ಮಕ್ಕಳು ಪ್ರತಿನಿತ್ಯ ಮಾಡಬಹುದಾದ ಅತ್ಯುತ್ತಮ ಯೋಗಾಸಗಳಿವು; ಪರ್ವತದಿಂದ ಕೋಬ್ರಾದವರೆಗೆ
- ಮಕ್ಕಳ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದಾಗ ಬುದ್ಧಿಶಕ್ತಿ ಹೆಚ್ಚಳ ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯಬಹುದು. ಮಕ್ಕಳು ಪ್ರತಿದಿನ ಮಾಡಬಹುದಾದ ಅತ್ಯುತ್ತಮ ಯೋಗಾಭ್ಯಾಸಗಳು ಇಲ್ಲಿವೆ.
- ಮಕ್ಕಳ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದಾಗ ಬುದ್ಧಿಶಕ್ತಿ ಹೆಚ್ಚಳ ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯಬಹುದು. ಮಕ್ಕಳು ಪ್ರತಿದಿನ ಮಾಡಬಹುದಾದ ಅತ್ಯುತ್ತಮ ಯೋಗಾಭ್ಯಾಸಗಳು ಇಲ್ಲಿವೆ.
(1 / 8)
ಮಕ್ಕಳಿಂದ ಹಿಡಿದು ವೃದ್ಧವರಿಗೆ ಎಲ್ಲಾ ವಯೋಮಾನದವರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಪ್ರಯೋಜನಕಾರಿ ಅನ್ನೋದು ಸಾಬೀತಾಗಿದೆ. ವರ್ಕೌಟ್ ಮಾಡುವುದರಿಂದ ಹಲವಾರು ರೋಗಗಳು, ಆರೋಗ್ಯ ಪರಿಸ್ಥಿತಿಯ ಲಕ್ಷಣಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
(2 / 8)
ಮಕ್ಕಳು ಯೋಗವನ್ನು ಮಾಡಿದರೆ ಅವರ ಆರೋಗ್ಯದ ಜೊತೆಗೆ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಮಕ್ಕಳು ಮಾಡಬಹುದಾದ ಅತ್ಯುತ್ತಮ ಯೋಗಾಭ್ಯಾಸಗಳನ್ನು ಇಲ್ಲಿ ತಿಳಿಯೋಣ
(3 / 8)
ಬೆಕ್ಕು-ಹಸು ಭಂಗಿ - ಮಾರ್ಜರ್ಯಾಸನ-ಬಿಟಿಲಾಸನ ಅಂತ ಕರೆಯಲ್ಪಡುವ ಈ ಆಸನ ಬೆನ್ನುಮೂಳೆಯನ್ನು ಬೆಚ್ಚಗಾಗುವಂತೆ ಮಾಡುತ್ತದೆ. ಇದು ಮಕ್ಕಳ ಉಸಿರಾಟಕ್ಕೂ ಸಹಕಾರಿಯಾಗಿದೆ. ಬೆಕ್ಕು ಅಥವಾ ಹಸು ನಿಂತುಕೊಳ್ಳುವ ರೀತಿಯ ಭಂಗಿ ಇದಾಗಿದೆ.
(4 / 8)
ಮರದ ಭಂಗಿ - ವೃಕ್ಷಾಸನ ಅಂತ ಕರೆಯಲ್ಪಡುವ ಈ ಆಸನವನ್ನು ಮಾಡುವುದರಿಂದ ಮಕ್ಕಳ ಸಮತೋಲನ ಮತ್ತು ಏಕಾಗ್ರತೆಯನ್ನು ಸುಧಾರಿಸಲು ಅತ್ಯುತ್ತಮ ಮಾರ್ಗವಾಗಿದೆ. ಮಕ್ಕಳು ಒಂದು ಕಾಲಿನ ಮೇಲೆ ನಿಲ್ಲುವುದೇ ವೃಕ್ಷಾಸನವಾಗಿದೆ.
(5 / 8)
ಕೆಳಮುಖವಾಗಿರುವ ನಾಯಿ - ಅಧೋ ಮುಖ ಸ್ವನಾಸನ ಅಂತಲೂ ಕರೆಯಲಾಗುವ ಈ ಆಸನವನ್ನು ಮಾಡಿದರೆ ಮಕ್ಕಳ ಇಡೀ ದೇಹವನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ. ಈ ಯೋಗಾಭ್ಯಾಸದಲ್ಲಿ ಕೆಳಗ್ಗೆ ಬಗ್ಗಿ ಕೈಗಳನ್ನು ನೆಲದ ಮೇಲೆ ಕೈಗಳನ್ನು ಇಟ್ಟ ನಂತರ ಸೊಂಟವನ್ನು ಮೇಲಕ್ಕೆ ಎತ್ತಬೇಕು. ಇದು ವಿ ಆಕಾರವನ್ನು ಸೂಚಿಸುತ್ತದೆ.
(6 / 8)
ಮಗುವಿನ ಭಂಗಿ - ಬಾಲಾಸನ ಎಂದು ಕರೆಯಲಾಗುವ ಈ ಭಂಗಿಯು ಮಕ್ಕಳು ವಿಶ್ರಾಂತಿ ಮತ್ತು ಶಾಂತಗೊಳಿಸಲು ಅಗತ್ಯವಾಗಿದೆ. ಒತ್ತಡ ಮತ್ತು ಆಯಾಸವನ್ನು ಕಡಿಮೆ ಮಾಡಲು ಮೊಣಕಾಲುಗಳನ್ನು ನೆಲಕ್ಕೆ ತಾಗಿಸಿದ ನಂತರ ತಲೆಯನ್ನು ನೆಲಕ್ಕೆ ತಾಗಿಸಬೇಕು.
(7 / 8)
ಪರ್ವತ ಭಂಗಿ - ತಾಂಡಾಸನ ಅಂತಲೂ ಕರೆಯುವ ಈ ಯೋಗಾಸದಿಂದ ಸಮತೋಲನವನ್ನು ಉತ್ತೇಜಿಸುತ್ತದೆ. ಮಕ್ಕಳು ಕೈ ಮತ್ತು ಕಾಲುಗಳನ್ನು ಸ್ವಲ್ಪ ಅಗಲ ಮಾಡಿ ನೇರವಾಗಿ ನಿಂತುಕೊಂಡು ತಾಂಡಾಸವನ್ನು ಮಾಡಲಾಗುತ್ತದೆ.
ಇತರ ಗ್ಯಾಲರಿಗಳು