ಪದೇ ಪದೆ ಶೀತ, ಕೆಮ್ಮು ಕಾಡ್ತಿದೆಯಾ? ಸುಲಭ ಪರಿಹಾರಕ್ಕಾಗಿ ಈ 3 ಆಯುರ್ವೇದ ಮನೆಮದ್ದುಗಳನ್ನು ಪ್ರಯತ್ನಿಸಿ
- ಮನೆಯ ಅಡುಗೆ ಮನೆಯಲ್ಲಿರುವ ಕೆಲವೊಂದು ವಸ್ತುಗಳಿಂದಲೇ ನಿಮ್ಮ ಶೀತ ಮತ್ತು ಕೆಮ್ಮನ್ನು ಕಡಿಮೆ ಮಾಡಿಕೊಳ್ಳಬಹುದು. ಮನೆಯಲ್ಲೇ ಇರುವ 3 ರೀತಿಯ ಆಯುರ್ವೇದಗಳು ಯಾವುವು ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ಇಲ್ಲಿ ತಿಳಿಯಿರಿ.
- ಮನೆಯ ಅಡುಗೆ ಮನೆಯಲ್ಲಿರುವ ಕೆಲವೊಂದು ವಸ್ತುಗಳಿಂದಲೇ ನಿಮ್ಮ ಶೀತ ಮತ್ತು ಕೆಮ್ಮನ್ನು ಕಡಿಮೆ ಮಾಡಿಕೊಳ್ಳಬಹುದು. ಮನೆಯಲ್ಲೇ ಇರುವ 3 ರೀತಿಯ ಆಯುರ್ವೇದಗಳು ಯಾವುವು ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ಇಲ್ಲಿ ತಿಳಿಯಿರಿ.
(1 / 6)
ಬೇಸಿಗೆ ಕಳೆದು ಮಳೆಗಾಲ ಆರಂಭವಾಗಿದೆ. ಇಷ್ಟು ದಿನ ಬಿರು ಬಿಸಿಲನ್ನು ಎದುರಿಸಿದ್ದ ಜನರಿಗೆ ಇದೀಗ ಮಳೆಯ ಅನುಭವವಾಗುತ್ತಿದೆ. ಹವಾಮಾನ ಬದಲಾವಣೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಳೆಗಾಲದಲ್ಲಿ ನಿಮ್ಮ ಆರೋಗ್ಯ ಕಾಳಜಿ ವಹಿಸುವ ಅಗತ್ಯವಿದೆ.
(2 / 6)
ಹವಾಮಾನ ಬದಲಾದ ತಕ್ಷಣ ಶೀತ ಮತ್ತು ಕೆಮ್ಮು ಶುರುವಾಗುತ್ತದೆ. ಬ್ಯಾಕ್ಟೀರಿಯಾ ಅಥವಾ ವೈರಲ್ ಸೊಂಕು ಇಲ್ಲವೇ ಅಲರ್ಜಿಯಿಂದಲೂ ಕೆಮ್ಮು ಉಂಟಾಗುತ್ತದೆ. ಮಳೆಗಾಲದಲ್ಲಿ ರೋಗನಿರೋಧ ಶಕ್ತಿಯನ್ನು ಹೊಂದುವುದು ಬಹಳ ಮುಖ್ಯ. ರೋಗನಿರೋಧಕ ಶಕ್ತಿ ಇದ್ದರೆ ರೋಗದಿಂದ ಬೇಗ ಗುಣಮುಖರಾಗಬಹುದು. ಕೆಲವೊಂದು ಆಯುರ್ವೇದದ ವಸ್ತುಗಳಿಂದಲೇ ಶೀತ ಮತ್ತು ಕೆಮ್ಮು ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು.
(3 / 6)
ಶುಂಠಿ: ಅನೇಕ ಜನರು ಶುಂಠಿ ಟೀ ಕುಡಿಯುತ್ತಾರೆ. ಶುಂಠಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಶುಂಠಿಯಲ್ಲಿ ಉತ್ಕರ್ಷಣ ನಿರೋಧಕ ಗುಣಗಳಿವೆ. ಶುಂಠಿ ಚಹಾವನ್ನು ಕುಡಿಯುವುದರಿಂದ ಕೆಮ್ಮು ಮತ್ತು ಶೀತ ಗುಣವಾಗುತ್ತದೆ
(4 / 6)
ಅರಿಶಿನ: ಹವಾಮಾನ ಬದಲಾವಣೆಯಿಂದಾಗಿ ಸಾಮಾನ್ಯವಾಗಿ ಶೀತ ಮತ್ತು ಕೆಮ್ಮು ಬರುತ್ತದೆ. ಇಂತಹ ಸಂದರ್ಭದಲ್ಲಿ ನೀವು ಆರೋಗ್ಯವಾಗಿರಲು, ಈ ಸಾಮಾನ್ಯ ರೋಗಗಳಿಂದ ಪರಿಹಾರ ಪಡೆಯಲು ಅರಿಶಿನ ಮಿಶ್ರಿತ ಹಾಲವನ್ನು ಸೇವಿಸಬಹುದು. ಅರಿಶಿನದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿ ವೈರಲ್ ಗುಣಗಳಿವೆ. ಇದು ಸೋಂಕಿನಿಂದ ರಕ್ಷಿಸುತ್ತದೆ.
(5 / 6)
ಕರಿ ಮೆಣಸು: ಅಡುಗೆ ಮನೆಯಲ್ಲಿ ಇರುವ ಮೆಣಸನ್ನು ಆಹಾರದ ಹಲವು ಪದಾರ್ಥಗಳಲ್ಲಿ ಮಸಾಲೆಯಾಗಿ ಬಳಸಲಾಗುತ್ತದೆ. ಆದರೆ ಇದು ಮಸಾಲೆ ಮಾತ್ರವಲ್ಲದೆ, ಮಳೆಗಾಲದಲ್ಲಿ ಬರುವ ಶೀತ ಮತ್ತು ಕೆಮ್ಮಿಗೆ ಪರಿಹಾರವಾಗಿದೆ. ಶೀತ ಮತ್ತು ಕೆಮ್ಮು ಬಂದಾಗ ಕರಿಮೆಣಸನ್ನು ಜೇನುತುಪ್ಪದೊಂದಿಗೆ ಸೇವಿಸಿದರೆ ಈ ರೋಗಗಳಿಂದ ಬಿಡುಗಡೆ ಪಡೆಯಬಹುದು.
ಇತರ ಗ್ಯಾಲರಿಗಳು