ಹೃದಯದಿಂದ ಮೆದುಳಿನ ಆರೋಗ್ಯದವರೆಗೆ; ಅರಿಶಿನ, ಶುಂಠಿಯನ್ನ ಒಟ್ಟಿಗೆ ಸೇವಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳಿವು
- Turmeric Ginger Benefits: ಭಾರತೀಯ ಆಹಾರದ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸುವಲ್ಲಿ ಅರಿಶಿನ ಮತ್ತು ಶುಂಠಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ಎರಡು ಮಸಾಲೆ ಪದಾರ್ಥಗಳಲ್ಲಿ ಔಷಧೀಯ ಗುಣಗಳಿದ್ದು, ಹಲವು ಆರೋಗ್ಯ ಪ್ರಯೋಜಗಳನ್ನು ನೀಡುತ್ತವೆ. ಏನೆಲ್ಲಾ ಪ್ರಯೋಜಗಳಿವೆ ಅನ್ನೋದನ್ನ ತಿಳಿಯೋಣ.
- Turmeric Ginger Benefits: ಭಾರತೀಯ ಆಹಾರದ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸುವಲ್ಲಿ ಅರಿಶಿನ ಮತ್ತು ಶುಂಠಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ಎರಡು ಮಸಾಲೆ ಪದಾರ್ಥಗಳಲ್ಲಿ ಔಷಧೀಯ ಗುಣಗಳಿದ್ದು, ಹಲವು ಆರೋಗ್ಯ ಪ್ರಯೋಜಗಳನ್ನು ನೀಡುತ್ತವೆ. ಏನೆಲ್ಲಾ ಪ್ರಯೋಜಗಳಿವೆ ಅನ್ನೋದನ್ನ ತಿಳಿಯೋಣ.
(1 / 8)
ಮಸಾಲೆ ಪದಾರ್ಥಗಳಾದ ಅರಿಶಿನ ಮತ್ತು ಶುಂಠಿ ಶತಮಾನಗಳಿಂದಲೂ ಔಷಧದ ಅವಿಭಾಜ್ಯ ಅಂಗವಾಗಿವೆ. ಇಂದಿಗೂ ಇವುಗಳನ್ನು ಔಷಧಿಗಳನ್ನು ಬಳಸಲಾಗುತ್ತೆ. ಅರಿಶಿನ ಮತ್ತು ಶುಂಠಿಯಲ್ಲಿ ಅದ್ಭುತವಾದ ಆರೋಗ್ಯ ಪ್ರಯೋಜಗಳಿವೆ
(2 / 8)
ಊರಿಯೂತ ಕಡಿಮೆಯಾಗುತ್ತೆ - ಅರಿಶಿನ ಮತ್ತು ಶುಂಠಿ ಎರಡರಲ್ಲೂ ಉರಿಯೂತದ ಗುಣಲಕ್ಷಣಗಳೊಂದಿಗೆ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿವೆ. ಅರಿಶಿನದಲ್ಲಿ ಕರ್ಕ್ಯುಮಿನ್ ಮತ್ತು ಶುಂಠಿಯಲ್ಲಿರುವ ಜಿಂಜರಾಲ್ ಉರಿಯೂತವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ
(3 / 8)
ಜೀರ್ಣಕ್ರಿಯೆಗೆ ಸಹಕಾರಿ - ಶುಂಠಿ ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ. ಅರಿಶಿನ ಜೀರ್ಣಾಂಗವನ್ನು ಶಮನಗೊಳಿಸಲು ಮತ್ತು ಅರ್ಜೀಣ, ಉಬ್ಬುವಿಕೆ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತೆ
(4 / 8)
ಪ್ರತಿರಕ್ಷಣಾ ವ್ಯವಸ್ಥೆಯ ಉತ್ತೇಜನ - ಅರಿಶಿನ ಮತ್ತು ಶುಂಠಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ರೋಗನಿರೋಧಕ ಉತ್ತೇಜಿಸುವ ಗುಣಗಳನ್ನು ಹೊಂದಿವೆ. ಇವುಗಳನ್ನ ಒಟ್ಟಿಗೆ ಸೇವಿಸುವುದರಿಂದ ದೇಹ ನೈಸರ್ಗಿಕವಾಗಿ ರಕ್ಷಣೆ ಬಲಗೊಳ್ಳಲು ನೆರವಾಗುತ್ತೆ
(5 / 8)
ಹೃದಯ ಆರೋಗ್ಯ - ಶುಂಟಿ ಮತ್ತು ಅರಿಶಿನ ಕೊಬ್ಬು, ರಕ್ತದೊತ್ತಡವನ್ನು ಕಡಿಮೆ ಮಾಡುತ್ತೆ. ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತೆ ಎಂದು ಕೆಲ ಸಂಶೋಧನೆಗಳು ಹೇಳಿವೆ
(6 / 8)
ಮೆದುಳಿನ ಆರೋಗ್ಯ - ಅರಿಶಿನದಲ್ಲಿನ ಸಕ್ರಿಯ ಸಂಯುಕ್ತವು ನ್ಯೂರೋಪ್ರೊಟೆಕ್ವಿವ್ ಗುಣಲಕ್ಷಣಗಳನ್ನು ಹೊಂದಿದೆ. ಅರಿವಿನ ಕಾರ್ಯವನ್ನು ಸುಧಾರಿಸಿದರೆ, ಶುಂಠಿ ಮೆದುಳಿನ ಆರೋಗ್ಯ ಕಾಪಾಡಲು ನೆರವಾಗುತ್ತೆ
(7 / 8)
ಉತ್ಕರ್ಷಣ ನಿರೋಧಕ ಗುಣಗಳು - ಅರಿಶಿನ ಮತ್ತು ಶುಂಠಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇವು ಜೀವಕೋಶಗಳಿಗೆ ಆಗುವ ಹಾನಿಯನ್ನು ತಪ್ಪಿಸುತ್ತವೆ. ಮಾತ್ರವಲ್ಲದೆ ಆಕ್ಸಿಡೇಟಿವ್ ಒತ್ತಡವನ್ನು ತಟಸ್ಥಗೊಳಿಸುತ್ತದೆ
ಇತರ ಗ್ಯಾಲರಿಗಳು