Cloves Benefits: ಲವಂಗದ ಆರೋಗ್ಯ ಪ್ರಯೋಜನಗಳು, ಲವಂಗದಿಂದ ಸುಖನಿದ್ದೆ, ಮೊಡವೆ ಹಲ್ಲುನೋವು ಮಲಬದ್ಧತೆಗೂ ಇದುವೇ ಮದ್ದು
Health Benefits of Cloves: ಲವಂಗ ಸೇವನೆಯಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ನಿದ್ರಾಹೀನತೆಗೆ ಲವಂಗ ಸೇವನೆ ಪರಿಹಾರವಾಗಿದೆ. ಹಲ್ಲು ನೋವು ಉಪಶಮನಕ್ಕೂ ಲವಂಗ ಬಳಸಬಹುದು. ಇದೇ ರೀತಿ ಮಲಬದ್ಧತೆಗೂ ಇದೇ ಮದ್ದು. ಲವಂಗದ ಹತ್ತು ಹಲವು ಪ್ರಯೋಜನಗಳ ವಿವರ ಇಲ್ಲಿದೆ.
(1 / 9)
ರಾತ್ರಿ ಸಾಕಷ್ಟು ಜನರು ನಿದ್ರಾ ಹೀನತೆಯಿಂದ ಪರಿತಪಿಸುತ್ತಾರೆ. ಕಣ್ಣು ಮುಚ್ಚಿದರೂ ನಿದ್ದೆ ಬರ್ತಾ ಇಲ್ಲ, ನಿದ್ದೆಯಿಲ್ಲದೆ ಹೊರಳಾಡಿ ಹೊರಳಾಡಿ ಸಮಯ ಕಳೆದು ಬೆಳಗಾಗುವುದೇ ತಿಳಿಯುತ್ತಿಲ್ಲ ಎಂದು ಸಾಕಷ್ಟು ಜನರು ಪರಿತಪಿಸಬಹುದು. ರಾತ್ರಿ ಚೆನ್ನಾಗಿ ನಿದ್ದೆ ಬರಲು ಲವಂಗ ನೆರವಾಗುತ್ತದೆ. ಇಂತಹ ಹಲವು ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ.
(2 / 9)
ಪ್ರತಿದಿನ ಬೆಳಗ್ಗೆ ನಿಮ್ಮ ಬಾಯಿಯಲ್ಲಿ ಲವಂಗವನ್ನು ಹಾಕಿಕೊಳ್ಳಿ. ಇದರಿಂದ ನೀವು ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಬಹುದು. ಪೊಟ್ಯಾಸಿಯಮ್, ಕಬ್ಬಿಣ, ಕ್ಯಾಲ್ಸಿಯಂನಂತಹ ಅನೇಕ ಖನಿಜಗಳು ಮತ್ತು ವಿಟಮಿನ್‌ಗಳು ಲವಂಗದಲ್ಲಿ ಕಂಡುಬರುತ್ತವೆ.
(3 / 9)
ಅನೇಕರು ನಿದ್ರಾಹೀನತೆಯ ತೊಂದರೆ ಅನುಭವಿಸುತ್ತಾರೆ. ರಾತ್ರಿ ಮಲಗುವ ಮುಂಚೆ ಒಂದು ಲವಂಗ ಬಾಯಿಗೆ ಹಾಕಿಕೊಳ್ಳುವುದು ಉತ್ತಮ. ಇದು ಒತ್ತಡ ಕಡಿಮೆ ಮಾಡಿ ಸುಖ ನಿದ್ದೆಗೆ ಸಹಕರಿಸುತ್ತದೆ.
(4 / 9)
ಲವಂಗ ತಿಂದರೆ ಹಲ್ಲು ನೋವು ಬರುವುದಿಲ್ಲ. ಹಲ್ಲುಗಳು ತೊಂದರೆಗಳು ಕಡಿಮೆಯಾಗುತ್ತವೆ. ಲವಂಗ ತಿನ್ನುವುದರಿಂದ ಚಯಾಪಚಯ ಉತ್ತಮಗೊಳ್ಳುತ್ತದೆ. ತೂಕ ಕಳೆದುಕೊಳ್ಳಲು ಸಹಕಾರಿ. ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಮಲಬದ್ಧತೆ, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಮುಕ್ತಿ ದೊರಕುತ್ತದೆ.
(5 / 9)
ಸಾಕಷ್ಟು ಜನರು ಮಲಬದ್ಧತೆಯಿಂದ ಬಳಲುತ್ತಿದ್ದಾರೆ. ಇಂತಹ ತೊಂದರೆ ಇರುವವರು ಮಲಗುವ ಮುನ್ನ ಒಂದೆರಡು ಲವಂಗವನ್ನು ಜಗಿದು ಬೆಚ್ಚಗಿನ ನೀರನ್ನು ಕುಡಿಯಬೇಕು.
(6 / 9)
ರಾತ್ರಿ ಮಲಗುವ ಮುನ್ನ ಎರಡು ಲವಂಗ ತಿಂದರೆ ಅದರಲ್ಲಿರುವ ವಿಶೇಷ ಪೋಷಕಾಂಶಗಳು ಮುಖದಲ್ಲಿ ಮೊಡವೆ ಬರದಂತೆ ನೋಡಿಕೊಳ್ಳುತ್ತದೆ. ಗಂಟಲು ನೋವಿಗೆ ಉಪಶಮನ ನೀಡುತ್ತದೆ.
ಇತರ ಗ್ಯಾಲರಿಗಳು