ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹೊಟ್ಟೆಯುರಿ, ಎದೆಯುರಿ ಸಮಸ್ಯೆ ಪದೇ ಪದೇ ಕಾಡ್ತಿದ್ಯಾ? ಆಸಿಡಿಟಿ ಹೆಚ್ಚಲು ನಿತ್ಯ ನೀವು ಮಾಡುವ ಈ ತಪ್ಪುಗಳೇ ಕಾರಣ

ಹೊಟ್ಟೆಯುರಿ, ಎದೆಯುರಿ ಸಮಸ್ಯೆ ಪದೇ ಪದೇ ಕಾಡ್ತಿದ್ಯಾ? ಆಸಿಡಿಟಿ ಹೆಚ್ಚಲು ನಿತ್ಯ ನೀವು ಮಾಡುವ ಈ ತಪ್ಪುಗಳೇ ಕಾರಣ

  • ಇತ್ತೀಚಿನ ದಿನಗಳಲ್ಲಿ ಯಾರಲ್ಲಿ ಕೇಳಿದ್ರೂ ಎದೆಯುರಿ, ಹೊಟ್ಟೆಯುರಿ ಸಮಸ್ಯೆಯ ಬಗ್ಗೆಯೇ ಹೇಳುತ್ತಾರೆ. ಇದು ನಿಮ್ಮ ಜೀರ್ಣಕ್ರಿಯೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಪದೇ ಪದೇ ಎದೆಯುರಿ, ಹೊಟ್ಟೆಯುರಿ ಕಾಣಿಸಿಕೊಳ್ಳಲು ನಾವು ಅನುಸರಿಸುವ ಕೆಲವು ಅಸಮರ್ಪಕ ಜೀವನಶೈಲಿಯು ಕಾರಣ. ಯಾವೆಲ್ಲಾ ಅಂಶಗಳು ಇದಕ್ಕೆ ಕಾರಣವಾಗುತ್ತವೆ ನೋಡಿ.

ಇತ್ತೀಚಿನ ದಿನಗಳಲ್ಲಿ ಆಸಿಡಿಟಿ ಸಮಸ್ಯೆ ಸಹಜವಾಗಿದೆ. ಖಾರದ ಪದಾರ್ಥ ಅಥವಾ ಉಪ್ಪಿನ ಪದಾರ್ಥ ತಿಂದಾಗ ಇದ್ದಕ್ಕಿದ್ದಂತೆ ಎದೆಯುರಿ ಶುರುವಾಗುತ್ತದೆ. ಕೆಲವೊಮ್ಮೆ ಊಟ ಮಾಡಿದ ತಕ್ಷಣಕ್ಕೆ ಹೊಟ್ಟೆಯುರಿ ಹಾಗೂ ಎದೆಯುರಿ ಸಮಸ್ಯೆ ಕಾಣಿಸಬಹುದು. ಗ್ಯಾಸ್ಟ್ರಿಕ್ ಗ್ರಂಥಿಗಳಿಂದ ಹೊಟ್ಟೆಯ ಆಮ್ಲದ ಅತಿಯಾದ ಉತ್ಪಾದನೆಯಿಂದ ಆಸಿಡೋಸಿಸ್ ಉಂಟಾಗುತ್ತದೆʼ ಎಂದು ಇತ್ತೀಚಿನ ತಮ್ಮ ಇನ್ಸ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಡಾ. ಲವ್ನೀತ್ ಭಾತ್ರ ಬರೆದುಕೊಂಡಿದ್ದಾರೆ. ಆಸಿಡಿಯ ಕಾರಣಕ್ಕೆ ಎದೆಯುರಿ ಬರುವ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ, ನಿಮ್ಮಲ್ಲಿನ ಈ ಕೆಟ್ಟ ಅಭ್ಯಾಸಗಳೇ ಕಾರಣವಾಗಿರುತ್ತದೆ.
icon

(1 / 7)

ಇತ್ತೀಚಿನ ದಿನಗಳಲ್ಲಿ ಆಸಿಡಿಟಿ ಸಮಸ್ಯೆ ಸಹಜವಾಗಿದೆ. ಖಾರದ ಪದಾರ್ಥ ಅಥವಾ ಉಪ್ಪಿನ ಪದಾರ್ಥ ತಿಂದಾಗ ಇದ್ದಕ್ಕಿದ್ದಂತೆ ಎದೆಯುರಿ ಶುರುವಾಗುತ್ತದೆ. ಕೆಲವೊಮ್ಮೆ ಊಟ ಮಾಡಿದ ತಕ್ಷಣಕ್ಕೆ ಹೊಟ್ಟೆಯುರಿ ಹಾಗೂ ಎದೆಯುರಿ ಸಮಸ್ಯೆ ಕಾಣಿಸಬಹುದು. ಗ್ಯಾಸ್ಟ್ರಿಕ್ ಗ್ರಂಥಿಗಳಿಂದ ಹೊಟ್ಟೆಯ ಆಮ್ಲದ ಅತಿಯಾದ ಉತ್ಪಾದನೆಯಿಂದ ಆಸಿಡೋಸಿಸ್ ಉಂಟಾಗುತ್ತದೆʼ ಎಂದು ಇತ್ತೀಚಿನ ತಮ್ಮ ಇನ್ಸ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಡಾ. ಲವ್ನೀತ್ ಭಾತ್ರ ಬರೆದುಕೊಂಡಿದ್ದಾರೆ. ಆಸಿಡಿಯ ಕಾರಣಕ್ಕೆ ಎದೆಯುರಿ ಬರುವ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ, ನಿಮ್ಮಲ್ಲಿನ ಈ ಕೆಟ್ಟ ಅಭ್ಯಾಸಗಳೇ ಕಾರಣವಾಗಿರುತ್ತದೆ.(Shutterstock)

ಚಹಾ ಮತ್ತು ಕಾಫಿ ಅತಿಯಾಗಿ ಕುಡಿಯುವುದು: ನಮ್ಮಲ್ಲಿ ಹಲವರಿಗೆ ಕೆಫೀನ್ ಹೊಂದಿರುವ ಪಾನೀಯಗಳಿಲ್ಲದೆ ಬದುಕಲು ಸಾಧ್ಯವಿಲ್ಲ. ಕೆಲಸ ಹಾಗೂ ಇತರ ಒತ್ತಡವನ್ನು ನಿಭಾಯಿಸುವ ವಿಧಾನಗಳಲ್ಲಿ ಇದು ಒಂದಾಗಿದೆ. ಆದಾಗ್ಯೂ, ಕಾರ್ಬೊನೇಟೆಡ್ ಪಾನೀಯಗಳು, ಕಾಫಿ ಮತ್ತು ಚಹಾವನ್ನು ಆಗಾಗ್ಗೆ ಸೇವಿಸುವುದರಿಂದ ಆಸಿಡ್ ರಿಫ್ಲಕ್ಸ್ ಅಪಾಯ ಹೆಚ್ಚುತ್ತದೆ. ತಾತ್ಕಾಲಿಕ ಉಪಶಮನವನ್ನು ನೀಡುವ ಆದರೆ ಶಾಶ್ವತ ಹಾನಿಯನ್ನುಂಟು ಮಾಡುವ ಈ ಅಭ್ಯಾಸವನ್ನು ತ್ಯಜಿಸಬೇಕು. ಚಹಾ, ಕಾಫಿ ಸೇವನೆಗೆ ಮಿತಿ ಹಾಕಲೇಬೇಕು. 
icon

(2 / 7)

ಚಹಾ ಮತ್ತು ಕಾಫಿ ಅತಿಯಾಗಿ ಕುಡಿಯುವುದು: ನಮ್ಮಲ್ಲಿ ಹಲವರಿಗೆ ಕೆಫೀನ್ ಹೊಂದಿರುವ ಪಾನೀಯಗಳಿಲ್ಲದೆ ಬದುಕಲು ಸಾಧ್ಯವಿಲ್ಲ. ಕೆಲಸ ಹಾಗೂ ಇತರ ಒತ್ತಡವನ್ನು ನಿಭಾಯಿಸುವ ವಿಧಾನಗಳಲ್ಲಿ ಇದು ಒಂದಾಗಿದೆ. ಆದಾಗ್ಯೂ, ಕಾರ್ಬೊನೇಟೆಡ್ ಪಾನೀಯಗಳು, ಕಾಫಿ ಮತ್ತು ಚಹಾವನ್ನು ಆಗಾಗ್ಗೆ ಸೇವಿಸುವುದರಿಂದ ಆಸಿಡ್ ರಿಫ್ಲಕ್ಸ್ ಅಪಾಯ ಹೆಚ್ಚುತ್ತದೆ. ತಾತ್ಕಾಲಿಕ ಉಪಶಮನವನ್ನು ನೀಡುವ ಆದರೆ ಶಾಶ್ವತ ಹಾನಿಯನ್ನುಂಟು ಮಾಡುವ ಈ ಅಭ್ಯಾಸವನ್ನು ತ್ಯಜಿಸಬೇಕು. ಚಹಾ, ಕಾಫಿ ಸೇವನೆಗೆ ಮಿತಿ ಹಾಕಲೇಬೇಕು. (Freepik)

ಅನಿಯಮಿತ ಊಟದ ಸಮಯ: ನಾವು ತಿನ್ನುವ ಆಹಾರವನ್ನು ಜೀರ್ಣಿಸಿಕೊಳ್ಳಲು, ನಿಮ್ಮ ಹೊಟ್ಟೆಯು ಹೈಡ್ರೋಕ್ಲೋರಿಕ್ ಆಮ್ಲವನ್ನು ಉತ್ಪಾದಿಸುತ್ತದೆ. ಸರಿಯಾದ ಸಮಯದಲ್ಲಿ ಊಟ ಮಾಡದೇ ಇರುವುದು ಹೊಟ್ಟೆಯಲ್ಲಿ ಆಮ್ಲೀಯತೆಗೆ ಕಾರಣವಾಗಬಹುದು, ಇದು ಆಸಿಡ್ ರಿಫ್ಲಕ್ಸ್ ಮತ್ತು ವಾಕರಿಕೆಗೆ ಕಾರಣವಾಗುತ್ತದೆ.
icon

(3 / 7)

ಅನಿಯಮಿತ ಊಟದ ಸಮಯ: ನಾವು ತಿನ್ನುವ ಆಹಾರವನ್ನು ಜೀರ್ಣಿಸಿಕೊಳ್ಳಲು, ನಿಮ್ಮ ಹೊಟ್ಟೆಯು ಹೈಡ್ರೋಕ್ಲೋರಿಕ್ ಆಮ್ಲವನ್ನು ಉತ್ಪಾದಿಸುತ್ತದೆ. ಸರಿಯಾದ ಸಮಯದಲ್ಲಿ ಊಟ ಮಾಡದೇ ಇರುವುದು ಹೊಟ್ಟೆಯಲ್ಲಿ ಆಮ್ಲೀಯತೆಗೆ ಕಾರಣವಾಗಬಹುದು, ಇದು ಆಸಿಡ್ ರಿಫ್ಲಕ್ಸ್ ಮತ್ತು ವಾಕರಿಕೆಗೆ ಕಾರಣವಾಗುತ್ತದೆ.(Shutterstock)

ಧೂಮಪಾನ ಮತ್ತು ಕೊಬ್ಬಿನಾಂಶವುಳ್ಳ ಆಹಾರವನ್ನು ಸೇವಿಸುವುದು: ಧೂಮಪಾನವು ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆಯನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ, ಹೆಚ್ಚಿನ ಕ್ಯಾಲೋರಿ ಆಹಾರಗಳು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದು ನಿಧಾನಕ್ಕೆ ಆಮ್ಲೀಯತೆಯ ಪ್ರಮಾಣ ಹೆಚ್ಚಲು ಕಾರಣವಾಗುತ್ತದೆ.
icon

(4 / 7)

ಧೂಮಪಾನ ಮತ್ತು ಕೊಬ್ಬಿನಾಂಶವುಳ್ಳ ಆಹಾರವನ್ನು ಸೇವಿಸುವುದು: ಧೂಮಪಾನವು ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆಯನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ, ಹೆಚ್ಚಿನ ಕ್ಯಾಲೋರಿ ಆಹಾರಗಳು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದು ನಿಧಾನಕ್ಕೆ ಆಮ್ಲೀಯತೆಯ ಪ್ರಮಾಣ ಹೆಚ್ಚಲು ಕಾರಣವಾಗುತ್ತದೆ.(Unsplash)

ತಿಂದ ತಕ್ಷಣಕ್ಕೆ ಮಲಗುವುದು: ಮಲಗುವ ಸಮಯದಲ್ಲಿ, ತಿನ್ನುವುದರಿಂದ ದೇಹವು ಆಮ್ಲೀಯ ಗ್ಯಾಸ್ಟ್ರಿಕ್ ದ್ರವವನ್ನು ಅನ್ನನಾಳಕ್ಕೆ ಹಿಂತಿರುಗಿಸುತ್ತದೆ. ಏಕೆಂದರೆ ಆಹಾರವನ್ನು ತಿಂದ ನಂತರ ಅಡ್ಡಲಾಗಿ ಮಲಗುವುದರಿಂದ ಜೀರ್ಣಕ್ರಿಯೆ ಹೆಚ್ಚು ಕಷ್ಟಕರವಾಗುತ್ತದೆ. ಊಟ ಮಾಡಿದ ಕನಿಷ್ಠ 2 ರಿಂದ 3 ಗಂಟೆಯ ನಂತರ ಮಲುಗುವುದು ಉತ್ತಮ.  
icon

(5 / 7)

ತಿಂದ ತಕ್ಷಣಕ್ಕೆ ಮಲಗುವುದು: ಮಲಗುವ ಸಮಯದಲ್ಲಿ, ತಿನ್ನುವುದರಿಂದ ದೇಹವು ಆಮ್ಲೀಯ ಗ್ಯಾಸ್ಟ್ರಿಕ್ ದ್ರವವನ್ನು ಅನ್ನನಾಳಕ್ಕೆ ಹಿಂತಿರುಗಿಸುತ್ತದೆ. ಏಕೆಂದರೆ ಆಹಾರವನ್ನು ತಿಂದ ನಂತರ ಅಡ್ಡಲಾಗಿ ಮಲಗುವುದರಿಂದ ಜೀರ್ಣಕ್ರಿಯೆ ಹೆಚ್ಚು ಕಷ್ಟಕರವಾಗುತ್ತದೆ. ಊಟ ಮಾಡಿದ ಕನಿಷ್ಠ 2 ರಿಂದ 3 ಗಂಟೆಯ ನಂತರ ಮಲುಗುವುದು ಉತ್ತಮ.  (Getty Images/iStockphoto)

ರಾತ್ರಿಯಲ್ಲಿ ಅಸಮರ್ಪಕ ನಿದ್ರೆ: ನಿದ್ರೆಯ ಕೊರತೆಯು ಹೊಟ್ಟೆಯಲ್ಲಿ ಹೆಚ್ಚಿನ ಆಮ್ಲವನ್ನು ಉಂಟುಮಾಡಬಹುದು. ಇದು ಅನ್ನನಾಳದ ಪರಿಚಲನೆಯನ್ನು ಕೆರಳಿಸುತ್ತದೆ, ಆಮ್ಲವು ಅನ್ನನಾಳವನ್ನು ತಲುಪಲು ಅನುವು ಮಾಡಿಕೊಡುತ್ತದೆ ಎದೆಯುರಿ ಮತ್ತು ಆಮ್ಲೀಯ ಗ್ಯಾಸ್ಟ್ರಿಕ್ ದ್ರವವು ಅನ್ನನಾಳಕ್ಕೆ ಹಿಮ್ಮುಖವಾಗಿ ಹರಿಯುವಂತೆ ಮಾಡುತ್ತದೆ.
icon

(6 / 7)

ರಾತ್ರಿಯಲ್ಲಿ ಅಸಮರ್ಪಕ ನಿದ್ರೆ: ನಿದ್ರೆಯ ಕೊರತೆಯು ಹೊಟ್ಟೆಯಲ್ಲಿ ಹೆಚ್ಚಿನ ಆಮ್ಲವನ್ನು ಉಂಟುಮಾಡಬಹುದು. ಇದು ಅನ್ನನಾಳದ ಪರಿಚಲನೆಯನ್ನು ಕೆರಳಿಸುತ್ತದೆ, ಆಮ್ಲವು ಅನ್ನನಾಳವನ್ನು ತಲುಪಲು ಅನುವು ಮಾಡಿಕೊಡುತ್ತದೆ ಎದೆಯುರಿ ಮತ್ತು ಆಮ್ಲೀಯ ಗ್ಯಾಸ್ಟ್ರಿಕ್ ದ್ರವವು ಅನ್ನನಾಳಕ್ಕೆ ಹಿಮ್ಮುಖವಾಗಿ ಹರಿಯುವಂತೆ ಮಾಡುತ್ತದೆ.(Unsplash)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(7 / 7)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 


ಇತರ ಗ್ಯಾಲರಿಗಳು