ಏಂಜಲಿನಾ ಜೂಲಿಯಿಂದ ಸಂಜಯ್ ದತ್‌ವರೆಗೆ: ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಸೆಲೆಬ್ರಿಟಿಗಳಿವರು
Cancer: ಕ್ಯಾನ್ಸರ್ ಮಹಾಮಾರಿ ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ. ಹಲವು ಸಿನಿ ಸೆಲೆಬ್ರಿಟಿಗಳು ಕ್ಯಾನ್ಸರ್ ವಿರುದ್ಧ ಹೋರಾಡಿ ಬದುಕಿ ಬಂದಿದ್ದಾರೆ. ತಮ್ಮ ಆತ್ಮವಿಶ್ವಾಸ ಮತ್ತು ಅಚಲ ಧೈರ್ಯದಿಂದ ಇತರರನ್ನು ಪ್ರೇರೇಪಿಸಿದ್ದಾರೆ. ಕ್ಯಾನ್ಸರ್ ವಿರುದ್ಧ ಧೈರ್ಯದಿಂದ ಹೋರಾಡಿದ ಗೆದ್ದ ಪ್ರಸಿದ್ಧ ಸೆಲೆಬ್ರಿಟಿಗಳಿವರು.
(1 / 11)
<p>ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರದ ಹಲವು ಸೆಲೆಬ್ರಿಟಿಗಳು ಕ್ಯಾನ್ಸರ್ ಎಂಬ ಮಾರಣಾಂತಿಕ ಕಾಯಿಲೆಗೆ ತುತ್ತಾಗಿದ್ದಾರೆ. ಆದರೆ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಅವರು ನಂಬಲಾಗದ ಧೈರ್ಯವನ್ನು ತೋರಿಸಿದ್ದಾರೆ. ಏಂಜಲೀನಾ ಜೋಲಿ, ಸೋನಾಲಿ ಬೆಂದ್ರೆಯಿಂದ ಯುವರಾಜ್ ಸಿಂಗ್‌ವರೆಗೆ ಧೈರ್ಯದಿಂದ ಕ್ಯಾನ್ಸರ್ ವಿರುದ್ಧ ಹೋರಾಡಿ ಚೇತರಿಸಿಕೊಂಡ ಸೆಲೆಬ್ರಿಟಿಗಳ ಬಗ್ಗೆ ಇಲ್ಲಿದೆ ಮಾಹಿತಿ.
(2 / 11)
ಹಾಲಿವುಡ್ ನಟಿ ಏಂಜಲಿನಾ ಜೂಲಿ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಅವರು ಕ್ಯಾನ್ಸರ್ ಚಿಕಿತ್ಸೆಗಾಗಿ ಸ್ತನಛೇದನವನ್ನು ಮಾಡಿಸಿಕೊಂಡಿದ್ದರು ಮತ್ತು ಹೀಗಾಗಿ ಆಕೆಯ ಸ್ತನದ ಮೇಲೆ ಗಾಯದ ಗುರುತು ಗೋಚರಿಸುತ್ತದೆ. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಇತರರಿಗೆ ಸ್ಫೂರ್ತಿ ನೀಡಲು ಏಂಜಲೀನಾ ಜೋಲಿ ತಮ್ಮ ಅನುಭವವನ್ನು ಪುಸ್ತಕ ರೂಪಕ್ಕೆ ತರಲು ನಿರ್ಧರಿಸಿದ್ದಾರೆ.
(Photo by Joel C Ryan/Invision/AP, File)(3 / 11)
ಬಾಲಿವುಡ್‌ನ ಸ್ಟಾರ್ ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಗೆದ್ದವರಲ್ಲಿ ಒಬ್ಬರು. ಜುಲೈ 2018ರಲ್ಲಿ, ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅವರು ಕೇವಲ ಶೇ 30 ಬದುಕುಳಿಯುವ ಅವಕಾಶವನ್ನು ಹೊಂದಿದ್ದರೂ, ಅವರು ಅಪಾರ ಶಕ್ತಿ ಮತ್ತು ಸಕಾರಾತ್ಮಕ ಭಾವದಿಂದ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದಿದ್ದಾರೆ.
(Instagram)(4 / 11)
ಕ್ರಿಕೆಟಿಗ ಯುವರಾಜ್ ಸಿಂಗ್ ಅವರಿಗೆ ಅಪರೂಪದ ಶ್ವಾಸಕೋಶದ ಕ್ಯಾನ್ಸರ್ ಮತ್ತು ಮೆಡಿಯಾಸ್ಟೈನಲ್ ಸೆಮಿನೋಮಾ ಇರುವುದು ಪತ್ತೆಯಾಗಿದೆ. ಅವರು ಅದಕ್ಕಾಗಿ ಅಮೆರಿಕದಲ್ಲಿ ಚಿಕಿತ್ಸೆ ಪಡೆದರು ಮತ್ತು ಹಲವಾರು ಕಿಮೊಥೆರಪಿ ಅವಧಿಗಳ ನಂತರ, ಅವರು ಆತ್ಮವಿಶ್ವಾಸದಿಂದ ಚೇತರಿಸಿಕೊಂಡರು.
(Getty Images)(5 / 11)
2020ರಲ್ಲಿ, ಸಂಜಯ್ ದತ್ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ನಂತರ ಅವರು ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. 2021ರಲ್ಲಿ ಅವರು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ವಿಜಯವನ್ನು ಘೋಷಿಸಿದರು ಹಾಗೂ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರಿಸಿದರು.
(HT photo)(6 / 11)
2018ರಲ್ಲಿ, ನಿರ್ದೇಶಕಿ ತಾಹಿರಾ ಕಶ್ಯಪ್ ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಚಿಕಿತ್ಸೆಯ ಭಾಗವಾಗಿ ಆಕೆಗೆ ಸ್ತನಛೇದನ ಮಾಡಲಾಯಿತು. ಅವರು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ತಮ್ಮ ಅನುಭವವನ್ನು ಸಾರ್ವಜನಿಕರೊಂದಿಗೆ ಧೈರ್ಯದಿಂದ ಹಂಚಿಕೊಂಡರು ಮತ್ತು ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಅನೇಕ ಉಪಕ್ರಮಗಳನ್ನು ಕೈಗೊಂಡರು.
(HT photo)(7 / 11)
ಹಿರಿಯ ನಟಿ ಕಿರಣ್ ಖೇರ್ ಅವರಿಗೆ 2019 ರಲ್ಲಿ ಮಲ್ಟಿಪಲ್ ಮೈಲೋಮಾ ಮತ್ತು ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಸ್ತನಛೇದನಕ್ಕೆ ಒಳಗಾದ ನಂತರ, ಅವರು ಈ ಆರೋಗ್ಯ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದರು ಮತ್ತು ಈಗ ಕ್ಯಾನ್ಸರ್ ಮುಕ್ತರಾಗಿದ್ದಾರೆ.
(HT photo)(8 / 11)
ಬಾಲಿವುಡ್ ನಟಿ ಮನಿಶಾ ಕೊಯಿರಾಲಾ ಅವರು ಅಂಡಾಶಯದ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆಲುವು ಸಾಧಿಸಿದ್ದಾರೆ.
(HT photo)(9 / 11)
2009ರಲ್ಲಿ, ಸ್ಟಾರ್ ನಟಿ ಲಿಸಾ ರೇ ಮಲ್ಟಿಪಲ್ ಮೈಲೋಮಾದಿಂದ ಗುರುತಿಸಲ್ಪಟ್ಟರು. ಇದು ಪ್ಲಾಸ್ಮಾ ಜೀವಕೋಶಗಳ ಮೇಲೆ ಪರಿಣಾಮ ಬೀರುವ ರಕ್ತದ ಕ್ಯಾನ್ಸರ್. ಕ್ಯಾನ್ಸರ್‌ನ ತೀವ್ರತೆಯ ನಡುವೆಯೂ ಅವರು ಅವರು ಹೋರಾಡಿ ಗೆದ್ದಿದ್ದಾಳೆ.
(HT photo)(10 / 11)
ಬಾಲಿವುಡ್ ನಟ ಹೃತಿಕ್ ರೋಷನ್ ಅವರ ತಂದೆ ರಾಕೇಶ್ ರೋಷನ್ ಕೂಡ ಒಂದು ರೀತಿಯ ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು, ಆದರೆ ಸಮಯೋಚಿತ ಮತ್ತು ಸರಿಯಾದ ಚಿಕಿತ್ಸೆಯಿಂದಾಗಿ ಅವರು ಕ್ಯಾನ್ಸರ್‌ನಿಂದ ಹೊರಬಂದರು.
(HT photo)ಇತರ ಗ್ಯಾಲರಿಗಳು