Forgetfulness: ಪದೇ ಪದೆ ಮರೆವು ಆಗುತ್ತಿದೆಯಾ; ಇಲ್ಲಿವೆ ಜ್ಞಾಪಕಶಕ್ತಿ ಹೆಚ್ಚಿಸುವ 7 ಅಭ್ಯಾಸಗಳು
- Forgetfulness: ಪ್ರತಿಯೊಬ್ಬ ವ್ಯಕ್ತಿಯ ದೈನಂದಿನ ಜೀವನದಲ್ಲಿ ಸ್ಮರಣೆ ಪ್ರಮುಖ ಪಾತ್ರವಹಿಸುತ್ತದೆ. ಒಂದಲ್ಲಾ ಒಂದು ವಿಚಾರದಲ್ಲಿ ಮರೆವು ಆಗುತ್ತದೆ. ಕಲಿಕೆಯಲ್ಲಿ ಆಸಕ್ತಿ ಇಲ್ಲದಿದ್ದರೂ ಹೀಗೆ ಆಗುತ್ತೆ. ಆದರೆ ಪದೇ ಪದೆ ಮೆರವು ಆಗುತ್ತಿದ್ದರೆ, ಇದರಿಂದ ಹೊರ ಬರುವುದು ಹೇಗೆ? ಜ್ಞಾಪಕಶಕ್ತಿ ಹೆಚ್ಚಿಸುವ ಈ ಅಭ್ಯಾಸಗಳ ಬಗ್ಗೆ ತಿಳಿಯಿರಿ.
- Forgetfulness: ಪ್ರತಿಯೊಬ್ಬ ವ್ಯಕ್ತಿಯ ದೈನಂದಿನ ಜೀವನದಲ್ಲಿ ಸ್ಮರಣೆ ಪ್ರಮುಖ ಪಾತ್ರವಹಿಸುತ್ತದೆ. ಒಂದಲ್ಲಾ ಒಂದು ವಿಚಾರದಲ್ಲಿ ಮರೆವು ಆಗುತ್ತದೆ. ಕಲಿಕೆಯಲ್ಲಿ ಆಸಕ್ತಿ ಇಲ್ಲದಿದ್ದರೂ ಹೀಗೆ ಆಗುತ್ತೆ. ಆದರೆ ಪದೇ ಪದೆ ಮೆರವು ಆಗುತ್ತಿದ್ದರೆ, ಇದರಿಂದ ಹೊರ ಬರುವುದು ಹೇಗೆ? ಜ್ಞಾಪಕಶಕ್ತಿ ಹೆಚ್ಚಿಸುವ ಈ ಅಭ್ಯಾಸಗಳ ಬಗ್ಗೆ ತಿಳಿಯಿರಿ.
(1 / 8)
ಮನೆ, ವಾಹನಗಳ ಕೀಯನ್ನು ಎಲ್ಲಿ ಬಿಟ್ಟಿದ್ದೇನೆ ಅಂತ ಆಗಾಗ ನೆನಪಿಸಿಕೊಳ್ಳಲು ಪ್ರಯತ್ನಿಸಿರುವುದು ಹಲವರ ಅನುಭವಕ್ಕೆ ಬಂದಿರುತ್ತದೆ. ಕೆಲವೊಮ್ಮೆ ಕೆಲವು ನಿಮಿಷಗಳ ಹಿಂದಿನ ಘಟನೆಗಳನ್ನೇ ಮೆರೆತ ಸಂದರ್ಭಗಳಿವೆ. ಜ್ಞಾಪಕ ಶಕ್ತಿ ಹೆಚ್ಚಿಸಲು ಮೆದುಳಿಗೆ ಉತ್ತೇಜನ ನೀಡುವಂತಹ ಕೆಲವು ಅಭ್ಯಾಸಗಳನ್ನು ತಿಳಿಯೋಣ.
(2 / 8)
ಸಂಗೀತ ವಾದ್ಯವನ್ನು ನುಡಿಸುವ ಅಭ್ಯಾಸ ಖುಷಿಯನ್ನು ನೀಡುವುದರ ಜೊತೆ ಸ್ಮರಣೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಸಂಗೀತ ವಾದ್ಯವನ್ನು ನುಡಿಸುವುದನ್ನು ಕಲಿಯಿರಿ
(3 / 8)
ದೈಹಿಕವಾಗಿ ಸಕ್ರಿಯರಾಗಿರಬೇಕು. ನಿಯಮಿತ ದೈಹಿಕ ಚಟುವಟಿಕೆಗಳು ದೇಹಕ್ಕೆ ಹಲವು ಪ್ರಯೋಜಗಳನ್ನು ನೀಡುತ್ತವೆ. ಇದರಲ್ಲಿ ಜ್ಞಾಪಕ ಶಕ್ತಿ ಹೆಚ್ಚಳವೂ ಸೇರಿದೆ. ವ್ಯಾಯಾಮ ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.
(4 / 8)
ದೇಹದಂತೆ ಮೆದುಳಿಗೂ ಕೆಲವೊಂದು ವ್ಯಾಯಾಮಗಳ ಅಗತ್ಯವಿದೆ. ನಿಮ್ಮ ಮನಸ್ಸಿಗೆ ಸವಾಲು ಹಾಕುವಂತ ಕೆಲವೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆಟಗಳು ಹಾಗೂ ಸಂವಾದಾತ್ಮಕ ಚರ್ಚೆಗಳಲ್ಲೂ ಭಾಗವಹಿಸಬೇಕು
(5 / 8)
ಚೂಯಿಂಗ್ ಗಮ್ ಅಗಿಯುವುದರಿಂದ ಸ್ಮರಣಾ ಶಕ್ತಿ ಸುಧಾರಿಸಲು ಸಹಾಯ ಮಾಡುತ್ತದೆ. ಅಪೆಟೈಟ್‌ನಲ್ಲಿನ ಅಧ್ಯಾಯನವು ಕಲಿಕೆ ಮತ್ತು ಮೆಮೊರಿ ಕಾರ್ಯಗಳ ಸಮಯದಲ್ಲಿ ಚೂಯಿಂಗ್ ಗಮ್ ಕಾರ್ಯಕ್ಷಮತೆ ಹೆಚ್ಚಿಸುತ್ತದೆ ಎಂಬುದನ್ನು ಕಂಡು ಹಿಡಿದಿದೆ. ಮೆದುಳಿಗೆ ರಕ್ತ ಹರಿವನ್ನು ಹೆಚ್ಚಿಸುತ್ತದೆ ಅಂತಲೂ ಹೇಳಿದೆ
(6 / 8)
ಮೆದುಳಿನ ಆರೋಗ್ಯದ ಮೇಲೆ ನಾವು ತಿನ್ನುವ ಆಹಾರವೂ ಪರಿಣಾಮ ಬೀರುತ್ತದೆ. ಉತ್ಕರ್ಷಣ ನಿರೋಧಗಳು, ಉತ್ತಮ ಕೊಬ್ಬುಗಳು, ಜೀವಸತ್ವಗಳು ಹಾಗೂ ಖನಿಜಗಳು ಸಮೃದ್ಧವಾಗಿರುವ ಆಹಾರ ಶಕ್ತಿಯನ್ನು ನೀಡುವ ಜೊತೆಗೆ ಮೆದುಳಿನ ಆರೋಗ್ಯ ರಕ್ಷಣೆಗೆ ಸಹಾಯ ಮಾಡುತ್ತದೆ
(7 / 8)
ಧ್ಯಾನ ಮಾಡುವುದರಿಂದಲೂ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ಧ್ಯಾನ ನಮ್ಮ ಗಮನವನ್ನು ಸುಧಾರಿಸುವ ಮೂಲಕ ಸ್ಮರಣೆಯನ್ನು ಹೆಚ್ಚಿಸುತ್ತದೆ. ಇದು ಒತ್ತಡ ಮತ್ತು ಆತಂಕವನ್ನೂ ಕಡಿಮೆ ಮಾಡುತ್ತದೆ.
ಇತರ ಗ್ಯಾಲರಿಗಳು