ಗರ್ಭಾವಸ್ಥೆಯಲ್ಲಿ ನೀವು ಆರಾಮಾಗಿ ಹಾಗೂ ಆರೋಗ್ಯವಾಗಿ ಇರಲು ಇಲ್ಲಿವೆ 5 ಟಿಪ್ಸ್
Tips for pregnant women: ತಾಯಿಯಾಗುವುದು ಎಷ್ಟು ಸಂತೋಷಕರ ವಿಷಯವೋ ಅಷ್ಟೇ ಸವಾಲುಗಳನ್ನು ಮಹಿಳೆ ಎದುರಿಸಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳುವುದು ಎಂದರೆ ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಆರೋಗ್ಯವನ್ನೂ ನೋಡಿಕೊಳ್ಳುವುದು ಎಂದರ್ಥ. ಇದಕ್ಕಾಗಿ ಇಲ್ಲಿವೆ ಸಲಹೆಗಳು.
(1 / 7)
ಎಚ್ಟಿ ಲೈಫ್‌ಸ್ಟೈಲ್‌ನೊಂದಿಗಿನ ಸಂದರ್ಶನದಲ್ಲಿ ಎಂಜಿಎಂ ಹೆಲ್ತ್‌ಕೇರ್‌ನ ಚೀಫ್ ಡಯೆಟಿಷಿಯನ್ ವಿಜಯಶ್ರೀ ಅವರು ಗರ್ಭಿಣಿಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
(2 / 7)
1. ಸಮತೋಲಿತ ಆಹಾರ: ಗರ್ಭಾವಸ್ಥೆಯಲ್ಲಿ ಉತ್ತಮವಾದ ಆಹಾರವನ್ನು ಸೇವಿಸುವುದು ಅತ್ಯಗತ್ಯ. ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಮತ್ತು ಡೈರಿ ಉತ್ಪನ್ನಗಳಂತಹ ವಿವಿಧ ಪೌಷ್ಟಿಕಾಂಶ-ಭರಿತ ಆಹಾರಗಳನ್ನು ಸೇವಿಸಬೇಕು. ಫೋಲಿಕ್ ಆಮ್ಲ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಂತಹ ಅಗತ್ಯ ಪೋಷಕಾಂಶಗಳ ಮೂಲವಾಗಿರುವ ಆಹಾರ ಪದಾರ್ಥಗಳನ್ನು ಸೇವಿಸಿ . ದಿನವಿಡೀ ಸಾಕಷ್ಟು ನೀರು ಕುಡಿಯುವ ಮೂಲಕ ಹೈಡ್ರೇಟೆಡ್ ಆಗಿರಿ.
(SHVETS production)(3 / 7)
2. ನಿಯಮಿತ ವ್ಯಾಯಾಮ: ನಿಯಮಿತ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದರಿಂದ ಗರ್ಭಾವಸ್ಥೆಯಲ್ಲಿ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಇದು ಅಸ್ವಸ್ಥತೆಯನ್ನು ನಿವಾರಿಸಲು, ರಕ್ತ ಪರಿಚಲನೆ ಸುಧಾರಿಸಲು, ನಿಮ್ಮ ಮನಸ್ಥಿತಿಯನ್ನು ಶಾಂತಗೊಳಿಸಲು ಮತ್ತು ಆರೋಗ್ಯಕರ ತೂಕ ನಿರ್ವಹಣೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಪ್ರಸವಪೂರ್ವ ಯೋಗ, ನಡಿಗೆ ಅಥವಾ ಸೌಮ್ಯವಾದ ವ್ಯಾಯಾಮ ಚಟುವಟಿಕೆಗಳನ್ನು ಆಯ್ಕೆಮಾಡಿ. ಯಾವುದೇ ವ್ಯಾಯಾಮವನ್ನು ಪ್ರಾರಂಭಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ. ನಿಮ್ಮ ಸುರಕ್ಷತೆ ಮತ್ತು ನಿಮ್ಮ ಮಗುವಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅವರ ಶಿಫಾರಸುಗಳನ್ನು ಅನುಸರಿಸಿ.
(Yan Krukau)(4 / 7)
3. ಸಾಕಷ್ಟು ವಿಶ್ರಾಂತಿ: ಗರ್ಭಾವಸ್ಥೆಯಲ್ಲಿ ನಿಮ್ಮ ದೇಹವು ಗಮನಾರ್ಹ ಬದಲಾವಣೆಗಳಿಗೆ ಒಳಗಾಗುತ್ತದೆ, ಇದು ಆಯಾಸಕ್ಕೆ ಕಾರಣವಾಗಬಹುದು. ನಿಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಸಾಕಷ್ಟು ನಿದ್ರೆ ಮತ್ತು ವಿಶ್ರಾಂತಿ ಪಡೆಯುವುದು ಅತ್ಯಗತ್ಯ. ಪ್ರತಿ ರಾತ್ರಿ 7-9 ಗಂಟೆಗಳ ನಿದ್ರೆ ಮಾಡಿ ಮತ್ತು ಅಗತ್ಯವಿದ್ದರೆ ಹಗಲಿನಲ್ಲಿ ಸ್ವಲ್ಪ ಹೊತ್ತು ಮಲಗಿ. ಮಲಗುವ ಹಾಸಿಗೆ, ತಲೆಗೆ ಇಟ್ಟುಕೊಳ್ಳುವ ದಿಂಬು ಎಲ್ಲವೂ ನಿಮಗೆ ಆರಾಮದಾಯಕವಾಗಿರುವಂತೆ ನೋಡಿಕೊಳ್ಳಿ.
(5 / 7)
4. ಪ್ರಸವಪೂರ್ವ ಆರೈಕೆ ಮತ್ತು ನಿಯಮಿತ ತಪಾಸಣೆ: ನಿಯಮಿತ ಪ್ರಸವಪೂರ್ವ ತಪಾಸಣೆಗಳು ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯವನ್ನು ಕಾಪಾಡಲು ನಿರ್ಣಾಯಕವಾಗಿವೆ. ನಿಮ್ಮ ಮಗುವಿನ ಬೆಳವಣಿಗೆಯನ್ನು ಪತ್ತೆಹಚ್ಚಲು, ಯಾವುದೇ ಸಂಭಾವ್ಯ ತೊಡಕುಗಳನ್ನು ಪರೀಕ್ಷಿಸಲು ಮತ್ತು ಅಗತ್ಯ ವ್ಯಾಕ್ಸಿನೇಷನ್‌ಗಳನ್ನು ಪಡೆಯಲು ಆಗಾಗ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ನೀವು ಅನುಭವಿಸುತ್ತಿರುವ ಯಾವುದೇ ತೊಂದರೆಗಳನ್ನು ಮುಕ್ತವಾಗಿ ಚರ್ಚಿಸಿ.
(6 / 7)
5. ಒತ್ತಡ ನಿರ್ವಹಣೆ: ಗರ್ಭಾವಸ್ಥೆಯು ಅಧಿಕ ಒತ್ತಡ ಮತ್ತು ಆತಂಕದಿಂದ ಕೂಡಿರುತ್ತದೆ. ದೀರ್ಘ ಉಸಿರಾಟ, ಧ್ಯಾನದಂತಹ ವಿಶ್ರಾಂತಿ ನೀಡುವ ಚಟುವಟಿಕೆಗಳನ್ನು ಅಭ್ಯಾಸ ಮಾಡುವುದು ಒತ್ತಡದ ಮಟ್ಟವನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮಗೆ ಸಂತೋಷ ನೀಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ಪ್ರೀತಿಪಾತ್ರರನ್ನು ಸಂಪರ್ಕಿಸುವುದು ಮತ್ತು ಅಗತ್ಯವಿದ್ದರೆ ತಜ್ಞರ ಸಲಹೆ ಪಡೆಯುವುದನ್ನು ಮಾಡಿ.
(Photo by John Looy on Unsplash)ಇತರ ಗ್ಯಾಲರಿಗಳು