Stress Management: ಕೆಲಸದ ಒತ್ತಡ ಅತಿಯಾದ್ರೆ ಯೋಗ ಧ್ಯಾನ ಯಾವುದೂ ಬೇಡ, ಈ 3 ಪದಾರ್ಥ ಸೇವಿಸಿದ್ರೆ ಸಾಕು, ಒತ್ತಡ ಮಂಗಮಾಯ ಆಗೋದು ಖಂಡಿತ
- ಇತ್ತೀಚಿಗೆ ಯಾರಲ್ಲಿ ಕೇಳಿದರೂ ನನಗೆ ಒತ್ತಡ ಹೆಚ್ಚಿದೆ ಎನ್ನುತ್ತಾರೆ. ಒತ್ತಡ ಹಲವು ರೋಗಗಳನ್ನು ಉಂಟು ಮಾಡಲು ಕಾರಣವಾಗುತ್ತದೆ. ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಒತ್ತಡವೇ ಮೂಲ ಕಾರಣ. ಆದರೆ ಒತ್ತಡ ನಿರ್ವಹಣೆಯನ್ನು ಕಲಿಯುವುದು ಬಹಳ ಮುಖ್ಯ. ಒತ್ತಡ ನಿರ್ವಹಣೆಗೆ ಯೋಗ, ಧ್ಯಾನದ ಜೊತೆಗೆ ಕೆಲವು ಆಹಾರಗಳು ಸಹಾಯ ಮಾಡುತ್ತವೆ. ಅಂತಹ ಕೆಲವು ಆಹಾರ ಪದಾರ್ಥಗಳಿವು.
- ಇತ್ತೀಚಿಗೆ ಯಾರಲ್ಲಿ ಕೇಳಿದರೂ ನನಗೆ ಒತ್ತಡ ಹೆಚ್ಚಿದೆ ಎನ್ನುತ್ತಾರೆ. ಒತ್ತಡ ಹಲವು ರೋಗಗಳನ್ನು ಉಂಟು ಮಾಡಲು ಕಾರಣವಾಗುತ್ತದೆ. ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಒತ್ತಡವೇ ಮೂಲ ಕಾರಣ. ಆದರೆ ಒತ್ತಡ ನಿರ್ವಹಣೆಯನ್ನು ಕಲಿಯುವುದು ಬಹಳ ಮುಖ್ಯ. ಒತ್ತಡ ನಿರ್ವಹಣೆಗೆ ಯೋಗ, ಧ್ಯಾನದ ಜೊತೆಗೆ ಕೆಲವು ಆಹಾರಗಳು ಸಹಾಯ ಮಾಡುತ್ತವೆ. ಅಂತಹ ಕೆಲವು ಆಹಾರ ಪದಾರ್ಥಗಳಿವು.
(1 / 5)
ಒತ್ತಡ ನಿರ್ವಹಣೆಗೆ ಆಹಾರವು ಸಹಾಯ ಮಾಡುತ್ತದೆ. ಕೆಲವೊಂದು ಆಹಾರಗಳು ದೈಹಿಕ ಆರೋಗ್ಯ ವದ್ಧಿಯ ಜೊತೆಗೆ ಮಾನಸಿಕ ಆರೋಗ್ಯ ವೃದ್ಧಿಗೂ ಸಹಾಯ ಮಾಡುತ್ತವೆ. ರುಜುತಾ ದಿವೇಕರ್ ಎಂಬ ಪೌಷ್ಟಿಕ ತಜ್ಞೆ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ವಿಡಿಯೊವೊಂದರಲ್ಲಿ ಒತ್ತಡ ನಿರ್ವಹಣೆಗೆ ಸಹಾಯ ಮಾಡುವ ಆಹಾರ ಕ್ರಮಗಳ ಬಗ್ಗೆ ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ ಅವರು ಮೂರು ನಿರ್ದಿಷ್ಟ ಆಹಾರಗಳನ್ನು ಹೈಲೈಟ್ ಮಾಡಿದ್ದಾರೆ. ಆ ಆಹಾರ ಪದಾರ್ಥಗಳು ಯಾವುವು ನೋಡಿ
(2 / 5)
ಶೇಂಗಾ: ದಿವೇಕರ್ ಅವರ ಪ್ರಕಾರ ಶೇಂಗಾ ಒತ್ತಡ ನಿರ್ವಹಣೆಗೆ ಬಹಳ ಪ್ರಯೋಜನಕಾರಿ. ಇದು ವಿಟಮಿನ್ ಬಿ6 ಹಾಗೂ ಮಗ್ನೇಶಿಯಂ ಅಂಶಗಳನ್ನು ಹೊಂದಿದೆ. ಇದರಲ್ಲಿರುವ ಅಗತ್ಯ ಪೋಷಕಾಂಶಗಳು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತವೆ, ಮಾತ್ರವಲ್ಲ ಒತ್ತಡ ನಿರ್ವಹಣೆಗೂ ಸಹಕಾರಿ. ಶೇಂಗಾದಲ್ಲಿ ಇರುವ ಪಾಲಿಫೆನಾಲ್‌ಗಳು ಅರಿವಿನ ಶಕ್ತಿ ಹಾಗೂ ಮನಸ್ಸಿನ ಉತ್ಸಾಹ ಹೆಚ್ಚಲು ಸಹಕಾರಿ. ಇವು ಖಿನ್ನತೆಯನ್ನೂ ಕೂಡ ಸಂಭಾವ್ಯವಾಗಿ ಕಡಿಮೆಯಾಗಲು ನೆರವಾಗುತ್ತವೆ.
(3 / 5)
ಗೋಡಂಬಿ: ಗೋಡಂಬಿ ಕೂಡ ಒತ್ತಡ ನಿರ್ವಹಣೆಗೆ ಮುಖ್ಯ ಎನ್ನುತ್ತಾರೆ ಪೌಷ್ಟಿಕತಜ್ಞರು. ಇದು ಕಬ್ಬಿಣಾಂಶ ಹಾಗೂ ಮೆಗ್ನೀಶಿಯಂ ಅಂಶಗಳಿಂದ ಸಮೃದ್ಧವಾಗಿರುತ್ತದೆ. ಪ್ರತಿದಿನ ಒಂದು ಮುಷ್ಟಿ ಗೋಡಂಬಿ ತಿನ್ನುವುದರಿಂದ ಇದು ಎನರ್ಜಿ ಬೋಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಅದರಲ್ಲೂ ಸುಸ್ತು, ಮನಸ್ಥಿತಿ ಸರಿ ಇಲ್ಲದೇ ಇರುವಾಗ ಗೋಡಂಬಿ ಸೇವನೆ ರೂಢಿಸಿಕೊಳ್ಳಿ. ದಿವೇಕರ್ ಅವರ ಪ್ರಕಾರ ರಾತ್ರಿ ಮಲಗುವ ಸಮಯದಲ್ಲಿ ಹಾಲಿನ ಜೊತೆಗೆ ಗೋಡಂಬಿ ಸೇವಿಸುವುದು ಕೂಡ ಉತ್ತಮ ಅಭ್ಯಾಸ.
(4 / 5)
ಒಣಕೊಬ್ಬರಿ: ಒಣಕೊಬ್ಬರಿಯಲ್ಲಿ ಲಾರಿಕ್ ಆಮ್ಲ ಹೇರಳವಾಗಿರುತ್ತದೆ. ಇದು ಕೂದಲು ಮತ್ತು ಚರ್ಮದ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹಸಿ ತೆಂಗಿನಕಾಯಿಯನ್ನು ಸೇವಿಸುವುದರಿಂದ ನೆತ್ತಿಯ ಜಲಸಂಚಯನವನ್ನು ಹೆಚ್ಚಿಸುತ್ತದೆ ಮತ್ತು ಒಣ, ಸುಕ್ಕುಗಟ್ಟಿದ ಕೂದಲನ್ನು ಪೋಷಿಸುತ್ತದೆ. ಇದು ಮೆದುಳಿನ ಕಾರ್ಯವನ್ನು ಉತ್ತೇಜಿಸುತ್ತದೆ. ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಹಾಗೂ ರಕ್ತಹೀನತೆಯನ್ನು ತಡೆಯುತ್ತದೆ. ಇದನ್ನು ತಿಂದಾಗ ಹೊಟ್ಟೆ ತುಂಬಿದ ಅನುಭವವಾಗುವುದು ಸಹಜ. ಇದರಿಂದ ಹಸಿವಿನ ಒತ್ತಡವನ್ನೂ ನಿಯಂತ್ರಿಸಬಹುದು.
ಇತರ ಗ್ಯಾಲರಿಗಳು