್ಪೆಯನ್ನು ತಿನ್ನದೇ ಎಸೆಯುವ ಮುಂಚೆ ಅದರ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ

  • ಎಲ್ಲಾ ಹಣ್ಣುಗಳ ಸಿಪ್ಪೆಯನ್ನು ತಿನ್ನಲಾಗುವುದಿಲ್ಲ. ಆದರೆ ಕೆಲವರು ತಿನ್ನಬಹುದಾದ ಹಣ್ಣಿನ ಸಿಪ್ಪೆಯನ್ನು ಕೂಡ ತಿನ್ನುವುದಿಲ್ಲ. ಹೀಗೆ ಮಾಡಿದರೆ ಅನೇಕ ಆರೋಗ್ಯ ಪ್ರಯೋಜನಗಳಿಂದ ನೀವು ವಂಚಿತರಾಗುತ್ತೀರಿ. ಸಿಪ್ಪೆಯೊಂದಿಗೆ ಹಣ್ಣುಗಳನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ನೋಡೋಣ ಬನ್ನಿ..

ಈ ಹಣ್ಣುಗಳ ಸಿಪ್ಪೆಯನ್ನು ತಿನ್ನದೇ ಎಸೆಯುವ ಮುಂಚೆ ಅದರ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ 
icon

(1 / 8)

ಸೇಬನ್ನು ಅದರ ಸಿಪ್ಪೆಯೊಂದಿಗೆ ತಿನ್ನುವುದರಿಂದ ಶ್ವಾಸಕೋಶ ಸರಾಗವಾಗಿ ಕೆಲಸ ಮಾಡುತ್ತದೆ. ಮೆದುಳಿನ ಜೀವಕೋಶಗಳಿಗೆ ಹಾನಿಯಾಗದಂತೆ ತಡೆಯುತ್ತದೆ ಮತ್ತು ಸ್ಮರಣಶಕ್ತಿಯನ್ನು ನೀಡುತ್ತದೆ. ಮಧುಮೇಹ ರೋಗಿಗಳು ಸಿಪ್ಪೆಯೊಂದಿಗೆ ಸೇಬನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಮೂಳೆಗಳ ಆರೋಗ್ಯವನ್ನು ಕಾಪಾಡಬಹುದು. ಕೀಲು ನೋವು ಇರುವವರಿಗೆ ಸೇಬು ಒಳ್ಳೆಯದು. ಮಲಬದ್ಧತೆ ಸಮಸ್ಯೆ ಕೂಡ ದೂರವಾಗುತ್ತದೆ.
icon

(2 / 8)

ಸಪೋಟಾದ ಸಿಪ್ಪೆಯಲ್ಲಿ ನಾರಿನಂಶ ಅಧಿಕವಾಗಿದೆ. ಹೀಗಾಗಿ ಅದನ್ನು ಸಿಪ್ಪೆಯೊಂದಿಗೆ ತಿನ್ನುವುದು ಉತ್ತಮ. ಸಪೋಟಾ ತೊಗಟೆಗೆ ದೇಹದಲ್ಲಿರುವ ಬ್ಯಾಕ್ಟೀರಿಯಾ ನಾಶ ಮಾಡುವ ಶಕ್ತಿ ಇದೆ. 
icon

(3 / 8)

ಪೇರಲೆ ಹಣ್ಣಿನ ಸಿಪ್ಪೆಯು ಒಣ ಚರ್ಮಕ್ಕೆ ಚಿಕಿತ್ಸೆ ನೀಡುತ್ತದೆ. ಇದು ನಮ್ಮ ಚರ್ಮವನ್ನು ರಕ್ಷಿಸುವ ಅನೇಕ ಜೀವಸತ್ವಗಳನ್ನು ಹೊಂದಿರುತ್ತದೆ.
icon

(4 / 8)

ಮಾವಿನ ಹಣ್ಣಿನ ಸಿಪ್ಪೆಯಲ್ಲಿ ಕೂಡ ವಿಟಮಿನ್ ಸಿ ಇರುತ್ತದೆ. ನಾರಿನಂಶ ಅಧಿಕವಾಗಿರುತ್ತದೆ. ಮಾವಿನ ಹಣ್ಣಿನ ಸಿಪ್ಪೆಯು ಆರೋಗ್ಯಕರ ಕೊಬ್ಬಿನಾಮ್ಲಗಳಾದ ಕ್ಯಾರೊಟಿನಾಯ್ಡ್‌ಗಳು, ಪಾಲಿಫಿನಾಲ್‌ಗಳು, ಒಮೆಗಾ ಒಳಗೊಂಡಿರುತ್ತದೆ. ಇವು ಕ್ಯಾನ್ಸರ್, ಮಧುಮೇಹ ಮತ್ತು ಹೃದ್ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಆದ್ದರಿಂದ ಮಾವನ್ನು ತಿನ್ನುವಾಗ ಅದರ ಸಿಪ್ಪೆಯನ್ನೂ ಸೇವಿಸಿ. 
icon

(5 / 8)

ಕಪ್ಪು ದ್ರಾಕ್ಷಿಯ ಸಿಪ್ಪೆಯಲ್ಲಿ ಫೈಬರ್ ಅಧಿಕವಾಗಿರುತ್ತದೆ. ಹೀಗಾಗಿ ಅವುಗಳನ್ನು ಸಿಪ್ಪೆಯೊಂದಿಗೆ ತಿನ್ನುವುದು ಉತ್ತಮ
icon

(6 / 8)

ಕಿವಿ ಹಣ್ಣಿನ ಸಿಪ್ಪೆಯು ಫೈಬರ್, ವಿಟಮಿನ್ ಇ ಮತ್ತು ಸಿ ಯಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸೋಂಕು ತಗುಲಿದ ಸಮಯದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಿವಿ ಹಣ್ಣನ್ನು ಸಿಪ್ಪೆಯೊಂದಿಗೆ ತಿನ್ನಬೇಕು. 
icon

(7 / 8)

ಪ್ಲಮ್ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹಣ್ಣಿನ ಸಿಪ್ಪೆಯು ಫಿನಾಲ್ಗಳಿಂದ ತುಂಬಿರುತ್ತದೆ, ಇದು ದೇಹಕ್ಕೆ ವಿವಿಧ ಪ್ರಯೋಜನಗಳನ್ನು ನೀಡುತ್ತದೆ. ಇದು ಡಾರ್ಕ್ ಸ್ಕಿನ್ ಟೋನ್ ಅನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಪ್ಲಮ್ ಹಣ್ಣಿನ ಸಿಪ್ಪೆ ಫೈಬರ್‌ನಲ್ಲಿ ಸಮೃದ್ಧವಾಗಿರುವುದರಿಂದ, ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ ಮತ್ತು ಮೂತ್ರಪಿಂಡದ ಅಸ್ವಸ್ಥತೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತವೆ.
icon

(8 / 8)

IPL_Entry_Point

ಇತರ ಗ್ಯಾಲರಿಗಳು