ಪದೇ ಪದೇ ಆಂಟಿಬಯೋಟಿಕ್ ಸೇವಿಸ್ತೀರಾ? ಕರುಳಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಚ್ಚರ
- ಪ್ರತಿಜೀವಕಗಳು ಅಥವಾ ಆಂಟಿಬಯೋಟಿಕ್‌ಗಳ ಸೇವನೆ ಇತ್ತೀಚೆಗೆ ಸಾಮಾನ್ಯ ಸಂಗತಿಯಾಗಿದೆ. ಆದರೆ ಅತಿಯಾದ ಆಂಟಿಬಯೋಟಿಕ್ ಬಳಕೆಯು ನಮ್ಮ ಕರುಳಿನಲ್ಲಿರುವ ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ. ಆಗಾಗ ಆಂಟಿಬಯೋಟಿಕ್ ಸೇವಿಸುವುದರಿಂದ ಕರುಳಿನ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ವಿವರಿಸಿದ್ದಾರೆ ಪೌಷ್ಟಿಕತಜ್ಞ ಕರಿಷ್ಮಾ ಷಾ.
- ಪ್ರತಿಜೀವಕಗಳು ಅಥವಾ ಆಂಟಿಬಯೋಟಿಕ್‌ಗಳ ಸೇವನೆ ಇತ್ತೀಚೆಗೆ ಸಾಮಾನ್ಯ ಸಂಗತಿಯಾಗಿದೆ. ಆದರೆ ಅತಿಯಾದ ಆಂಟಿಬಯೋಟಿಕ್ ಬಳಕೆಯು ನಮ್ಮ ಕರುಳಿನಲ್ಲಿರುವ ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ. ಆಗಾಗ ಆಂಟಿಬಯೋಟಿಕ್ ಸೇವಿಸುವುದರಿಂದ ಕರುಳಿನ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ವಿವರಿಸಿದ್ದಾರೆ ಪೌಷ್ಟಿಕತಜ್ಞ ಕರಿಷ್ಮಾ ಷಾ.
(1 / 8)
ʼಜ್ವರ, ತಲೆನೋವು, ಅಲರ್ಜಿಯಂತಹ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿದ್ರೂ ನೀವು ಅಂಟಿಬಯೋಟಿಕ್ ಸೇವಿಸುತ್ತೀರಾ, ಇದರಿಂದ ಆ ಕ್ಷಣಕ್ಕೆ ನಿಮಗೆ ಆರಾಮ ಎನ್ನಿಸಬಹುದು. ಆದರೆ ಇದರ ಸೇವನೆಯಿಂದ ಅಡ್ಡಪರಿಣಾಮಗಳು ಸಾಕಷ್ಟಿವೆ. ಪ್ರತಿಜೀವಕಗಳು ಅಥವಾ ಆಂಟಿಬಯೋಟಿಕ್‌ಗಳು ಸೋಂಕನ್ನು ಉಂಟುಮಾಡುವ ಹಾನಿಕಾರಕ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ. ಆದರೆ ಇದು ಹಾನಿಕಾರಕ ಬ್ಯಾಕ್ಟೀರಿಯಾಗಳು ಮಾತ್ರವಲ್ಲ, ಉತ್ತಮ ಬ್ಯಾಕ್ಟೀರಿಯಾವನ್ನು ದೇಹದಿಂದ ಹೊರಹಾಕುತ್ತದೆ ಎಂದು ಕರೀಷ್ಮಾ ಶಾ ಹೇಳುತ್ತಾರೆ. ಆಗಾಗ ಆಂಟಿಬಯೋಟಿಕ್ ಸೇವಿಸುವುದರಿಂದ ಕರುಳಿನ ಆರೋಗ್ಯಕ್ಕೆ ಹೇಗೆ ಹಾನಿಯಾಗುತ್ತದೆ, ಈ ಸಮಸ್ಯೆಯಿಂದ ಹೊರ ಬರುವುದು ಹೇಗೆ ಎಂಬ ವಿಚಾರವಾಗಿ ಅವರು ತಿಳಿಸಿರುವ ಮಾಹಿತಿ ಇಲ್ಲಿದೆ.
(Getty Images/iStockphoto)(2 / 8)
ನಮ್ಮ ಕರುಳಿನ ಬ್ಯಾಕ್ಟೀರಿಯಾವು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಮತ್ತು ಒಟ್ಟಾರೆ ಆರೋಗ್ಯಕ್ಕೆ ಅವಶ್ಯಕವಾಗಿದೆ. ಆಂಟಿಬಯೋಟಿಕ್ ಸೇವನೆಯಿಂದ ಇವುಗಳ ಸಂಖ್ಯೆಯನ್ನು ಕುಂಠಿತವಾಗಿ ನಮ್ಮ ಕರುಳಿನ ಆರೋಗ್ಯಕ್ಕೆ ಹಾನಿಯಾಗುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳು, ರೋಗನಿರೋಧಕ ಶಕ್ತಿಯ ಕೊರತೆ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ.
(3 / 8)
ನೀವು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ದೂರಗಲು ಬಯಸಿದರೆ, ತೀರಾ ಅವಶ್ಯವಿದ್ದಾಗ ಮಾತ್ರ ಪ್ರತಿಜೀವಕಗಳನ್ನು ಬಳಸಬಹುದು. ಅವು ನಮ್ಮ ಕರುಳಿನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ನೋಡಿ.
(4 / 8)
ಆಂಟಿಬ್ಯಾಕ್ಟೀರಿಯಾಗಳು ಸೋಂಕನ್ನು ಉಂಟು ಮಾಡುವ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತವೆ. ಆದರೆ ಅವು ನಮ್ಮ ಕರುಳಿನಲ್ಲಿರುವ ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ಸಹ ನಾಶ ಮಾಡಬಹುದು.
(Shutterstock)(5 / 8)
ಕರುಳಿನ ಬ್ಯಾಕ್ಟೀರಿಯಾದ ಪಾತ್ರ: ಕರುಳಿನ ಬ್ಯಾಕ್ಟೀರಿಯಾವು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಮತ್ತು ಒಟ್ಟಾರೆ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಂಟಿ ಬಯೋಟಿಕ್‌ಗಳು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಕಡಿಮೆ ಮಾಡಿದಾಗ, ಕರುಳಿನ ಆರೋಗ್ಯಕ್ಕೆ ಹಾನಿಗೊಳಗಾಗಬಹುದು.
(Freepik)(6 / 8)
ಆಂಟಿಬಯೋಟಿಕ್‌ಗಳ ಬಳಕೆಯು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು, ಕರುಳಿನ ಆರೋಗ್ಯ ದುರ್ಬಲವಾಗುವುದು ಇನ್ನಿತರ ಸಮಸ್ಯೆಗಳಿಗೆ ಕಾರಣವಾಗಬಹುದು.
(Aleksandra Sagan/Canadian Press/empics/picture alliance )(7 / 8)
ಕರುಳಿನ ಆರೋಗ್ಯವನ್ನು ಪುನರ್ನಿರ್ಮಾಣ ಮಾಡುವುದು: ಪ್ರೋಬಯಾಟಿಕ್ ಅಂಶ ಇರುವ ಆಹಾರಗಳು, ಹುದುಗಿಸಿದ ಆಹಾರಗಳು ಮತ್ತು ಆರೋಗ್ಯಕರ ಆಹಾರವನ್ನು ಸೇವನೆಯಿಂದ ಸಮತೋಲನ ಕಾಪಾಡಿಕೊಳ್ಳಲು ಹಾಗೂ ಕರುಳಿನ ಆರೋಗ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಇತರ ಗ್ಯಾಲರಿಗಳು