Breastfeeding Week: ಕಂದಮ್ಮನಿಗೆ ಹಾಲುಣಿಸುವ ಸಂದರ್ಭ ಈ 5 ಅಭ್ಯಾಸಗಳನ್ನು ಎಂದಿಗೂ ರೂಢಿಸಿಕೊಳ್ಳದಿರಿ; ಮಗುವಿಗೆ ಅಪಾಯ ತಪ್ಪಿದ್ದಲ್ಲ
- Breastfeeding don't do five things: ಮಗುವಿಗೆ ಜನ್ಮ ನೀಡುವುದು ಮಾತ್ರವಲ್ಲ, ಕಂದಮ್ಮನಿಗೆ ಹಾಲುಣಿಸುವುದು ಕೂಡ ಶ್ರೇಷ್ಠವಾದದ್ದು. ಮಗುವಿಗೆ ಎದೆಹಾಲು ನೀಡುವಾಗ ತಾಯಿಯು ಕೆಲವೊಂದು ಅಭ್ಯಾಸಗಳನ್ನು ತ್ಯಜಿಸಬೇಕು. ಇದು ಮಗುವಿನ ಆರೋಗ್ಯ ದೃಷ್ಟಿಯಿಂದ ಬಹಳ ಅವಶ್ಯ. ಹಾಗಾದ್ರೆ ಹಾಲುಣಿಸುವಾಗ ಯಾವೆಲ್ಲಾ ಆಹಾರಗಳನ್ನು ತ್ಯಜಿಸಬೇಕು ನೋಡಿ.

(1 / 6)
ಚಿಕ್ಕ ಮಗುವಿಗೆ ಹಾಲುಣಿಸುವ ತಾಯಂದಿರು ಈ 5 ಅಭ್ಯಾಸಗಳನ್ನು ತ್ಯಜಿಸಬೇಕು, ಅಲ್ಲದೇ ಯಾವುದೇ ಕಾರಣಕ್ಕೂ ಇದನ್ನು ಅಭ್ಯಾಸ ಮಾಡುವುದು ಸಲ್ಲ. ಇದರಿಂದ ಮಗುವಿನ ಆರೋಗ್ಯ ಸಮಸ್ಯೆ ಹೆಚ್ಚಬಹುದು. ಮಗು ತಾಯಿಯ ಎದೆಹಾಲಿನಿಂದ ಪೋಷಕಾಂಶಗಳನ್ನು ಪಡೆಯುವುದರಿಂದ, ಇದರಿಂದ ವಿವಿಧ ದೈಹಿಕ ಸಮಸ್ಯೆಗಳು ಉಂಟಾಗಬಹುದು. (Freepik)
(2 / 6)
ಕೋಪ ಅಥವಾ ಅಸಮಾಧಾನ ಬೇಡ: ತಾಯಿಯು ಮಗುವಿಗೆ ಹಾಲುಣಿಸುವಾಗ ಕೋಪಗೊಳ್ಳುವುದು ಅಥವಾ ಅಸಮಾಧಾನ ತೋರುವುದು ಮಾಡಬಾರದು. ಇದು ಮಗುವಿನ ಮನಸ್ಸಿನ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ಇದು ಆ ಮಗುವಿನ ಹದಿ ವಯಸ್ಸಿನಲ್ಲಿ ಅವನಲ್ಲಿ ಹೊರಹೊಮ್ಮಬಹುದು. (Freepik)
(3 / 6)
ಮದ್ಯಪಾನ: ಹಾಲುಣಿಸುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಮದ್ಯಪಾನ ಮಾಡದಿರಿ. ಮದ್ಯಪಾನವು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಅಲ್ಲದೆ, ಇದು ಎದೆಹಾಲಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದ ಮಗುವಿನ ಆರೋಗ್ಯಕ್ಕೆ ಹಾನಿಯಾಗಬಹುದು. (Freepik)
(4 / 6)
ಮೀನು: ಮೀನಿನಲ್ಲಿ ಒಮೆಗಾ ತ್ರೀ ಕೊಬ್ಬಿನಾಮ್ಲ ಇದ್ದು ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಇದು ಪಾದರಸ ಮತ್ತು ವಿವಿಧ ಸಾಂಕ್ರಾಮಿಕ ಸಂಯುಕ್ತಗಳನ್ನು ಒಳಗೊಂಡಿದೆ. ಆ ಸಂಯುಕ್ತಗಳು ತಾಯಿಯ ಎದೆಹಾಲಿನಿಂದ ಮಗುವಿನ ದೇಹಕ್ಕೆ ಸೇರಿದಾಗ ಪ್ರತಿಕೂಲ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು.(Freepik)
(5 / 6)
ಜಂಕ್‌ಫುಡ್: ಈ ಸಮಯದಲ್ಲಿ ಪಿಜ್ಜಾ, ಬರ್ಗರ್, ಫ್ರೈಸ್‌ನಂತಹ ಜಂಕ್‌ಫುಡ್‌ನಿಂದ ದೂರವಿರಿ. ಈ ರೀತಿಯ ಆಹಾರದಿಂದ ಒತ್ತಡ ಹೆಚ್ಚಾಗುತ್ತದೆ. ಅಲ್ಲದೆ, ಹಾಲಿನ ಮೇಲೆ ನೇರ ಪರಿಣಾಮ ಬೀರಬಹುದು. ಇದು ಮಗುವಿನ ಆರೋಗ್ಯಕ್ಕೆ ಹಾನಿ ಮಾಡುತ್ತದೆ.(Freepik)
ಇತರ ಗ್ಯಾಲರಿಗಳು