ಜಡ ಜೀವನಶೈಲಿಯಿಂದ ಕಾಡುತ್ತಿವೆ ಇಲ್ಲದ ಆರೋಗ್ಯ ಸಮಸ್ಯೆಗಳು; ದೇಹವನ್ನು ಆಕ್ಟಿವ್ ಆಗಿರಿಸಿಕೊಳ್ಳಲು ಐಸಿಎಂಆರ್ ನೀಡಿದ ಮಹತ್ವದ ಸಲಹೆಗಳಿವು
- ICMR Tips to Keep Body Active: ಇತ್ತೀಚಿನ ಯುವಜನತೆ ಜಡಜೀವನಶೈಲಿಯ ಕಾರಣದಿಂದ ಇಲ್ಲದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದೇಹ ಕ್ರಿಯಾಶೀಲವಾಗಿಲ್ಲದ ಕಾರಣ ಒಂದಲ್ಲ ಒಂದು ಸಮಸ್ಯೆ ಕಾಡುವುದು ಸಹಜ. ಬಿಡುವಿಲ್ಲದ ವೇಳಾಪಟ್ಟಿಯನ್ನು ಅನುಸರಿಸುವವರು ದೈಹಿಕ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳಲು ಐಸಿಎಂಆರ್ ಕೆಲವು ಸಲಹೆಗಳನ್ನು ನೀಡಿದೆ.
- ICMR Tips to Keep Body Active: ಇತ್ತೀಚಿನ ಯುವಜನತೆ ಜಡಜೀವನಶೈಲಿಯ ಕಾರಣದಿಂದ ಇಲ್ಲದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದೇಹ ಕ್ರಿಯಾಶೀಲವಾಗಿಲ್ಲದ ಕಾರಣ ಒಂದಲ್ಲ ಒಂದು ಸಮಸ್ಯೆ ಕಾಡುವುದು ಸಹಜ. ಬಿಡುವಿಲ್ಲದ ವೇಳಾಪಟ್ಟಿಯನ್ನು ಅನುಸರಿಸುವವರು ದೈಹಿಕ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳಲು ಐಸಿಎಂಆರ್ ಕೆಲವು ಸಲಹೆಗಳನ್ನು ನೀಡಿದೆ.
(1 / 12)
ನಮ್ಮ ಸ್ನಾಯುವಿನ ದ್ರವ್ಯರಾಶಿಯನ್ನು ಕಾಪಾಡಿಕೊಳ್ಳಲು ಮತ್ತು ಕೊಬ್ಬಿನ ಶೇಖರಣೆ ಮತ್ತು ತೂಕ ಹೆಚ್ಚಾಗುವುದನ್ನು ತಡೆಯಲು, ನಾವು ದಿನವಿಡೀ ಸಕ್ರಿಯವಾಗಿರುವುದು ಬಹಳ ಮುಖ್ಯ. ಜಡಜೀವನಶೈಲಿ ಅನುಕರಣೆಯಿಂದ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. (Freepik)
(2 / 12)
ನೀವು ಪ್ರತಿದಿನ 9 ರಿಂದ 10 ಗಂಟೆಗಳ ಕಾಲ ಕುಳಿತುಕೊಂಡೇ ಇರುವ ಕೆಲಸ ನಿಮ್ಮದಾಗಿದ್ದರೆ, ನೀವು ಕೆಲಸ ನಡುವ ಸ್ಟ್ಯಾಂಡಿಂಗ್ ಡೆಸ್ಕ್ ಕ್ರಮವನ್ನು ಅನುಸರಿಸಬೇಕು. ಅಂದರೆ ನಿಂತುಕೊಂಡು ಕೆಲಸ ಮಾಡುವಂತೆ ನಿಮ್ಮ ಡೆಸ್ಕ್ ಅನ್ನು ಸೆಟ್ ಮಾಡಿಕೊಳ್ಳಬೇಕು. ಕೆಲಸ ನಡುವೆ ಪ್ರತಿ ಅರ್ಧಗಂಟೆಗೊಮ್ಮೆ ಎದ್ದೇಳಬೇಕು. 2 ರಿಂದ 3 ನಿಮಿಷಗಳ ಕಾಲ ಆಚೀಚೆ ಓಡಾಡಬೇಕು.(Unsplash)
(3 / 12)
ಅಲ್ಪಾವಧಿಯ ದೈಹಿಕ ಚಟುವಟಿಕೆಯೂ ಸಹ ದೇಹರಚನೆಯನ್ನು ಕಾಪಾಡಿಕೊಳ್ಳಲು ಬಹಳ ಪರಿಣಾಮಕಾರಿಯಾಗಿದೆ. ಹೆಜ್ಜೆ ಸಂಖ್ಯೆ ಅಥವಾ ವಾಕಿಂಗ್ ಅಂತರವನ್ನು ಸುಧಾರಿಸಲು ಪ್ರತಿ ಗಂಟೆಗೆ ಒಮ್ಮೆ 5-10 ನಿಮಿಷಗಳ ಕಾಲ ನಡೆಯಬೇಕು. (Shutterstock)
(4 / 12)
ಫೋನ್ ಬಂದಾಗ ಕುಳಿತುಕೊಂಡೇ ಮಾತನಾಡಬೇಡಿ. ಕೆಲಸದ ಅವಧಿಯಲ್ಲಿ ಫೋನ್‌ನಲ್ಲಿ ಮಾತನಾಡುವಾಗ ನಡೆದಾಡಿ. ಕಚೇರಿಯಲ್ಲಿ ಹಾಗೂ ಮನೆಯಲ್ಲಿ ಕೆಲಸ ಮಾಡುವವರು ಇಬ್ಬರೂ ಈ ಕ್ರಮ ಪಾಲಿಸಬಹುದು. (Freepik)
(5 / 12)
ಎಲಿವೇಟರ್, ಲಿಫ್ಟ್ ಬದಲಿಗೆ ಮೆಟ್ಟಿಲುಗಳನ್ನು ಬಳಸಿ. ಇದು ನೀವು ದೈಹಿಕವಾಗಿ ಸಕ್ರಿಯವಾಗಿರುವುದನ್ನು ಖಚಿತಪಡಿಸುತ್ತದೆ. ಮೆಟ್ಟಿಲು ಹತ್ತುವುದರಿಂದ ಸ್ನಾಯುಗಳು ಸಹ ತಾಲೀಮು ಪಡೆಯುತ್ತವೆ.(Freepik)
(6 / 12)
ಆಫೀಸಿಗೆ ಕಾರ್ ಬದಲು ಬಸ್ ಅಥವಾ ಮೆಟ್ರೊದಂತಹ ವಾಹನಗಳನ್ನು ಬಳಸುವುದರಿಂದ ಮನೆಯಿಂದ ನಿಲ್ದಾಣ ಹಾಗೂ ನಿಲ್ದಾಣದಿಂದ ಕಚೇರಿವರೆಗೆ ನಡೆದುಕೊಂಡು ಹೋಗಬಹುದು. ಪಾರ್ಕಿಂಗ್ ಜಾಗದಿಂದ ಕಚೇರಿವರೆಗೆ ನಡೆದುಕೊಂಡು ಹೋಗಿ.
(8 / 12)
ವಯಸ್ಸಾದಂತೆ ಸ್ನಾಯುಗಳು ಜೋತು ಬೀಳುತ್ತವೆ. ಅಂತಹ ಸಂದರ್ಭಗಳಲ್ಲಿ ಸ್ನಾಯುಗಳು ಬಿಗಿಯಾಗುವ ವ್ಯಾಯಾಮಗಳನ್ನು ಅನುಸರಿಸಬೇಕು ಹಾಗೂ ತೂಕ ನಷ್ಟಕ್ಕೆ ಗಮನ ನೀಡಿ. (shutterstock)
(9 / 12)
ಉಸಿರಾಟದ ವ್ಯಾಯಾಮದ ಜೊತೆಗೆ ಕೆಲವು ಯೋಗ ಭಂಗಿಗಳು ಚಯಾಪಚಯವನ್ನು ವೇಗಗೊಳಿಸುತ್ತದೆ ಮತ್ತು ಕೊಬ್ಬನ್ನು ಸುಡಲು ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.(Pixabay)
(10 / 12)
ನೀವು ಬೆಳಿಗ್ಗೆ ಎದ್ದ ತಕ್ಷಣ, ನಿಮ್ಮ ಸ್ನಾಯುಗಳನ್ನು ಸಕ್ರಿಯವಾಗಿ ಮತ್ತು ಕೀಲುಗಳು ಹೊಂದಿಕೊಳ್ಳಲು ಕೆಲವು ಸರಳ ಯೋಗ ಮತ್ತು ಸ್ಟ್ರೆಚಿಂಗ್‌ಗಳನ್ನು ಅಭ್ಯಾಸ ಮಾಡಿ. (Gustavo Fring )
(11 / 12)
ಸ್ನಾಯುವಿನ ದ್ರವ್ಯರಾಶಿಯನ್ನು ಕಾಪಾಡಿಕೊಳ್ಳಲು ಮತ್ತು ಚಯಾಪಚಯವನ್ನು ಸುಧಾರಿಸಲು ತೂಕದೊಂದಿಗೆ ನಿಯಮಿತ ಶಕ್ತಿ ತರಬೇತಿ ಅತ್ಯಗತ್ಯ. ಸ್ನಾಯುಗಳನ್ನು ಬಳಸದೇ ಇರುವುದರಿಂದ ಸ್ನಾಯುಗಳು ಶಕ್ತಿ ಕಳೆದುಕೊಳ್ಳುತ್ತವೆ. ಹಾಗಾಗಿ ಸ್ನಾಯುಗಳು ಸದೃಢವಾಗಿರುವಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. (Freepik)
ಇತರ ಗ್ಯಾಲರಿಗಳು