ಮಧುಮೇಹದಿಂದ ಸುಮಧುರ ದಾಂಪತ್ಯಕ್ಕೂ ಕಂಟಕ: ನಿಮಿರು ದೌರ್ಬಲ್ಯದಿಂದ ಯೋನಿ ಶುಷ್ಕತೆಯವರೆಗೆ ಸಕ್ಕರೆ ಕಾಯಿಲೆ ತಂದೊಡ್ಡುವ 6 ಲೈಂಗಿಕ ಸಮಸ್ಯೆಗಳಿವು
- ಮಧುಮೇಹ ಮತ್ತು ಲೈಂಗಿಕ ಸಮಸ್ಯೆಗಳು: ಮಧುಮೇಹ ಅಥವಾ ಸಕ್ಕರೆಕಾಯಿಲೆ ಅಧಿಕವಾಗಿರುವವರಿಗೆ ಅನೇಕ ಸಮಸ್ಯೆಗಳು ಜತೆಯಾಗುತ್ತವೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಅನೇಕ ಲೈಂಗಿಕ ಸಮಸ್ಯೆಗಳನ್ನೂ ಮಧುಮೇಹ ಉಂಟುಮಾಡುತ್ತದೆ. ಅತ್ಯಧಿಕ ಮಧುಮೇಹವು ರಕ್ತನಾಳಗಳಿಗೆ, ದೇಹದ ನರವ್ಯವಸ್ಥೆಗಳಿಗೆ ಮಾತ್ರವಲ್ಲದೆ ಗುಪ್ತಾಂಗಗಳಿಗೂ ತೊಂದರೆ ಉಂಟುಮಾಡುತ್ತದೆ.
- ಮಧುಮೇಹ ಮತ್ತು ಲೈಂಗಿಕ ಸಮಸ್ಯೆಗಳು: ಮಧುಮೇಹ ಅಥವಾ ಸಕ್ಕರೆಕಾಯಿಲೆ ಅಧಿಕವಾಗಿರುವವರಿಗೆ ಅನೇಕ ಸಮಸ್ಯೆಗಳು ಜತೆಯಾಗುತ್ತವೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಅನೇಕ ಲೈಂಗಿಕ ಸಮಸ್ಯೆಗಳನ್ನೂ ಮಧುಮೇಹ ಉಂಟುಮಾಡುತ್ತದೆ. ಅತ್ಯಧಿಕ ಮಧುಮೇಹವು ರಕ್ತನಾಳಗಳಿಗೆ, ದೇಹದ ನರವ್ಯವಸ್ಥೆಗಳಿಗೆ ಮಾತ್ರವಲ್ಲದೆ ಗುಪ್ತಾಂಗಗಳಿಗೂ ತೊಂದರೆ ಉಂಟುಮಾಡುತ್ತದೆ.
(1 / 8)
ಮಧುಮೇಹ ಅಥವಾ ಸಕ್ಕರೆಕಾಯಿಲೆ ಅಧಿಕವಾಗಿರುವವರಿಗೆ ಅನೇಕ ಸಮಸ್ಯೆಗಳು ಜತೆಯಾಗುತ್ತವೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಅನೇಕ ಲೈಂಗಿಕ ಸಮಸ್ಯೆಗಳನ್ನೂ ಮಧುಮೇಹ ಉಂಟುಮಾಡುತ್ತದೆ. ಅತ್ಯಧಿಕ ಮಧುಮೇಹವು ರಕ್ತನಾಳಗಳಿಗೆ, ದೇಹದ ನರವ್ಯವಸ್ಥೆಗಳಿಗೆ ಮಾತ್ರವಲ್ಲದೆ ಗುಪ್ತಾಂಗಗಳಿಗೂ ತೊಂದರೆ ಉಂಟುಮಾಡುತ್ತದೆ. ಸುಮಧುರ ದಾಂಪತ್ಯಕ್ಕೆ ಮಧುಮೇಹದಿಂದ ಆಗುವ ತೊಂದರೆಗಳ ವಿವರ ಇಲ್ಲಿದೆ.
(2 / 8)
ನರ ದೌರ್ಬಲ್ಯ: ಸಕ್ಕರೆ ಕಾಯಿಲೆಯು ದೇಹದ ನರ ವ್ಯವಸ್ಥೆಗಳಿಗೂ ತೊಂದರೆ ಉಂಟು ಮಾಡುತ್ತದೆ. ಮಧುಮೇಹದಿಂದ ನರ್ವ್ ಡ್ಯಾಮೇಜ್ ಉಂಟಾಗುತ್ತದೆ. ಇದು ಗಂಡ ಹೆಂಡತಿ ನಡುವಿನ ಸುಮಧುರ ದಾಂಪತ್ಯ ಜೀವನಕ್ಕೂ ಅಡ್ಡಿಯಾಗಬಲ್ಲದು.
(3 / 8)
ನಿಮಿರು ದೌರ್ಬಲ್ಯ: ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸಮಸ್ಯೆ ಇದಾಗಿದೆ. ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಇರುವವರಲ್ಲಿ ಈ ತೊಂದರೆ ಹೆಚ್ಚಾಗುತ್ತದೆ. ರಕ್ತದ ಹರಿವು ಕಡಿಮೆಯಾಗುವುದು, ನರ ಹಾನಿ (ನ್ಯೂರೊಪತಿ) ಮತ್ತು ಹಾನಿಗೊಳಗಾದ ರಕ್ತನಾಳಗಳಿಂದ ಈ ತೊಂದರೆ ಹೆಚ್ಚುತ್ತದೆ.
(4 / 8)
ವೀರ್ಯದ ಗುಣಮಟ್ಟ: ಎಲ್ಲಾದರೂ ಮಧುಮೇಹದಿಂದ ನಿಮಿರುವಿಕೆ ದೌರ್ಬಲ್ಯಕ್ಕೆ ಒಳಗಾಗಿದ್ದವರು ವಯಾಗ್ರದಂತಹ ಔಷಧ ತೆಗೆದುಕೊಳ್ಳಲು ಆರಂಭಿಸಬಹುದು. ಇದು ವೀರ್ಯದ ಗುಣಮಟ್ಟ (ಸ್ಪ್ರೆಮ್ ಕ್ವಾಲಿಟಿ) ಹಾನಿ ಮಾಡಬಹುದು. ಇದರಿಂದ ಮಕ್ಕಳಾಗದಿರುವಿಕೆ ಇತ್ಯಾದಿ ಸಮಸ್ಯೆಗಳು ಎದುರಾಗಬಹುದು.
(5 / 8)
ಬಯಕೆ ಕಡಿಮೆಯಾಗುವುದು: ದಂಪತಿ ನಡುವಿನ ಸಾಂಗತ್ಯಕ್ಕೆ ಆಸೆ, ಬಯಕೆ ಅತ್ಯಗತ್ಯ. ಇಬ್ಬರಲ್ಲಿ ಒಬ್ಬರು ನಿರಾಸಕ್ತಿ ತೋರಿದರೂ ಸುಮಧುರ ದಾಂಪತ್ಯಕ್ಕೆ ತೊಂದರೆಯಾಗಬಹುದು. ಮಧುಮೇಹ, ಒತ್ತಡದ ಬದುಕು, ನಿದ್ರಾಹೀನತೆ, ಔಷಧಗಳು ಇತ್ಯಾದಿಗಳಿಂದ ಸಾಂಗತ್ಯದ ಬಯಕೆ ಕಡಿಮೆಯಾಗಬಹುದು.
(6 / 8)
ಯೋನಿ ಶುಷ್ಕತೆ: ಡಯಾಬಿಟೀಸ್ ಇರುವ ಮಹಿಳೆಯರಲ್ಲಿ ಈ ತೊಂದರೆ ಸಾಮಾನ್ಯವಾಗಿದೆ. ದೇಹದ ಗ್ಲುಕೋಸ್ ಮಟ್ಟ ನಿಯಂತ್ರಣದಲ್ಲಿಡಲು ಇನ್ಸುಲಿನ್ ಚಿಕಿತ್ಸೆ ಪಡೆಯುವವರಿಗೆ, ಲೈಂಗಿಕವಾಗಿ ಸಕ್ರಿಯರಾಗಿರುವವರಿಗೆ ಇಂತಹ ಸಮಸ್ಯೆ ಹೆಚ್ಚಿರುತ್ತದೆ. ಇದರೊಂದಿಗೆ ಋತುಬಂಧ ಏರುಪೇರಿಗೂ ಸಕ್ಕರೆ ಕಾಯಿಲೆ ಕಾರಣವಾಗಬಹುದು.
(7 / 8)
ಸೋಂಕು: ಮಧುಮೇಹ ಪೀಡಿತರಿಗೆ ಬ್ಯಾಕ್ಟಿರಿಯಾ ಅಥವಾ ವೈರಲ್ ಸೋಂಕುಗಳು (ಉದಾಹರಣೆಗೆ ಯೋನಿ ಸೋಂಕು) ಹೆಚ್ಚಾಗಿ ಕಾಡುತ್ತವೆ. ಯೂರಿನರಿ ಟ್ರ್ಯಾಕ್ಟ್ ಇನ್‌ಫೆಕ್ಷನ್ ಅಥವಾ ಮೂತ್ರನಾಳದ ಸೋಂಕು ಕೂಡ ಉಂಟಾಗಬಹುದು. ಇಂತಹ ಸೋಂಕುಗಳು ಮಧುಮೇಹ ಇಲ್ಲದವರಿಗೆ ಹೋಲಿಸಿದರೆ ಮಧುಮೇಹ ಇರುವವರಿಗೆ ಹೆಚ್ಚಾಗಿ ಕಾಡುತ್ತದೆ. ಇಂತಹ ಸೋಂಕಿಗೆ ಚಿಕಿತ್ಸೆ ನೀಡದೆ ಇದ್ದರೆ ಲೈಂಗಿಕ ಅನುಭವ ಅನ್‌ಕಂಫರ್ಟೆಬಲ್ ಅನಿಸಬಹುದು.
ಇತರ ಗ್ಯಾಲರಿಗಳು