Diabetes Symptoms: ಬೆಳಿಗ್ಗೆ ಎದ್ದಾಗ ದೇಹದಲ್ಲಿ ಕಾಣಿಸುವ ಈ ಲಕ್ಷಣಗಳು ಮಧುಮೇಹವನ್ನು ಸೂಚಿಸಬಹುದು; ನಿರ್ಲಕ್ಷ್ಯ ಮಾಡದಿರಿ
- Health Care: ಇತ್ತೀಚೆಗೆ ಕಾಡುತ್ತಿರುವ ಜೀವನಶೈಲಿಗೆ ಸಂಬಂಧಿಸಿದ ತೊಂದರೆಗಳಲ್ಲಿ ಮಧುಮೇಹವೂ ಒಂದು. ಇದು ಈಗೀಗ ಹಿರಿಯರನ್ನು ಮಾತ್ರವಲ್ಲ ಕಿರಿಯರನ್ನೂ ಕಾಡುತ್ತಿದೆ. ನಿಮ್ಮ ದೇಹದಲ್ಲಿ ಈ ಲಕ್ಷಣಗಳಿದ್ದರೆ, ಮಧುಮೇಹ ಆಗಿರಬಹುದು. ಪರೀಕ್ಷಿಸಲು ಮರೆಯದಿರಿ.
- Health Care: ಇತ್ತೀಚೆಗೆ ಕಾಡುತ್ತಿರುವ ಜೀವನಶೈಲಿಗೆ ಸಂಬಂಧಿಸಿದ ತೊಂದರೆಗಳಲ್ಲಿ ಮಧುಮೇಹವೂ ಒಂದು. ಇದು ಈಗೀಗ ಹಿರಿಯರನ್ನು ಮಾತ್ರವಲ್ಲ ಕಿರಿಯರನ್ನೂ ಕಾಡುತ್ತಿದೆ. ನಿಮ್ಮ ದೇಹದಲ್ಲಿ ಈ ಲಕ್ಷಣಗಳಿದ್ದರೆ, ಮಧುಮೇಹ ಆಗಿರಬಹುದು. ಪರೀಕ್ಷಿಸಲು ಮರೆಯದಿರಿ.
(1 / 6)
ಬೆಳಿಗ್ಗೆ ಎದ್ದ ತಕ್ಷಣ ಗಂಟಲು ಒಣಗುತ್ತದೆಯೇ? ನೀರು ಕುಡಿಯಬೇಕು ಎಂದು ಅನ್ನಿಸುತ್ತದೆಯೇ? ಈ ಲಕ್ಷಣಗಳು ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂಬುದನ್ನು ತಿಳಿದುಕೊಳ್ಳೋಣ.(Freepik)
(2 / 6)
ಎದ್ದ ತಕ್ಷಣಕ್ಕೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಅಭ್ಯಾಸ ಅನೇಕರಿಗೆ ಇರುತ್ತದೆ. ಈ ವಿಧಾನವನ್ನು ಆರೋಗ್ಯಕರ ಅಭ್ಯಾಸ ಎಂದೂ ಹೇಳಲಾಗುತ್ತದೆ. ಆದರೆ ಬೆಳಿಗ್ಗೆ ಎದ್ದ ತಕ್ಷಣ ಬಾಯಾರಿಕೆಯಾಗಿ ನೀರು ಕುಡಿಯವುದು ಅಪಾಯ ಎನ್ನುತ್ತಾರೆ ತಜ್ಞರು. ಹಾಗಾದರೆ ಇದಕ್ಕೆ ಕಾರಣವೇನು? (Freepik)
(3 / 6)
ವೈದ್ಯರ ಪ್ರಕಾರ, ಎದ್ದ ತಕ್ಷಣ ಬಾಯಾರುವುದು ಅಥವಾ ದಾಹವಾಗುವುದು ಮಧುಮೇಹದ ಲಕ್ಷಣವಾಗಿದೆ. ಸಾಮಾನ್ಯವಾಗಿ ಮಧುಮೇಹದ ಲಕ್ಷಣಗಳು ಬಹಳ ತಡವಾಗಿ ಕಾಣಿಸುತ್ತವೆ. ಆದರೆ ಬೆಳಗಿನ ಕೆಲವು ರೋಗಲಕ್ಷಣಗಳ ಮೂಲಕ ಇದನ್ನು ಸುಲಭವಾಗಿ ಗುರುತಿಸಬಹುದಾಗಿದೆ.(Freepik)
(4 / 6)
ಬೆಳಗಿನ ವೇಳೆ ತುರಿಕೆ ಸಮಸ್ಯೆಯೂ ಹೆಚ್ಚುತ್ತದೆ. ಮಧುಮೇಹವು ದೇಹದ ವಿವಿಧ ಭಾಗಗಳಲ್ಲಿ ತುರಿಕೆಗೆ ಕಾರಣವಾಗುತ್ತದೆ. ಇದಲ್ಲದೇ ಖಾಸಗಿ ಭಾಗಗಳಲ್ಲಿ ತುರಿಕೆ ಸಮಸ್ಯೆಯೂ ಹೆಚ್ಚುತ್ತದೆ. ವೈದ್ಯರ ಪ್ರಕಾರ, ಮಧುಮೇಹದ ಲಕ್ಷಣಗಳಲ್ಲಿ ಒಂದು ತುರಿಕೆ. ಅದನ್ನು ನಿರ್ಲಕ್ಷ್ಯ ಮಾಡಬೇಡಿ. (Freepik)
(5 / 6)
ಎದ್ದ ನಂತರ ಸುಸ್ತಾಗುತ್ತಿದೆಯೇ? ಸಾಮಾನ್ಯವಾಗಿ, ಬೆಳಿಗ್ಗೆ ಎದ್ದಾಗ ದೇಹ ಉಲ್ಲಾಸದಿಂದ ತುಂಬಿರಬೇಕು. ಈ ಸಮಯದಲ್ಲಿ ಮನಸ್ಸು ಕೂಡ ತುಂಬಾ ಲವಲವಿಕೆಯಿಂದ ಕೂಡಿರುತ್ತದೆ. ಆದರೆ ಮಧುಮೇಹವಿದ್ದರೆ ಬೆಳಿಗ್ಗೆ ಎದ್ದಾಗ ದೇಹವು ದಣಿದ ಅನುಭವವಾಗುತ್ತದೆ. ಸುಲಭವಾಗಿ ಏಳಲು ಇಷ್ಟವಾಗುವುದಿಲ್ಲ.(Freepik)
ಇತರ ಗ್ಯಾಲರಿಗಳು