ಏಲಕ್ಕಿಯಿಂದ ಒಣ ಶುಂಠಿಪುಡಿಯವರೆಗೆ: ಅಜೀರ್ಣಕ್ಕೆ ಪರಿಹಾರ ನೀಡುವ ಮನೆಮದ್ದುಗಳಿವು
ಸಾಮಾನ್ಯವಾಗಿ ಕೆಲವೊಂದು ಪದಾರ್ಥಗಳನ್ನು ಸೇವಿಸಿದ ನಂತರ ಅವು ಸುಲಭವಾಗಿ ಜೀರ್ಣವಾಗುವುದಿಲ್ಲ. ಅನೇಕ ಮಂದಿ ಈ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಆಹಾರ ಪದಾರ್ಥಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಇಲ್ಲಿ ಕೆಲವು ಮನೆಮದ್ದು ನೀಡಲಾಗಿದೆ, ಅವು ಯಾವ್ಯಾವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
(1 / 10)
ಸಾಮಾನ್ಯವಾಗಿ ಕೆಲವೊಂದು ಪದಾರ್ಥಗಳನ್ನು ಸೇವಿಸಿದ ನಂತರ ಅವು ಸುಲಭವಾಗಿ ಜೀರ್ಣವಾಗುವುದಿಲ್ಲ. ಉದಾಹರಣೆಗೆ ಅನೇಕ ಮಂದಿ ಹಾಲು ಕುಡಿದ ನಂತರ ಜೀರ್ಣಕ್ರಿಯೆ ತೊಂದರೆ ಅನುಭವಿಸುತ್ತಾರೆ. ಇನ್ನೂ ಕೆಲವರು ಚಳಿಗಾಲದಲ್ಲಿ ಮೂಲಂಗಿ ಪರೋಟ ತಿಂದ ನಂತರ ಅಜೀರ್ಣಕ್ಕೆ ಒಳಗಾಗುತ್ತಾರೆ. ಆಹಾರ ಪದಾರ್ಥಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಇಲ್ಲಿ ಕೆಲವು ಮನೆಮದ್ದು ನೀಡಲಾಗಿದೆ, ಅವುಗಳನ್ನು ಪಾಲಿಸಬಹುದು.
(PC: Freepik)(2 / 10)
ಆಹಾರ ಜೀರ್ಣಿಸಿಕೊಳ್ಳಲು ಈ ರೀತಿ ಮಾಡಿ: ಸಾಮಾನ್ಯ ಆಹಾರವನ್ನು ಸಹ ಜೀರ್ಣಿಸಿಕೊಳ್ಳಲು ಆಗದಿದ್ದರೆ, ತಿಂದ 48 ನಿಮಿಷಗಳ ನಂತರ ಬಿಸಿ ನೀರನ್ನು ಕುಡಿಯಬೇಕು. ಈ ರೀತಿ ಮಾಡುವುದರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.
(Freepik)(3 / 10)
ಕೆಲವರಿಗೆ ಬಾಳೆಹಣ್ಣು ತಿಂದ ನಂತರ ಅಜೀರ್ಣವಾಗುತ್ತದೆ. ಬಾಳೆಹಣ್ಣಿನಲ್ಲಿ ನಾರಿನಂಶ ಹೆಚ್ಚಿನ ಪ್ರಮಾಣದಲ್ಲಿದೆ. ಬಾಳೆಹಣ್ಣು ಸುಲಭವಾಗಿ ಜೀರ್ಣವಾಗದಿದ್ದರೆ, ಅದನ್ನು ತಿಂದ ನಂತರ ಒಂದು ಏಲಕ್ಕಿಯನ್ನು ಜಗಿಯಿರಿ. ಇದರಿಂದ ಅಜೀರ್ಣ ಸಮಸ್ಯೆ ಪರಿಹಾರವಾಗುತ್ತದೆ.
(freepik)(4 / 10)
ಕೆಲವರಿಗೆ ತುಪ್ಪ ಅಥವಾ ಎಣ್ಣೆಯಂಶವಿರುವ ಆಹಾರ ಪದಾರ್ಥಗಳನ್ನು ತಿಂದ ನಂತರ ಅಜೀರ್ಣ ಸಮಸ್ಯೆ ಉಂಟಾಗುತ್ತಾದೆ. ಹೀಗಾಗಿ ಕಪ್ಪು ಜೀರಿಗೆ ತಿನ್ನುವುದರಿಂದ ಪರಿಹಾರ ಪಡೆಯಬಹುದು.
(freepik)(5 / 10)
ಮಸಾಲೆಯುಕ್ತ ಗ್ರೇವಿ ಹೆಚ್ಚು ತಿಂದಾಗ ಕೆಲವೊಮ್ಮೆ ಬೇಗ ಜೀರ್ಣವಾಗುವುದಿಲ್ಲ. ಹೀಗಾಗಿ ಇಂಥ ಪದಾರ್ಥಗಳನ್ನು ತಿಂದ ನಂತರ ಕರಿಬೇವಿನ ಎಲೆಗಳನ್ನು ತಿನ್ನಬೇಕು. ಇದರಿಂದ ಆಹಾರ ಸುಲಭದಲ್ಲಿ ಜೀರ್ಣವಾಗುತ್ತದೆ.
(Freepik)(6 / 10)
ಮೂಲಂಗಿ ಪರೋಟ ಮತ್ತು ಪೂರಿಗಳನ್ನು ತಿಂದ ನಂತರ ಅಜೀರ್ಣ ಸಮಸ್ಯೆ ಉಂಟಾದರೆ ಸೆಲರಿಯಿಂದ ಪರಿಹಾರ ಪಡೆಯಬಹುದು. ಆಹಾರದಲ್ಲಿ ಸೆಲರಿಯನ್ನು ಸೇರಿಸುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ.
(freepik)(7 / 10)
ಹೊಟ್ಟೆಯ ಸಮಸ್ಯೆಗಳಿಗೆ ಮಜ್ಜಿಗೆ ಪ್ರಯೋಜನಕಾರಿ. ಆದರೆ, ಕೆಲವೊಬ್ಬರಿಗೆ ಮಜ್ಜಿಗೆ ಕುಡಿದ ಮೇಲೆ ಹೊಟ್ಟೆಯಲ್ಲಿ ತೊಂದರೆಯಾದಂತೆ ಅಥವಾ ಅಜೀರ್ಣ ಸಮಸ್ಯೆ ಎದುರಾಗಬಹುದು. ಇದಕ್ಕಾಗಿ ಮಜ್ಜಿಗೆಯಲ್ಲಿ ಹುರಿದ ಜೀರಿಗೆ ಮತ್ತು ಕಾಳುಮೆಣಸನ್ನು ಬೆರೆಸಿ ಕುಡಿಯುವುದರಿಂದ ಪ್ರಯೋಜನ ಪಡೆಯಬಹುದು.
(freepik)(8 / 10)
ಕೆಲವರಿಗೆ ಹಾಲು ಕುಡಿದ ನಂತರ ಅದು ಸುಲಭವಾಗಿ ಜೀರ್ಣವಾಗದೆ ಒದ್ದಾಡುತ್ತಾರೆ. ಹೀಗಾಗಿ ಅಡುಗೆ ಮನೆಯಲ್ಲಿರುವ ಸೋಂಪು ತಿನ್ನುವುದರಿಂದ ಹಾಲು ಸುಲಭವಾಗಿ ಜೀರ್ಣವಾಗುತ್ತದೆ.
(freepik)(9 / 10)
ಮೊಸರು ತಿಂದ ನಂತರ ಕೆಲವರಿಗೆ ಅಜೀರ್ಣ ಉಂಟಾಗಬಹುದು. ಅದರಲ್ಲೂ ರಾತ್ರಿ ವೇಳೆ ಮೊಸರು ತಿಂದು ಮಲಗಿದರೆ ಅಜೀರ್ಣ ಉಂಟಾಗುವ ಸಮಸ್ಯೆ ಹೆಚ್ಚು. ಹೀಗಾಗಿ ಮೊಸರಿಗೆ ಒಣ ಶುಂಠಿ ಪುಡಿ ಸೇರಿಸಿ ತಿನ್ನುವುದರಿಂದ ಪ್ರಯೋಜನ ಪಡೆಯಬಹುದು.
(Canva)ಇತರ ಗ್ಯಾಲರಿಗಳು